Winter Health Tips: ಚಳಿಗಾಲದಲ್ಲಿ ಶೀತ, ಕೆಮ್ಮು, ಜ್ವರ ತಪ್ಪಿಸಲು ಸಿಂಪಲ್‌ ಟಿಪ್ಸ್‌ ಇಲ್ಲಿವೆ!

ಚಳಿ..ಚಳಿ ತಾಳೆನು ಈ ಚಳಿಯ ಎನ್ನುವಂತಿದೆ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಚಳಿ. ಈ ಚಳಿಗಾಲದಲ್ಲಿ ಹಲವರಲ್ಲಿ ಶೀತ ಕೆಮ್ಮು, ಕಫ ಹಾಗೂ ಜ್ವರ ಏಕಾಏಕಿ ಹೆಚ್ಚಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಮಳೆ ನಿಧಾನವಾಗಿ ಕಡಿಮೆಯಾಗ್ತಿದೆ. ಚಳಿ ಜಾಸ್ತಿ ಆಗ್ತಿದೆ. ಚಳಿ ಇನ್ನೂ ಎರಡು ವಾರದ ವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಸಂಕ್ರಾಂತಿ ಸಮಯದಲ್ಲಿ ಚಳಿ ಇನ್ನೂ ಜಾಸ್ತಿ ಆಗುವ ಸಾಧ್ಯತೆ ಇದೆ. ಈ ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ತುಂಬಾನೇ ಮುಖ್ಯ. ಚಳಿಗಾಲದಲ್ಲಿ ಬರುವ ಕೆಮ್ಮು ವಾರಗಟ್ಟಲೆ ಕಿರಿಕಿರಿ ಕೊಡುತ್ತೆ. ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುವುದು ಸಹ ಇದೆ. ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ಆರೋಗ್ಯ ಸಮಸ್ಯೆ ಆಗದೆ ಇರಲು ಎನು ಮಾಡಬೇಕು ಎನ್ನುವ ಸಿಂಪಲ್‌ ಟಿಪ್ಸ್‌ ಇಲ್ಲಿದೆ.

ರಾಜ್ಯದಾದ್ಯಂತ ಮೈಕೊರೆಯುವ ಚಳಿ ಇದೆ. ಚಳಿಯಿಂದ ವಯಸ್ಕರಲ್ಲಿ ಹಾಗೂ ಮಕ್ಕಳಲ್ಲೂ ಆರೋಗ್ಯ ಸಮಸ್ಯೆ ಆಗುತ್ತಿದೆ. ಚಳಿ ಜೋರಾಗಿ ಇರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೆಚ್ಚು ಕಾಳಜಿ ವಹಿಸುವುದು ಒಳ್ಳೆಯದು.

Winter Health Tips simple ways to prevent cold cough and fever

ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಿ: ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ನೀವು ಮಾಡಬಹುದಾದ ಸಿಂಪಲ್‌ ಹಾಗೂ ಮೊದಲ ಕೆಲಸವೆಂದರೆ ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಳ್ಳುವುದು. ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಶೀತ, ಕೆಮ್ಮು ಹಾಗೂ ಕಫ ಆಗುವುದನ್ನು ಸಾಧ್ಯವಾದಷ್ಟು ತಪ್ಪಿಸಬಹುದು. ಬೆಚ್ಚಗಿನ ಬಟ್ಟೆ ಹಾಕಿಕೊಳ್ಳುವುದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಆರೋಗ್ಯ ಸಮಸ್ಯೆ ಬರುವುದು ಕಡಿಮೆ ಆಗುತ್ತೆ.

ಬಿಸಿನೀರು ಕುಡಿಯಿರಿ: ಚಳಿಗಾಲದಲ್ಲಿ ಕೋಲ್ಡ್‌ ವಾಟರ್‌ ಅಥವಾ ಕೋಲ್ಡ್‌ ಜ್ಯೂಸ್‌ ಸೇರಿದಂತೆ ಕೋಲ್ಡ್‌ ಆಗಿರುವುದನ್ನು ಕುಡಿಯುವುದು ತಪ್ಪಿಸಿ. ಇಲ್ಲ ಐಸ್‌ಕ್ರೀಮ್‌ ಅಥವಾ ತಂಪಾಗಿರುವ ವಸ್ತುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಅದರಲ್ಲೂ ಸಂಜೆಯ ನಂತರ ಐಸ್‌ಕ್ರೀಮ್‌ ಸೇರಿದಂತೆ ಯಾವುದೇ ಕೋಲ್ಡ್‌ ಐಟಂ ಸೇವಿಸಬೇಡಿ.

Winter Health Tips simple ways to prevent cold cough and fever

ಒಳ್ಳೆಯ ನಿದ್ದೆ ಮಾಡಿ: ದೇಹದ ಆರೋಗ್ಯಕ್ಕೆ 7ರಿಂದ 8 ಗಂಟೆ ನಿದ್ದೆ ಮಾಡುವುದು ಒಳ್ಳೆಯದು. ನಿಮ್ಮ ದೇಹದಲ್ಲಿ ಆರೋಗ್ಯದ ದೃಷ್ಟಿಯಿಂದ ಚೆನ್ನಾಗಿ ನಿದ್ದೆ ಮಾಡಿ. ಚಳಿಗಾಲದಲ್ಲಿ ನಿದ್ದೆ ಸಮಯವನ್ನು ಕಡಿಮೆ ಮಾಡಬೇಡಿ. ಚಹಾ, ಸೂಪ್ ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯುತ್ತಿರಿ. ಸಾಧ್ಯವಾದಷ್ಟು ಈ ಸಮಯದಲ್ಲಿ ಬಿಸಿನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ವಾಕಿಂಗ್, ಜಾಗಿಂಗ್ ಅಥವಾ ಮನೆಯಲ್ಲೇ ಸಣ್ಣ ಸಣ್ಣ ವ್ಯಾಯಾಮ ಮಾಡಿ.

ಬೆಚ್ಚಗಿನ ಊಟ ಮಾಡಿ: ಚಳಿಗಾಲದಲ್ಲಿ ಆರೋಗ್ಯ ಕೆಡುವುದಕ್ಕೆ ಮುಖ್ಯವಾದ ಕಾರಣಗಳಲ್ಲಿ ಆಹಾರವೂ ಒಂದು. ಚಳಿಗಾಲದಲ್ಲಿ ತಣ್ಣಗಿನ ಫೂಡ್‌ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಅಗತ್ಯಕ್ಕೆ ಅನುಗುಣವಾಗಿ ಅಗುಡೆ ಮಾಡಿಕೊಂಡು ಬಿಸಿ ಬಿಸಿ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆಹಾರದಲ್ಲಿ ಸೊಪ್ಪು - ತರಕಾರಿ ಹಾಗೂ ಕಡಿಮೆ ಕೊಬ್ಬಿನ ಅಂಶಗಳು ಇರುವಂತಹ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಿ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಹೆಚ್ಚಾಗುವಂತೆ ನೋಡಿಕೊಳ್ಳಿ. ಸೂರ್ಯನ ಬೆಳಕು ದೇಹದ ಮೇಲೆ ಬೀಳಲಿ. ಕನಿಷ್ಠ 10ರಿಂದ 15 ನಿಮಿಷ ಸೂರ್ಯ ಬೆಳಕು ಬೀಳುವಂತೆ ನಿಂತುಕೊಳ್ಳಿ.

ಸೋಪ್‌ನಿಂದ ಕೈ ತೊಳೆಯಿರಿ: ಕೋವಿ* ಬಂದ ಮೇಲೆ ಈ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ನೀವು ಪಬ್ಲಿಕ್‌ ಟ್ರಾನ್ಸ್‌ಪೋರ್ಟ್‌ ಇಲ್ಲ. ಜನ ಜಾಸ್ತಿ ಇರುವ ಜಾಗಗಳಲ್ಲಿ ಹೋಗಿ ಬಂದ ಮೇಲೆ ಸೋಪಿನಿಂದ ಮುಖ - ಕೈ ಮತ್ತು ಕಾಲುಗಳನ್ನು ತೊಳೆದುಕೊಳ್ಳಿ. ಕೆಮ್ಮಿದ ಅಥವಾ ಸೀನಿದ ನಂತರ ನಿಮ್ಮ ಕೈಗಳನ್ನು ಸೋಪ್‌ ಅಥವಾ ಬಿಸಿನೀರಿನಿಂದ ತೊಳೆದುಕೊಳ್ಳಿ. ಮೆಟ್ರೋ, ಬಸ್‌ಗಳಲ್ಲಿ ಅಥವಾ ರೈಲು ಪ್ರಯಾಣ ಮಾಡುವುದಿದ್ದರೆ ಸಾಧ್ಯವಾದಷ್ಟು ಮಾಸ್ಕ್‌ ಧರಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+