ಗೋಡೆಯ ಮೇಲೆ ಮೂಡುವ ತೇವ ಮತ್ತು ಕಲೆಗಳಿಗೆ ಇದೇ ಮದ್ದು! ಒಮ್ಮೆ ಬಳಸಿದರೆ ಸಾಕು

ಮನೆಗಳಾಗಲಿ, ಅಪಾರ್ಟ್‌ಮೆಂಟ್‌ಗಳಾಗಲಿ ಗೋಡೆಗಳ ಮೇಲೆ ತೇವಾಂಶ ಬರುವುದು ಸಾಮಾನ್ಯ ಸಮಸ್ಯೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುವ ಸಮಸ್ಯೆ ಇದು. ಹೀಗೆ ಗೋಡೆಯ ಮೇಲೆ ತೇವಾಂಶ ಎದ್ದಾಗ ಅಲ್ಲಿ ಕಪ್ಪು ಕಲೆಗಳು ಮೂಡ್ತವೆ. ಗೋಡೆಯ ಮೇಲಿನ ಸಿಪ್ಪೆ ಎದ್ದು ಬರುವ ಮೂಲಕ ಆ ಜಾಗದಲ್ಲಿನ ಪೇಂಟ್‌ ಬಣ್ಣ ಮಾಸುತ್ತದೆ. ಇಲ್ಲಿ ಫಂಗಸ್‌ ಬೆಳೆಯುವುದಕ್ಕೂ ಕಾರಣವಾಗ್ತದೆ. ಹೀಗಾದಾಗ ಕೆಟ್ಟ ವಾಸನೆ ಬರುವುದೂ ಇದೆ.

ಈ ಸಮಸ್ಯೆಗೆ ಪರಿಹಾರವಾಗಿ ಮಾರುಕಟ್ಟೆಯಲ್ಲಿ ತುಂಬಾ ಪ್ರಾಡೆಕ್ಟ್‌ಗಳಿವೆ. ಆದ್ರೆ ಅದು ದುಬಾರಿಯಾಗಿರ್ತದೆ. ಇದರ ಬದಲು ಕಲೆಗಳು ಮೂಡಿದ ಜಾಗದಲ್ಲಿ ಬಿಳಿ ವಿನೆಗರ್ ಬಳಸಿದರೂ ಪರಿಣಾಮ ಅದ್ಬುತವಾಗಿಯೇ ಇರುವುದು.

vinegar to remove stains from wall know how to use for better result

ಬಿಳಿ ವಿನೆಗರ್ :

ಬಿಳಿ ವಿನೆಗರ್‌ನಲ್ಲಿ ಅಸಿಟಿಕ್ ಆಮ್ಲ ಇರುತ್ತೆ. ಇದು ಅನೇಕ ರೀತಿಯ ಫಂಗಸ್‌ ಅನ್ನು ತೆಗೆದು ಹಾಕುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಬಿಳಿ ವಿನೆಗರ್‌ ಗೋಡೆಯ ರಂಧ್ರಗಳ ಓಳಗೆ ಹೋಗಿ ಶಿಲೀಂಧ್ರಗಳನ್ನು ತೆಗದು ಹಾಕುತ್ತದೆ, ಜೊತೆಗೆ ಮತ್ತೆ ಫಂಗಸ್‌ ಬೆಳೆಯದಂತೆ ತಡೆಯುತ್ತದೆ.

ಆದರೆ ನೆಪಿರಲಿ ಫಂಗಸ್‌ ಸಣ್ಣ ಪ್ರಮಾಣದಲ್ಲಿ ಇದ್ದಾಗ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡ್ತದೆ. ಒಂದು ವೇಳೆ ಶಿಲೀಂದ್ರ ಅಥವಾ ಫಂಗಸ್‌ ಕಪ್ಪು ಕಲೆಗಳು ಗೋಡೆ ತುಂಬಾ ಹರಡಿಕೊಂಡಾಗ ವಿನೆಗರ್‌ ಕೆಲಸ ಮಾಡದೇ ಇರಬಹುದು.ಆಗ ಬೇರೆ ಕೆಮಿಕಲ್‌ಗಳ ಬಳಕೆಯೇ ಮಾಡಬೇಕಾಗಬಹುದು. ಇದರ ಬದಲಿಗೆ ಸಮಸ್ಯೆ ಸಣ್ಣ ಮಟ್ಟದಲ್ಲಿರುವಾಗಲೇ ವಿನೆಗರ್‌ ಮೂಲಕ ಬುಡ ಸಮೇತ ಕಿತ್ತು ಹಾಕುವುದು ಒಳ್ಳೆಯದು.

ವಿನೆಗರ್‌ ಬಳಸುವುದು ಹೇಗೆ ?:

ಗೋಡೆಗಳ ಮೇಲೆ ವಿನೆಗರ್‌ ಬಳಸುವ ಮುನ್ನ ಕೈಗೆ ಗ್ಲೌಸ್‌, ಮುಖಕ್ಕೆ ಮಾಸ್ಕ್‌ ಹಾಕುವುದನ್ನು ಮರೀಬೇಡಿ. ಕಣ್ಣಿಗೂ ಸೇಫ್ಟಿ ಗ್ಲಾಸ್‌ ಹಾಕುವುದನ್ನು ಮರೀಬೇಡಿ. ಯಾಕೆಂದರೆ ಇದನ್ನು ಕ್ಲೀನ್‌ ಮಾಡುವಾಗ ಇದು ಗಾಳಿಯಲ್ಲಿ ಸೇರಿಕೊಳ್ಳುವ ಸಾಧ್ಯತೆ ಇರುವುದು. ಇದು ಕಣ್ಣು, ಮೂಗು, ಬಾಯಿಯ ಮೂಲಕ ನಮ್ಮ ದೇಹಕ್ಕೆ ಪ್ರವೇಶಿಸಿದರೆ ಸಮಸ್ಯೆಯಾಗಬಹುದು.

ಈ ಹಂತಗಳನ್ನು ಅನುಸರಿಸಿ:

೧.ಬಾಗಿಲು ಮತ್ತು ಕಿಟಕಿಗಳನ್ನು ತೆರೆಯುವ ಮೂಲಕ ಕೋಣೆ ತುಂಬಾ ಗಾಳಿಯಾಡುವುದಕ್ಕೆ ಅವಕಾಶ ಮಾಡಿಕೊಡಿ.

೨. ಬಿಳಿ ವಿನೆಗರ್ ಅನ್ನು ಹಾಗೆಯೇ ನೇರವಾಗಿ ಕಲೆಗಳಿರುವ ಜಾಗಕ್ಕೆ ಹಾಕಿ. ಹೀಗೆ ಬಳಸುವಾಗ ಯಾವುದೇ ಕಾರಣಕ್ಕೆ ನೀರು ಸೇರಿಬೇಡಿ.

೩. ವಿನೆಗರ್‌ ಹಾಕಿದ ಮೇಲೆ ಅದನ್ನು 30 ರಿಂದ 60 ನಿಮಿಷಗಳ ಕಾಲ ಹಾಗೆಯೇ ಬಿಡಿ .

೪. ಬ್ರಷ್‌ನಿಂದ ಗೋಡೆಯ ಮೇಲ್ಮೈಯನ್ನು ಉಜ್ಜಿ.

೫.ಸ್ವಚ್ಛವಾದ, ಒದ್ದೆಯಾದ ಬಟ್ಟೆಯಿಂದ ಉಳಿದ ಭಾಗವನ್ನು ಒರೆಸಿ ತೆಗೆಯಿರಿ.

೬. ತೇವಾಂಶ ಮತ್ತೆ ಸಂಗ್ರಹವಾಗದಂತೆ ತಡೆಯಲು ಗೋಡೆಯನ್ನು ಸಂಪೂರ್ಣವಾಗಿ ಒಣಗಿಸಿ .

೭. ಕ್ಲೀನ್‌ ಮಾಡಿದ ನಂತರ ಬಳಸಿದ ವಸ್ತುಗಳನ್ನು ಎಸೆಯಿರಿ. ಇಲ್ಲಾ ಎಲ್ಲವನ್ನೂ ಸರಿಯಾಗಿ ತೊಳೆಯುವುದನ್ನು ಮರೀಬೇಡಿ.

ಗೋಡೆಗಳ ಮೇಲೆ ತೇವಾಂಶ ಕಾಣಿಸಿಕೊಳ್ಳಲು ಕಾರಣ :

೧.ಪೈಪ್‌ನಲ್ಲಿನ ಲೀಕೇಜ್‌

೨. ಮನೆಯ ಅಡಿಪಾಯದಿಂದ ಏರುವ ತೇವಾಂಶ.

೩. ಅಡುಗೆ ಮನೆ, ಬಚ್ಚಲು ಮನೆಯಿಂದ ಉಂಟಾಗುವ ಆವಿ

೪. ಕೋಣೆಗಳಲ್ಲಿ ಗಾಳಿ ಸರಿಯಾಗಿ ಹರಡದಿರುವುದು

ಈ ಸಮಸ್ಯೆಗಳನ್ನು ಸರಿ ಮಾಡದಿದ್ದರೆ ಎಷ್ಟೇ ಕ್ಲೀನ್‌ ಮಾಡಿದರೂ ಈ ಕಲೆಗಳು ಮತ್ತೆ ಮತ್ತೆ ಕಾಣಸಿಕೊಳ್ಳುವುದು.

ತೇವಾಂಶ ಮತ್ತೆ ಕಾಣಿಸಿಕೊಳ್ಳದಂತೆ ತಡೆಯುವುದು ಹೇಗೆ ?

೧. ದಿನಾಲೂ ಮನೆಯ ಕಿಟಕಿ, ಬಾಗಿಲುಗಳನ್ನು ತೆಗೆದು ಗಾಳಿಯಾಡುವುದಕ್ಕೆ ಅವಕಾಶ ಮಾಡಿ ಕೊಡಿ.

೨. ಬಚ್ಚಲು ಮನೆ, ಅಡುಗೆಮನೆಗಳಲ್ಲಿ ಎಕ್ಸಾಸ್ಟ್‌ ಫ್ಯಾನ್‌ ಬಳಸಿ.

೩. ನೀರಿನ ಲೀಕೇಜ್‌ ಅನ್ನು ಸರಿಪಡಿಸಿ.

೪. ಒದ್ದೆಯಾದ ಮೇಲ್ಮೈಗಳನ್ನು ತಕ್ಷಣ ಒಣಗಿಸಿ.

೫. ಡಿಹ್ಯೂಮಿಡಿಫೈಯರ್‌ಗಳನ್ನು ಬಳಸಿ.

೬.ಗೋಡೆಗಳು ಸಂಪೂರ್ಣವಾಗಿ ಒಣಗಿದ ನಂತರ ಆಂಟಿ ಮೋಲ್ಡ್‌ ಪೇಂಟ್‌ ಬಳಸಿ.

೭.ಮನೆಯ ತೇವಾಂಶದ ಮಟ್ಟ 30% ಮತ್ತು 50% ನಡುವೆಯೇ ಇರುವಂತೆ ನೋಡಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+