ನಾವೇಕೆ ಜೀವನದಲ್ಲಿ ದೈವ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು? ಉತ್ತರ ಇಲ್ಲಿದೆ..!
ದೇವರ ಮೇಲೆ ನಂಬಿಕೆ ಇಡುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ದೇವರ ಬಗ್ಗೆ ನಂಬಿಕೆಯಿಡುವುದು ಅಥವಾ ಶ್ರದ್ಧೆ ತೋರುವುದರಿಂದ ಒಂದಷ್ಟು ಪ್ರಯೋಜನ ಇರುವುದಂತು ನಿಜ. ಹಾಗಾದರೆ ದೈವ ಶ್ರದ್ಧೆಯಿಂದ ನಮಗೇನು ಪ್ರಯೋಜನ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಆ ಪ್ರಶ್ನೆಗೆ ಅಧ್ಯಾತ್ಮದಲ್ಲಿ ಏನು ಉತ್ತರವಿದೆ ಗೊತ್ತಾ.?
ಹಾಗೆನೋಡಿದರೆ ನಮ್ಮ ಮಧ್ಯೆ ಆಸ್ತಿಕ ಮತ್ತು ನಾಸ್ತಿಕ ಎಂಬ ಎರಡು ವರ್ಗವಿದೆ. ಇಲ್ಲಿ ಆಸ್ತಿಕರು ದೇವರ ಮೇಲೆ ನಂಬಿಕೆ ಇರದ ನಾಸ್ತಿಕರಿಗಿಂತ ಹೆಚ್ಚಿನ ಅನುಕೂಲ ಪಡೆಯುತ್ತಾರಂತೆ. ದೇವರ ಮೇಲೆ ನಂಬಿಕೆಯಿಡುವುದು ಅಥವಾ ನಂಬಿಕೆಯಿಡದೇ ಇರುವುದು ಇದು ಆಯಾಯ ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿದೆ.

ನಮ್ಮಲ್ಲಿ ದೇವರ ಬಗ್ಗೆ ನಂಬಿಕೆ ಇಲ್ಲದೆ ಹೋದರೆ ಏನಾಗುತ್ತೆ ಎಂಬ ಪ್ರಶ್ನೆಗಿಂತ ದೇವರ ಮೇಲಿನ ನಂಬಿಕೆಯಿಂದ ನಮಗೆ ಎಂತಹ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳುವುದು ಮಾನಸಿಕವಾಗಿ ನೆಮ್ಮದಿಯಾಗಿ ಬದುಕಲು ಸಹಕಾರಿಯಾಗುತ್ತದೆ.
ಮನಸ್ಸಿನ ಚಂಚಲತೆ, ಸಂಕಟ ನಿಯಂತ್ರಣ
ದೇವರಲ್ಲಿ ಗಾಢವಾದ ಹಾಗೂ ಪ್ರಾಮಾಣಿಕವಾದ ನಂಬಿಕೆಯನ್ನು ನಾವು ಬೆಳೆಸಿಕೊಂಡಿದ್ದೇ ಆದರೆ ನಮ್ಮ ಮನಸ್ಸನ್ನು ನಿಯಂತ್ರಿಸಲು ಏಕಾಗ್ರತೆ ಬೆಳೆಸಿಕೊಳ್ಳಲು ಸಮರ್ಥವಾದ ಶಕ್ತಿ ಒದಗುತ್ತದೆಯಲ್ಲದೆ ಭಕ್ತಿಯ ನಿರಂತರವಾದ ಶಕ್ತಿ ದೊರಕುವುದರೊಂದಿಗೆ ಭಕ್ತಿಯ ನಿರಂತರವಾದ ಆಚರಣೆಯಿಂದ ದೇವರ ಬಗೆಗಿನ ಉತ್ಸಾಹವು ಹೆಚ್ಚುತ್ತದೆ.
ಮನಸ್ಸಿನ ಚಂಚಲತೆ ಸಂಕಟ ಆತಂಕಗಳು ಎದುರಾಗುವಾಗ ದೇವರ ಧ್ಯಾನದಲ್ಲಿ ತೊಡಗಿ ಕೆಲವೊಮ್ಮೆ ಎಲ್ಲಾ ಉದ್ವೇಗ, ನೋವುಗಳಿಂದ ಆಶ್ಚರ್ಯಕರವಾಗಿ ಪಾರಾಗಬಹುದು. ಶ್ರೀ ರಾಮಕೃಷ್ಣರು ಉಪದೇಶವೊಂದರಲ್ಲಿ ದೈವಶ್ರದ್ಧೆಯುಳ್ಳವರಿಗೆ ಎಂತಹ ಅನುಕೂಲವಿದೆ ಎಂಬುದನ್ನು ಹೀಗೆ ವಿವರಿಸುತ್ತಾರೆ.

ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯ
ಹುಲಿ ಇತರ ಪ್ರಾಣಿಗಳನ್ನು ಕೊಂದು ತಿನ್ನುವಂತೆ ಭಗವದಾಸಕ್ತಿಯ ಹುಲಿ ಕಾಮ, ಕ್ರೋಧ ಮತ್ತಿತರ ರಾಗಭಾವಗಳನ್ನು ನುಂಗಿ ನೊಣೆಯುತ್ತದೆ. ದೈವೀತತ್ಪರತೆ ಹೃದಯದಲ್ಲಿ ಗಾಢವಾದಷ್ಟೂ ಕಾಮ ಮತ್ತಿತರ ಅರಿಷಡ್ ವರ್ಗಗಳು ಮಾಯವಾಗುತ್ತವೆ. ಬೃಂದಾವನದ ಗೋಪಿಯರಿಗೆ ಶ್ರೀಕೃಷ್ಣನನ್ನು ಕುರಿತು ಈ ಬಗೆಯ ಗಾಢವಾದ ಅನುರಕ್ತಿ ಇತ್ತು.
ನಮ್ಮಲ್ಲಿ ಯಾವಾಗ ಕಾಮಕ್ರೋಧಗಳು ಇಲ್ಲವಾಗುತ್ತವೆಯೋ ಆಗ ಮನಸ್ಸು ಪರಿಶುದ್ಧ ವಾಗುತ್ತದೆ. ಪರಿಶುದ್ಧವಾದ ಮನಸು ಪರಿಶುದ್ಧವಾದ ವಿಚಾರಗಳನ್ನೇ ಯೋಚಿಸುವುದರಿಂದ ಅಲ್ಲದೆ ಚಂಚಲವಾಗಿ ಪ್ರವಹಿಸುವ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಭಗದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದೇನು?
ದೇವರಲ್ಲಿ ನಂಬಿಕೆ ಯಿಲ್ಲದವರು ಈ ವಿಚಾರದಲ್ಲಿ ಕಷ್ಟಕರವಾದ ಹಾದಿಯನ್ನು ತುಳಿಯಬೇಕಾಗುತ್ತದೆ. ಏಕೆಂದರೆ ಅವರು ತಮ್ಮ ಅಪನಂಬಿಕೆಗಳನ್ನು ಕಳೆದುಕೊಳ್ಳದ ಹೊರತು ದೈವಶ್ರದ್ಧೆಯನ್ನು ಪಡೆಯಲಾರರು.
ಶ್ರೀ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿರುವ ಉಪದೇಶ ಎಷ್ಟು ಮಹತ್ವವಾಗಿದೆ ಎಂಬುದು ಅರಿವಿಗೆ ಬರುತ್ತದೆ. ಕೃಷ್ಣ ಹೇಳುತ್ತಾನೆ ನನ್ನ ಯಾವುದೇ ಭಕ್ತ ಜಿತೇಂದ್ರಿಯನಲ್ಲದಿದ್ದರೂ, ವಿಷಯಾಕರ್ಷಣೆಗಳಿಂದ ಪೀಡಿತನಾಗಿದ್ದರೂ, ನಿಜವಾದ ಹಾಗೂ ದೃಢವಾದ ಭಕ್ತಿಯೊಂದಿತ್ತು ಎಂದಾದರೆ ಆತ ಸಾಮಾನ್ಯವಾಗಿ ತನ್ನ ಹಾದಿಯಿಂದ ವಿಚಲಿತನಾಗುವುದಿಲ್ಲ.
ದೈವಶ್ರದ್ಧೆಯಿಂದ ಮನಸ್ಸಿನ ಶುದ್ಧೀಕರಣ
ದೇವರ ಮೇಲೆ ನಂಬಿಕೆಯುಳ್ಳವರ ಮನಸ್ಸು ತನಗೆ ತಾನೇ ಶುದ್ಧೀಕರಣಕ್ಕೆ ಒಳಗಾಗುವ ಪ್ರಕ್ರಿಯೆ ತೀರಾ ಸರಳವಾದದ್ದು, ಅಂತಹವರು ದೈವೀಪರವಾದ ಪ್ರೇಮವನ್ನು ಬೆಳೆಸಿಕೊಂಡು ಹಾಗೆಯೇ ಅವರ ಮನಸ್ಸು ಕೇವಲ ಭಗವಂತನ ಮೇಲೆ ಮಾತ್ರ ನಿಲ್ಲುತ್ತದೆ. ಏಕೆಂದರೆ ನಮಗೆ ಯಾವುದು ಪ್ರಿಯವೋ ಅದರ ಮೇಲೆ ನಮ್ಮ ಮನಸ್ಸು ನಿಲ್ಲುತ್ತದೆ ಎನ್ನುವುದು ತಿಳಿದ ವಿಚಾರವೇ.
ಹಾಗೆಯೇ ಯಾವುದರ ಮೇಲೆ ಮನಸ್ಸು ನಿಲ್ಲುತ್ತದೆಯೋ ಅದರ ಗುಣಗಳನ್ನು ಮನಸ್ಸು ಒಳಗೊಂಡಿರುತ್ತದೆ. ಆದ ಕಾರಣ ಭಗವಂತನ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಿದರೆ, ನಾವು ದೈವೀ ಸಂಪತ್ತಿಗೆ ಅಧಿಕಾರಿ ಗಳಾಗುತ್ತೇವೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ.
ದೈವ ನಂಬಿಕೆಯಿಂದ ಪ್ರಯೋಜನವೇನು?
ದೇವರಲ್ಲಿ ನಂಬಿಕೆ ಹೆಚ್ಚಾಗುತ್ತಿದ್ದಂತೆಯೇ ಚಿತ್ತ ಶುದ್ಧಿ, ಇಂದ್ರಿಯ ನಿಗ್ರಹ, ಕ್ರೋಧರಾಹಿತ್ಯ ನೆಮ್ಮದಿ, ನಿಶ್ಚಲತೆ ಮುಂತಾದವುಗಳನ್ನು ಗಳಿಸಿಕೊಳ್ಳುವಲ್ಲಿಯೂ ನಮಗೆ ಸಾಧ್ಯವಾಗುತ್ತದೆ. ಒಬ್ಬ ಮನುಷ್ಯನ ಬದುಕಿನಲ್ಲಿ ಶುದ್ಧ ಮನಸ್ಸು ಮತ್ತು ನೆಮ್ಮದಿ ರಾರಾಜಿಸಲು ಶುರುವಾಗುತ್ತದೆಯೋ ಆತ ಸುಖಿಯಾಗಿದ್ದಾನೆ. ಆರೋಗ್ಯವಾಗಿದ್ದಾನೆ ಎಂದರ್ಥ.
ನಮ್ಮೆಲ್ಲರ ಬದುಕಿನಲ್ಲಿ ಆರೋಗ್ಯ ಮತ್ತು ನೆಮ್ಮದಿ ಇಲ್ಲದೆ ಹೋದರೆ ಆತ ಎಷ್ಟೇ ಶ್ರೀಮಂತನಾದರೂ ಖುಷಿಯಾಗಿ ತನ್ನ ಜೀವನವನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮನಸ್ಸು ಆದಷ್ಟು ಶಾಂತಚಿತ್ತವಾಗ ಬೇಕಾದರೆ ದೈವತ್ವದ ಕಡೆಗೆ ಒಲವು ತೋರಬೇಕು. ಆ ಮೂಲಕ ದೈವಶ್ರದ್ಧೆ ಬೆಳೆಸಿಕೊಳ್ಳಬೇಕು.
-
ಮಾರ್ನಿಂಗ್ ವಾಕ್ vs ಈವಿನಿಂಗ್ ವಾಕ್: ಯಾವುದು ಉತ್ತಮ? -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications