ಸರ್ಪ ಶಕುನ: ಮನೆಯಲ್ಲಿ ಹಾವು ನೋಡುವುದು ಶುಭವೋ? ಅಶುಭವೋ?

ಹಾವು ಕಂಡರೆ ಯಾರಿಗೆ ತಾನೆ ಭಯ ಆಗೋದಿಲ್ಲ ಹೇಳಿ. ಹಾವನ್ನು ಕಂಡರೆ ನಿಂತು ನೋಡುವವರಿಗಿಂತ ಓಡಿ ಹೋಗುವವರೇ ಹೆಚ್ಚು. ಆದರೂ ಕೆಲವೊಮ್ಮೆ ಹಾವುಗಳು ನಾವು ವಾಸಿಸುವ ಸ್ಥಳಗಳಲ್ಲಿ ಕಾಣಿಸಿಕೊಂಡು ಬಿಡುತ್ತವೆ. ಈ ಸಂದರ್ಭವನ್ನು ಯಾರೂ ಕೂಡ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೊಂದು ವೇಳೆ ಹಾವು ಮನೆಗೆ ಬಂದರೆ ಅದು ಕೆಲ ಸೂಚನೆಯಾಗಿರಬಹುದು. ಹಾಗಾದರೆ ಮನೆಯಲ್ಲಿ ಹಾವು ಕಾಣಿಸಿಕೊಂಡರೆ ಶುಭನಾ? ಅಶುಭನಾ?

ಸನಾತನ ಧರ್ಮದಲ್ಲಿ ಸರ್ಪ ದೇವರನ್ನು ಪೂಜಿಸುವುದು ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ನಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಹಾವು ಕಂಡರೆ ಅದು ಹಲವು ರೀತಿಯ ಸೂಚನೆಯಾಗಿರಬಹುದು.ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಹಾವನ್ನು ನೋಡುವುದನ್ನು ಆರ್ಥಿಕ ಲಾಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಇದು ಭವಿಷ್ಯದಲ್ಲಿ ಬರುವ ಕೆಲವು ತೊಂದರೆಗಳ ಸೂಚಿಸಬಹುದು. ಹಾಗಾದರೆ ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದರ ಸೂಚನೆ ಏನು?

Snake Omen What is the sign of snake appearing in house

2 ತಲೆಯ ಹಾವು ಕಾಣಿಸಿಕೊಳ್ಳುವುದರ ಸೂಚನೆ

ಎರಡು ತಲೆಯ ಹಾವು ಇದ್ದಕ್ಕಿದ್ದಂತೆ ಮನೆಗೆ ಬಂದರೆ ಅಥವಾ ನೀವು ಕೆಲಸ ಮಾಡುವಾಗ ಎಲ್ಲೋ ಒಂದು ಜಾಗದಲ್ಲಿ ನೋಡಿದರೆ, ಅದನ್ನು ತುಂಬಾ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಎರಡು ತಲೆಯ ಹಾವು ಮನೆಗೆ ಬಂದರೆ ಅದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಗಮನದ ಸೂಚನೆಯಾಗಿದೆ. ಇದರರ್ಥ ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಬಹುದು. ಇದರಿಂದ ಆರ್ಥಿಕ ಲಾಭದ ಸಾಧ್ಯತೆಯೂ ಇರಬಹುದು. ಇದು ಭವಿಷ್ಯದಲ್ಲಿ ನೀವು ಶ್ರೀಮಂತರಾಗುವ ಸೂಚನೆಯಾಗಿದೆ.

ಮನೆಯಲ್ಲಿ ಕಪ್ಪು ಹಾವು ಕಾಣಿಸಿಕೊಳ್ಳುವುದರ ಸೂಚನೆ

ಮನೆಗೆ ಕಪ್ಪು ಹಾವು ಬಂದರೆ ಅಥವಾ ಯಾರಾದರೂ ನೋಡಿದರೆ, ಅದು ತುಂಬಾ ಒಳ್ಳೆಯ ಸಂಕೇತ. ಇದರರ್ಥ ಮುಂಬರುವ ಸಮಯದಲ್ಲಿ ನೀವು ಕೆಲವು ಪ್ರಮುಖ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಬಹುದು. ಅಲ್ಲದೆ ಶಿವನ ಆಶೀರ್ವಾದ ನಿಮ್ಮ ಮೇಲಿದೆ ಎಂದರ್ಥ. ನಿಮ್ಮ ಜೀವನದಲ್ಲಿ ಸಂತೋಷ ಬರಲಿದೆ ಎನ್ನುವುದನ್ನು ಇದು ಸೂಚಿಸುತ್ತದೆ.

ಮನೆಯ ಸುತ್ತಮುತ್ತ ಹಾವುಗಳ ನೋಟ

ಒಬ್ಬ ವ್ಯಕ್ತಿಯು ತನ್ನ ಮನೆಯ ಸುತ್ತಮುತ್ತ ಎಲ್ಲೋ ಹಾವನ್ನು ನೋಡಿದರೆ, ಅದು ಜೀವನ ಅಥವಾ ಕುಟುಂಬದಲ್ಲಿ ಏನಾದರೂ ಬದಲಾವಣೆಯ ಸೂಚನೆಯಾಗಿರಬಹುದು. ಇದು ಹಳೆಯ ಸಂಬಂಧಗಳು ಅಥವಾ ಅಭ್ಯಾಸಗಳನ್ನು ಬಿಡುವುದನ್ನು ಸಹ ಸೂಚಿಸುತ್ತದೆ. ಹಾವನ್ನು ನೋಡುವುದು ಎಂದರೆ ಭವಿಷ್ಯದಲ್ಲಿ ಹೊಸ ಆರಂಭ ಅಥವಾ ನಿಮ್ಮ ವೈಯಕ್ತಿಕ ಜೀವನ ಅಥವಾ ಕುಟುಂಬದಲ್ಲಿ ಕೆಲವು ಬದಲಾವಣೆಗಳ ಸೂಚನೆಯಾಗಿದೆ.

Snake Omen What is the sign of snake appearing in house

ಜೋಡಿಯಾಗಿ ಕಾಣುವ ಹಾವುಗಳು

ನಿಮ್ಮ ಮನೆಯಲ್ಲಿ ಒಂದು ಜೋಡಿ ಹಾವುಗಳು ಅಥವಾ ಒಂದು ಗಂಡು ಹಾವು ಮತ್ತು ಹೆಣ್ಣು ಹಾವು ಒಟ್ಟಿಗೆ ಇರುವುದನ್ನು ನೀವು ನೋಡಿದರೆ ಅದನ್ನು ಅತ್ಯಂತ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಮನೆಯ ಪ್ರತಿಯೊಬ್ಬ ಸದಸ್ಯನು ಜೀವನದಲ್ಲಿ ಪ್ರಗತಿ ಹೊಂದುತ್ತಾನೆ. ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾನೆ.

ಇದಲ್ಲದೆ ನೀವು ಸ್ವಲ್ಪ ಭೂಮಿಯನ್ನು ಖರೀದಿಸಲು ಹೋದಾಗ ಅಲ್ಲಿ ಒಂದು ಜೋಡಿ ಹಾವುಗಳನ್ನು ನೋಡಿದರೆ, ನೀವು ಹೆಚ್ಚು ಯೋಚಿಸದೆ ಆ ಸ್ಥಳವನ್ನು ಖರೀದಿಸಿಬಿಡಿ. ಅಂತಹ ಸ್ಥಳವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಮನೆಯಲ್ಲಿ ಬಿಳಿ ಹಾವಿನ ನೋಟ

ಬಿಳಿ ಹಾವುಗಳು ತುಂಬಾ ವಿರಳವಾಗಿ ಕಂಡುಬರುತ್ತವೆ. ಆದರೆ ನಿಮ್ಮ ಮನೆಯಲ್ಲಿ ಬಿಳಿ ಬಣ್ಣದ ಹಾವು ಕಾಣಿಸಿಕೊಂಡರೆ ಅದನ್ನು ಕೂಡ ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಿಳಿ ಬಣ್ಣದ ಹಾವು ಶುದ್ಧತೆ ಮತ್ತು ಹೊಸ ಆರಂಭವನ್ನು ಸಂಕೇತಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+