Get Updates
Get notified of breaking news, exclusive insights, and must-see stories!

Hibiscus Uses: ಬೇಸಿಗೆಯಲ್ಲಿ ದಾಸವಾಳದಿಂದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಈಗಿನಿಂದಲೇ ಬೇಸಿಗೆಯ ತೀವ್ರತೆ ಹೆಚ್ಚಾಗಿದ್ದು, ಹೊರಗೆ ಹೋದರೆ ನೆತ್ತಿ ಸುಡುತ್ತದೆ. ಅಷ್ಟೇ ಅಲ್ಲದೆ ಆರೋಗ್ಯದಲ್ಲಿ ಏರುಪೇರಾಗುವುದು, ವಿಪರೀತ ಸುಸ್ತು, ದೇಹದಲ್ಲಿ ಉಷ್ಣಾಂಶ ಹೆಚ್ಚುವುದು ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ನಮ್ಮ ಸುತ್ತಮುತ್ತಲಲ್ಲಿ ಸಿನಿಸರ್ಗದಲ್ಲಿಯೇ ಇರುವ ಗಿಡ, ಮರ, ಹಣ್ಣು, ಕಾಯಿಗಳನ್ನು ಬಳಸಿಕೊಂಡು ಬೇಸಿಗೆಯಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

ನಮ್ಮ ಹಿತ್ತಿಲು ಸೇರಿದಂತೆ ಸುತ್ತಮುತ್ತ ಇರುವ ಹೂ ಗಿಡಗಳು, ತರಕಾರಿಗಳು, ಹಣ್ಣುಗಳು ಹೀಗೆ ಎಲ್ಲವೂ ತಮ್ಮದೇ ಆದ ಆರೋಗ್ಯಕಾರಿ ಗುಣಗಳನ್ನು ಹೊಂದಿದ್ದು ಅವುಗಳ ಉಪಯೋಗವನ್ನು ಅರಿತು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕಷ್ಟೆ. ಹಿಂದೆ ಹಳ್ಳಿಗಳಲ್ಲಿ ಮನೆ ಬಳಿಯಿರುವ ಗಿಡಮೂಲಿಕೆಗಳನ್ನು ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಅವರಿಗೆ ಯಾವ ಕಾಲಕ್ಕೆ ಯಾವುದನ್ನು ಬಳಸಿಕೊಳ್ಳಬೇಕು ಎಂಬುದು ಗೊತ್ತಿತ್ತು ಹೀಗಾಗಿ ಅವರು ಹೂವಿನ ಗಿಡದಿಂದ ಆರಂಭವಾಗಿ ಹಣ್ಣಿನ ಮರಗಳ ತನಕ ಎಲ್ಲವನ್ನು ಬಳಸಿಕೊಳ್ಳುತ್ತಿದ್ದರು.

What Are The Health Benefits Of Hibiscus

ಇವತ್ತು ನಾವು ನಮ್ಮ ಮನೆಗಳಲ್ಲಿ ಹಲವು ಹೂಗಿಡಗಳನ್ನು ನೆಡುತ್ತಿದ್ದು ಅವುಗಳನ್ನು ಅಲಂಕಾರದ ದೃಷ್ಟಿಯಿಂದಷ್ಟೆ ನೋಡುತ್ತಿದ್ದೇವೆ. ಆದರೆ ಅವುಗಳಲ್ಲಿರುವ ಆರೋಗ್ಯಕಾರಿ ಗುಣವನ್ನು ಅರಿತು ಅದರ ಬಳಕೆ ಮಾಡುವಲ್ಲಿ ವಿಫಲರಾಗುತ್ತಿದ್ದೇವೆ. ಹೀಗಾಗಿ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಹೀಗಾಗಿ ಆರೋಗ್ಯಕಾರಿ ಗುಣ ಅದರಲ್ಲೂ ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿಸುವ ಗುಣ ಕೇವಲ ಹಣ್ಣು ತರಕಾರಿಯಲ್ಲಿ ಮಾತ್ರವಲ್ಲದೆ ಹೂಗಿಡಗಳಲ್ಲಿಯೂ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ.

ದಾಸವಾಳದಲ್ಲಿದೆ ತಂಪುಕಾರಕ ಗುಣ

ಬೇಸಿಗೆಯ ದಿನಗಳಲ್ಲಿ ದಾಸವಾಳವಂತು ಹತ್ತು ಹಲವು ರೀತಿಯಲ್ಲಿ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತದೆ. ಇದರ ಹೂ, ಎಲೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನರಿತು ಸಕಾಲದಲ್ಲಿ ಅದನ್ನು ಬಳಸಿಕೊಂಡಿದ್ದೇ ಆದರೆ ಹಲವು ರೋಗಗಳಿಂದ ದೂರವಿರಲು ಸಾಧ್ಯವಾಗಲಿದೆ. ದಾಸವಾಳದಲ್ಲಿ ಹಲವು ಜಾತಿಯ ಗಿಡಗಳಿದ್ದು ಅವುಗಳಲ್ಲಿ ಬಿಳಿದಾಸವಾಳ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಹೂ ಎಲೆ ಬೇರು ಸರ್ವ ವಿಧದಲ್ಲಿಯೂ ಉಪಯೋಗಕಾರಿಯಾಗಿದೆ.

ದಾಸವಾಳದಲ್ಲಿ ತಂಪುಕಾರಕ ಗುಣಗಳು ಅಧಿಕ ಪ್ರಮಾಣದಲ್ಲಿರುವ ಕಾರಣ ಇದನ್ನು ಬೇಸಿಗೆಯ ದಿನಗಳಲ್ಲಿ ಬಳಸಿಕೊಳ್ಳುವುದು ಒಳ್ಳೆಯದು. ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು ಸಹಜ. ಇದರಿಂದ ತಲೆನೋವು, ಉರಿಮೂತ್ರ, ಸಮರ್ಪಕವಾಗಿ ಮಲವಿಸರ್ಜನೆಯಾಗದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾಗುತ್ತವೆ, ಅಂತಹ ಸಂದರ್ಭದಲ್ಲಿ ಇದು ಉಪಯೋಗಕ್ಕೆ ಬರುತ್ತದೆ.

What Are The Health Benefits Of Hibiscus

ಇದು ಮೈಮನ ಹಗುರವಾಗಿಸುತ್ತದೆ

ಬೇಸಿಗೆಯಲ್ಲಿ ಕೆಲವರಿಗೆ ಕೆಲವೊಮ್ಮೆ ತಲೆಯಲ್ಲಿ ಏನೋ ಭಾರವಾದಂತೆ ಭಾಸವಾಗುತ್ತಿರುತ್ತದೆ. ಜತೆಗೆ ತುರಿಕೆಯೂ ಕಾಣಿಸಿಕೊಳ್ಳಬಹುದು. ಇನ್ನು ದೇಹದ ಉಷ್ಣಾಂಶವು ಹೆಚ್ಚಾಗಬಹುದು ಇದನ್ನು ಕಡಿಮೆ ಮಾಡಿ ಹಗುರವಾಗಬೇಕಾದರೆ ದಾಸವಾಳದ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಅದನ್ನು ಕಿವುಚಿ ಎಲೆಗಳನ್ನು ಬೇರ್ಪಡಿಸಿ ಲೋಳೆಯಾದ ರಸವನ್ನು ಶೇಖರಿಸಿಟ್ಟುಕೊಂಡು ಸ್ನಾನ ಮಾಡುವ ವೇಳೆ ಮೊದಲಿಗೆ ಆ ನೀರನ್ನು ತಲೆಗೆ ಸುರಿದುಕೊಂಡರೆ ತಂಪಾದ ಅನುಭವವಾಗುತ್ತದೆ.

ಒಂದೈದು ನಿಮಿಷಗಳ ಕಾಲ ನೀರು ಹಾಕಿ ತೊಳೆದು ಬಳಿಕ ಸ್ನಾನ ಮಾಡಿದರೆ ತಲೆಯೆಲ್ಲ ಹಗುರವಾಗುತ್ತದೆ. ದೇಹದಲ್ಲಿ ಉಲ್ಲಾಸವಿರುತ್ತದೆ. ಇದು ಕೂದಲು ಉದುರುವುದು, ಹೊಟ್ಟಿನ ಸಮಸ್ಯೆಗೂ ಸಹಕಾರಿಯಾಗುತ್ತದೆ. ಶಾಂಪುಗಳು ಇನ್ನೂ ಮಾರುಕಟ್ಟೆಯನ್ನು ಆಕ್ರಮಿಸದ ಕಾಲದಲ್ಲಿ ಹಳ್ಳಿಗಳಲ್ಲಿ ಹಿಂದಿನ ಕಾಲದವರು ಇದನ್ನೇ ಬಳಸುತ್ತಿದ್ದರು.

ಬಿಳಿದಾಸವಾಳ ಆರೋಗ್ಯದ ಗಣಿ

ದಾಸವಾಳದಲ್ಲಿ ಗರ್ಭವೃದ್ಧಿ ಮಾಡುವ, ಕೂದಲನ್ನು ಬೆಳೆಸುವ, ದಾಹ ತಣಿಸುವ, ಧಾತು ವೃದ್ಧಿಸುವ ಗುಣವೂ ಇದೆ ಎನ್ನಲಾಗುತ್ತಿದೆ. ಹೂಗಳು, ಬೇರು, ಎಲೆಗಳು ಉಪಯುಕ್ತವಾಗಿದ್ದು, ಎಲೆಗಳನ್ನು ಹಿಂಡಿ ಪ್ರತಿದಿನ ಐದಾರು ಚಮಚದಷ್ಟು ರಸವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಇನ್ನು ಇದೇ ರಸದೊಂದಿಗೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ. ಬಿಳಿ ದಾಸವಾಳದ ಬೇರನ್ನು ಹಸುವಿನ ಹಾಲಿನಲ್ಲಿ ಅರೆದು ಸೇವಿಸಿದರೆ ಗರ್ಭಧಾರಣೆಗೆ ಸಹಕಾರಿಯಾಗಲಿದೆ.

ಬೇರಿನ ರಸವನ್ನು ಗೋಪಿ ಚಂದನದ ಜೊತೆ ಸೇವಿಸಿದರೆ ಗರ್ಭಸ್ರಾವ ತಡೆಯಲು ಸಾಧ್ಯವಾಗುತ್ತದೆ. ದಾಸವಾಳದ ಎಲೆಯನ್ನು ಅರೆದು ತಲೆಗೆ ಲೇಪಿಸಿದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು. ಬಿಳಿದಾಸವಾಳದ ಹೂವುಗಳನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಿಸಬಹುದಾಗಿದೆ. ಎಲೆ ಮತ್ತು ಹೂಗಳನ್ನು ಕಲ್ಲು ಸಕ್ಕರೆಯೊಂದಿಗೆ ಅರೆದು ಸೇವಿಸುತ್ತಾ ಬಂದರೆ ಹೊಟ್ಟೆಯಲ್ಲಿ ಕಾಣಿಸುವ ಕೆಲವೊಂದು ತೊಂದರೆಗಳು ಮಾಯವಾಗುತ್ತವೆ. ಇಷ್ಟೆಲ್ಲ ಲಾಭಗಳು ದಾಸವಾಳದಲ್ಲಿದೆ ಎಂದ ಮೇಲೆ ಅದರ ಬಳಕೆ ಮಾಡಲು ಮುಂದಾಗುವುದು ಜಾಣತನವಾಗತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+