Get Updates
Get notified of breaking news, exclusive insights, and must-see stories!

ಬದುಕನ್ನೇ ಸುಡುವ ಸಿಗರೇಟ್‌ಗೆ ಇಂದೇ ಗುಡ್ ಬೈ ಹೇಳಿಬಿಡಿ: ಈ ಚಟ ಬಿಡುವುದು ಹೇಗೆ?

ಇವತ್ತು ಮನುಷ್ಯರನ್ನು ಕಾಡುತ್ತಿರುವ ಕ್ಯಾನ್ಸರ್‌ಗೆ ತಂಬಾಕು ಸೇವಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ತಂಬಾಕು ಸೇವನೆ ಕ್ಯಾನ್ಸರ್ ಗೆ ಆಹ್ವಾನ ಎಂದು ಗೊತ್ತಿದ್ದರೂ ಕೂಡ ಯುವ ಸಮುದಾಯ ಅದರತ್ತ ಹೆಚ್ಚು ಒಲವು ತೋರುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಸೇವನೆ ಮಾಡುತ್ತಿರುವುದು ನಮ್ಮ ದೇಶದ ದುರಂತವೆಂದರೆ ತಪ್ಪಾಗಲಾರದು.

ಇಲ್ಲಿ ತಂಬಾಕನ್ನು ಬೇರೆ ಬೇರೆ ವಿಧಾನಗಳಲ್ಲಿ ಸೇವಿಸಲಾಗುತ್ತಿದೆ. ಆದರೆ ಯುವ ಸಮುದಾಯ ಸಿಗರೇಟ್ ಮೂಲಕ ಕ್ಯಾನ್ಸರ್ ಕಾರಿ ಅಂಶವನ್ನು ದೇಹದೊಳಕ್ಕೆ ಎಳೆದುಕೊಳ್ಳುತ್ತಿದೆ. ಇದೊಂದು ರೀತಿಯಲ್ಲಿ ಹಣ ನೀಡಿ ಕಾಯಿಲೆ ತಂದುಕೊಳ್ಳುವ ಕಾರ್ಯಕ್ರಮವಾಗಿದೆ. ಬಹಳಷ್ಟು ಜನರಿಗೆ ಸಿಗರೇಟ್ ಸೇದುವುದೊಂದು ಖಯಾಲಿ ಆಗಿ ಬಿಟ್ಟಿದೆ. ಇದಕ್ಕಾಗಿ ತಮ್ಮ ಸಂಪಾದನೆಯ ಹೆಚ್ಚಿನ ಹಣವನ್ನು ಸುರಿಯುತ್ತಿದ್ದಾರೆ.

World No-Tobacco Day Say Goodbye To The Cigarette That Burns Your Life

ತಂಬಾಕಿನಿಂದ ತಯಾರಾಗುವ ಸಿಗರೇಟ್ ಈಗಾಗಲೇ ಬಹಳಷ್ಟು ಜನರ ಬದುಕನ್ನು ಆರಿಸಿದೆ. ಆದರೆ ಅದರ ಅರಿವಿಲ್ಲದೆ ಜನ ಸಿಗರೇಟ್ ಸೇವನೆ ಮಾಡುತ್ತಿದ್ದಾರೆ. ಇದರ ಬೆಲೆ ಗಗನಕ್ಕೇರಿದರೂ ಯಾವುದೇ ರೀತಿಯ ಆತಂಕಪಡದೆ ದುಪ್ಪಟ್ಟು ಹಣ ನೀಡಿಯಾದರೂ ಸೇವನೆ ಮಾಡುತ್ತಾರೆ. ಇದರ ತಡೆಗೆ ಮತ್ತು ಸಿಗರೇಟ್ ಸೇವಿಸುವವರಲ್ಲಿ ಅರಿವು ಮೂಡಿಸಿ ಅದರಿಂದ ಹೊರ ಬರುವಂತೆ ಮಾಡುವ ಕಾರ್ಯಕ್ರಮಗಳು ಪ್ರತಿದಿನವೂ ನಡೆಯುತ್ತಿದ್ದರೂ ಅದರತ್ತ ಯಾರೂ ಗಮನಹರಿಸಿದಂತೆ ಕಾಣಿಸುತ್ತಿಲ್ಲ.

ಮೇ 31ನ್ನು ವಿಶ್ವ ತಂಬಾಕು ರಹಿತ ದಿನ

ಪ್ರತಿವರ್ಷ ಮೇ 31ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಇದು ಕೇವಲ ಆಚರಣೆಗಷ್ಟೇ ಸೀಮಿತವಾಗುತ್ತಿದೆ. ಅರಿವು ಮೂಡಿಸುವ ಕಾರ್ಯಗಳು ನಡೆಯುತ್ತಿದ್ದರೂ ಸಿಗರೇಟ್ ವ್ಯಸನಿಗಳು ಎಷ್ಟರ ಮಟ್ಟಿಗೆ ಇದರಿಂದ ಮುಕ್ತರಾಗಿದ್ದಾರೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಒಂದೆರಡು ದಿನಗಳ ಕಾಲ ಸಿಗರೇಟ್ ಬಿಡುವ ಜನ ಮತ್ತೆ ಅದೇ ಚಟಕ್ಕೆ ಅಂಟಿಕೊಳ್ಳುತ್ತಾರೆ. ಈ ಚಟದಿಂದ ಹೊರ ಬರುವುದು ಅಷ್ಟು ಸುಲಭವಾಗಿ ಉಳಿದಿಲ್ಲ.

World No-Tobacco Day Say Goodbye To The Cigarette That Burns Your Life

ಸಿಗರೇಟ್ ಸೇವನೆಯ ಚಟಗಳು ಮೊದ ಮೊದಲಿಗೆ ಖುಷಿಗಾಗಿಯೇ ಆರಂಭವಾಗುತ್ತವೆ. ಮೊದಲಿಗೆ ನಾವು ಅವುಗಳನ್ನು ಸೇವನೆ ಮಾಡುತ್ತೇವೆ. ತದನಂತರ ಅದು ನಮ್ಮನ್ನು ಸೇವನೆ ಮಾಡುವಂತೆ ಪ್ರೇರೇಪಿಸುತ್ತದೆ. ಮುಂದುವರೆದ ಕಾಲಘಟ್ಟದಲ್ಲಿ ವಿದೇಶಿಯರಂತೆ ನಮ್ಮಲ್ಲಿಯೂ ಹೆಣ್ಣು ಮಕ್ಕಳು ಸಿಗರೇಟ್ ಸೇವನೆಗೆ ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಿಗರೇಟ್ ಹೊಗೆ ಶರೀರದೊಳಕ್ಕೆ ಹೋದರೆ ಅದು ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂಬುದನ್ನು ಮನಗಾಣಬೇಕಾಗಿದೆ.

ಸಿಗರೇಟ್‌ನಿಂದ ಯಾವುದೇ ಪ್ರಯೋಜನವಿಲ್ಲ

ಸಿಗರೇಟ್ ಸೇವನೆಯಿಂದ ಶರೀರಕ್ಕಾಗಲೀ, ಆರೋಗ್ಯಕ್ಕಾಗಲೀ ಯಾವುದೇ ಪ್ರಯೋಜನವಿಲ್ಲ. ಆದರೆ ಇದರಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ದೊಡ್ಡ ಪಟ್ಟಿಯೇ ಇದೆ. ಇದು ಕ್ಯಾನ್ಸರ್ ತರುವುದರೊಂದಿಗೆ ಉಸಿರಾಟಕ್ಕೆ ಅಡಚಣೆ, ಕೆಮ್ಮು, ಕಫ, ಶ್ವಾಸಕೋಸದ ತೊಂದರೆ, ದೈಹಿಕ ಅಸಮರ್ಥತೆ ಹೀಗೆ ಹತ್ತು ಹಲವು ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ.

World No-Tobacco Day Say Goodbye To The Cigarette That Burns Your Life

ಸಿಗರೇಟ್ ಸೇದುವುದರಿಂದ ತಮ್ಮ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ಆದರೆ ರಿಲ್ಯಾಕ್ಸ್ ಪಡೆಯುವ ಸಲುವಾಗಿ ಮೇಲಿಂದ ಮೇಲೆ ಸಿಗರೇಟ್ ಸೇದಲು ಆರಂಭಿಸುವ ವ್ಯಕ್ತಿ ಕಾಯಿಲೆಯ ಗೂಡಾಗಿ ಸಾವನ್ನು ಎಳೆದುಕೊಳ್ಳುತ್ತಾನೆ. ಯೌವನದ ದಿನಗಳಲ್ಲಿ ಎಲ್ಲವನ್ನೂ ಜಯಿಸುವ ಸಾಮರ್ಥ್ಯವಿರುತ್ತದೆ. ಹೀಗಾಗಿ ಅದರ ಪರಿಣಾಮಗಳು ಗೊತ್ತಾಗದೆ ಹೋಗಬಹುದು. ಆದರೆ ಒಮ್ಮೆ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಿದರೆ ಸಿಗರೇಟ್ನ ದುಷ್ಪರಿಣಾಮ ತಮ್ಮ ಅರಿವಿಗೆ ಬರುತ್ತದೆ.

ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ

ಸಿಗರೇಟ್ ನ ಚಮತ್ಕಾರ ಗೊತ್ತಾದ ಬಳಿಕ ಅದನ್ನು ಬಿಟ್ಟು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜಾಣತನ. ಹೀಗೆ ಸಿಗರೇಟ್ ಸೇವನೆಯಿಂದ ದೂರ ಉಳಿದವರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ. ಅವರ ಸಾಲಿಗೆ ಇನ್ನಷ್ಟು ಮಂದಿ ಸೇರಿಕೊಂಡರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಇನ್ನು ಮುಂದೆ ಸಿಗರೇಟ್ ಸೇದಲ್ಲ ಎಂದು ದೂರ ಸರಿದವರು ಇಲ್ಲದಿಲ್ಲ. ಆದರೆ ಅಂತಹ ವ್ಯಸನಿಗಳು ಅದರಿಂದ ಹೊರಬೇಕಾದರೆ ಹಲವು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕೆಲವರು ಮಾನಸಿಕವಾಗಿಯೂ ಕುಗ್ಗುವ ಸಾಧ್ಯತೆ ಇರುತ್ತದೆ.

ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಇವತ್ತಿನ ದಿನಗಳಲ್ಲಿ ಬೀಡಿ, ಸಿಗರೇಟ್ ದುಬಾರಿಯಾಗಿದೆ. ಅದನ್ನು ಬಿಟ್ಟರೆ ಆರೋಗ್ಯ ಮಾತ್ರವಲ್ಲ, ಆರ್ಥಿಕವಾಗಿಯೂ ಸದೃಢರಾಗಲು ಸಾಧ್ಯವಿದೆ. ದುಶ್ಚಟಗಳನ್ನು ಕಲಿಯುವುದು ಸುಲಭ ಆದರೆ ಅದನ್ನು ತ್ಯಜಿಸುವುದು ಕಷ್ಟದ ಕೆಲಸ. ಆದರೆ ಗಟ್ಟಿ ಮನಸ್ಸು ಮಾಡಿ ಅದಕ್ಕೆ ತಿಲಾಂಜಲಿ ಹೇಳುವುದು ಇಂದಿನ ಅನಿವಾರ್ಯತೆಯಾಗಿದೆ. ಬಹಳಷ್ಟು ಮಂದಿ ಇವತ್ತು ಸಿಗರೇಟು, ಬೀಡಿ ಸೇವನೆ ಬಿಟ್ಟು ಉತ್ತಮ ಆರೋಗ್ಯ ಕಂಡು ಕೊಂಡಿದ್ದಾರೆ.

ಸಿಗರೇಟ್ ಸೇದದೆ ಬದುಕುವುದನ್ನು ಕಲಿಯಿರಿ

ತಜ್ಞರು ಹೇಳುವ ಪ್ರಕಾರ ಧೂಮಪಾನ ಮಾಡುವುದನ್ನು ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಬೇಕಂತೆ. ಇದರಿಂದ ಹೃದಯದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲವಂತೆ. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಇ ವಿಟಮಿನ್ ನಿಂದ ಹೃದಯಕ್ಕೆ ಯಾವುದೇ ಸಮಸ್ಯೆ ಉಂಟಾಗದು. ರಕ್ತ ಪ್ರಸಾರ ಸುಗಮವಾಗಿರುತ್ತದೆ ಎಂದು ಅಧ್ಯಯನ ಸಂದರ್ಭದಲ್ಲಿ ಗಮನಿಸಿದ್ದಾರೆ. ಅಲ್ಲದೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶೇ. 19ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಅದು ಏನೇ ಇರಲಿ ಸಿಗರೇಟ್ ಸೇವನೆಯನ್ನು ಬಿಟ್ಟೇ ಬಿಡುತ್ತೇನೆ ಎಂಬ ದೃಢ ಮನಸ್ಸು ಮಾಡಿ. ಇದು ಮೊದಲಿಗೆ ಕಷ್ಟವಾಗಬಹುದು. ಆದರೆ ಇವತ್ತು ಅನುಭವಿಸುವ ಕಷ್ಟಗಳು ನಾಳಿನ ಉತ್ತಮ ಬದುಕಿಗೆ ಹಾದಿ ಅಂದುಕೊಳ್ಳಿ. ದೈಹಿಕ ಸಮಸ್ಯೆಗಳು ಕಾಣಿಸಿದರೆ ವೈದ್ಯರನ್ನು ಕಂಡು ಅವರು ನೀಡುವ ಔಷಧಿ ಸಲಹೆಗಳನ್ನು ಪಾಲಿಸಿ. ಸಿಗರೇಟ್ ನಿಂದ ದೂರವಿದ್ದು ಬದುಕುವುದನ್ನು ಕಲಿಯಿರಿ ಇದರಿಂದ ನೀವು ಮಾತ್ರವಲ್ಲ ನಿಮ್ಮನ್ನು ಅವಲಂಭಿಸಿದವರು ಸುಖವಾಗಿರಲು ಸಾಧ್ಯವಾಗಲಿದೆ ಎನ್ನುವುದನ್ನು ಮರೆಯದಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+