ಏ.28ರಂದು ಕಡಲ ತಡಿಯ ಗೋವಾದಲ್ಲಿ ಕನ್ನಡ ಸಮಾವೇಶದ ಸಂಭ್ರಮ

ಪಣಜಿ: ಗೋವಾ ಕನ್ನಡ ಸಮಾಜವು ರಾಜ್ಯದ ಇತರ ಕನ್ನಡ ಸಂಘಗಳ ಸಹಯೋಗದೊಂದಿಗೆ ಏಪ್ರಿಲ್‌ 28ರಂದು ಕನ್ನಡ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಆಯೋಜಿಸಿದೆ.

ಇಲ್ಲಿನ ಕಲಾ ಅಕಾಡೆಮಿಯಲ್ಲಿ ನಡೆಯಲಿರುವ ಗೋವಾ ಕನ್ನಡ ಸಮ್ಮೇಳನವನ್ನು ಹಿರಿಯ ರಂಗಕರ್ಮಿ ಬಿ.ವಿ. ಕಾರಂತ ಅವರು ಉದ್ಘಾಟಿಸುವರು. ಈ ಸಮಾವೇಶವದಲ್ಲಿ ಹಲವಾರು ಹಿರಿಯ ಕನ್ನಡ ಸಾಹಿತಿಗಳೂ ಭಾಗವಹಿಸಲಿದ್ದಾರೆ ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಡಿ.ಎಂ. ಆಶ್ರಿತ್‌ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಸಂತರ ಕೊಡುಗೆ’ ಎಂಬ ವಿಷಯವಾಗಿ ಗೋಷ್ಠಿ, ಬಸವಣ್ಣ, ಅಕ್ಕಮಹಾದೇವಿ, ಶಿಶುನಾಳ ಷರೀಫರ ಸಾಹಿತ್ಯದ ಬಗ್ಗೆ ಚರ್ಚೆ ಮತ್ತು ಶರಣರ ಹಾಗೂ ಹರಿದಾಸರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ರಾಣಿ ಸತೀಶ್‌, ಗೋವಾ ರಾಜ್ಯದ ಮುಖ್ಯಮಂತ್ರಿ ಮನೋಹರ್‌ ಪೆಲಿಕರ್‌ ಮತ್ತಿತರ ಗಣ್ಯರು ಸಮಾವೇಶದಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+