ಮಹಾಲಿಂಗಪುರದಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ
ಮಹಾಲಿಂಗಪುರ: ರಾಜ್ಯ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ಈ ತಿಂಗಳ 23, 24ರಂದು ನಡೆಯಲಿದ್ದು ಮಹಾಲಿಂಗಪುರದಲ್ಲಿ ಸಮ್ಮೇಳನ ಸಿದ್ಧತೆಗಳು ಭರದಿಂದ ಸಾಗಿವೆ.
ಸಮೇಳನದ ಉದ್ಘಾಟನೆಗೆ ಆಂಧ್ರ ಪ್ರದೇಶದ ಪ್ರಸಿದ್ಧ ರೈತ ಚಳವಳಿ ನಾಯಕ ಹಾಗೂ ಹಾಡುಗಾರ ಗದ್ದರ್ ಆಗಮಿಸುವರು ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಎಲ್. ಎಚ್. ಕಲಾಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆಯಾದ ಜನರ ನೋವಿನ ಮೇಲೆ ಬೆಳಕು ಚೆಲ್ಲುವ ಸಾಹಿತ್ಯ ಗೋಷ್ಠಿಯಾಂದನ್ನು ಏರ್ಪಡಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ಕೃಷ್ಣಾ ಮೇಲ್ದಂಡೆ ಪುನರ್ವಸತಿ ಪುನರ್‌ನಿರ್ಮಾಣ ಆಯುಕ್ತ ಡಾ. ಶಿವಾನಂದ ಜಾಮದಾರ, ವಿಜಯ ಕರ್ನಾಟಕ ಬಾಗಲಕೋಟೆ ಬ್ಯೂರೋ ಮುಖ್ಯಸ್ಥ ಡಾ. ಬಂಡು ಕುಲಕರ್ಣಿ, ಹಂಪಿ ವಿವಿಯ ಡಾ. ಜೋಗನ್‌ಶಂಕರ, ಮುಳುಗಡೆ ಹೋರಾಟ ಸಮಿತಿಯ ಅಧ್ಯಕ್ಷ ವಾಸಣ್ಣ ದೇಸಾಯಿ ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications