Shani Amavasya 2023: ಅಮಾವಾಸ್ಯೆಯ ದಿನ ಈ ವಸ್ತುಗಳನ್ನು ಖರೀದಿಸದಿರಿ.. ಇಲ್ಲ ತುಂಬಾ ಕಷ್ಟಪಡುವಿರಿ..
ಪ್ರತಿ ತಿಂಗಳು ಅಮಾವಾಸ್ಯೆ ಬರುತ್ತದೆ. ಆದರಲ್ಲೂ ಅಮವಾಸ್ಯೆಯಂದು ಗ್ರಹಣ ಸಂಭವಿಸಿದರೆ ತುಂಬಾ ಜಾಗರೂಕರಾಗಿರಬೇಕು ಕೆಲ ವಸ್ತುಗಳನ್ನು ಈ ದಿನ ಖರೀದಿಸಬಾರದು ಎಂದು ಹೇಳಲಾಗುತ್ತದೆ.
ಅಮವಾಸ್ಯೆ ಪ್ರತಿ ತಿಂಗಳು ಸಂಭವಿಸುತ್ತದೆ. ಆದರೆ ಈ ಅಮವಾಸ್ಯೆ ತುಂಬಾ ವಿಶೇಷವಾಗಿದೆ. ಯಾಕೆಂದರೆ ಈ ದಿನ ಗ್ರಹಣದೊಂದಿಗೆ ಪಿತೃಪಕ್ಷದ ಕೊನೆಯ ದಿನವೂ ಆಗಿದೆ. ಜೊತೆಗೆ ಇದು ಶನಿವಾರದಂದು ಬಂದಿರುವುದು ಇನ್ನಷ್ಟು ವಿಶೇಷವಾಗಿದೆ. ಹೀಗಾಗಿ ಈ ಅಮವಾಸ್ಯೆಯಂದು ತುಂಬಾ ಜಾಗರೂಕರಾಗಿರಬೇಕು. ಅಮಾವಾಸ್ಯೆಯಂದು ಕೆಲವು ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಇದು ಮನೆಯಲ್ಲಿ ದೊಡ್ಡ ಅನಾಹುತವನ್ನು ಉಂಟುಮಾಡುತ್ತದೆ. ಹಾಗಾದರೆ ಅಮಾವಾಸ್ಯೆ ದಿನ ಯಾವ ವಸ್ತುಗಳನ್ನು ಖರೀದಿಸಬಾರದು ಎಂದು ನೋಡೋಣ.

ಪೊರಕೆ
ಈ ಅಮಾವಾಸ್ಯೆಯ ದಿನವು ಪಿತೃಗಳಿಗೆ ಮೀಸಲಾದ ದಿನವಾಗಿದೆ. ಈ ದಿನದಲ್ಲಿ ಪೊರಕೆಗಳನ್ನು ಖರೀದಿಸುವುದನ್ನು ತಪ್ಪಿಸಿ. ಶಾಸ್ತ್ರಗಳ ಪ್ರಕಾರ, ಪೊರಕೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಅಮಾವಾಸ್ಯೆಯಂದು ಪೊರಕೆಯನ್ನು ಕೊಳ್ಳುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಮತ್ತು ಆದಾಯವನ್ನು ತಡೆಯುತ್ತದೆ. ಅಲ್ಲದೆ ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಅಮಾವಾಸ್ಯೆಯಂದು ಪೊರಕೆ ಖರೀದಿಸಬೇಡಿ.
ಮದ್ಯ
ಅಮಾವಾಸ್ಯೆಯ ದಿನವು ಪಿತೃಗಳಿಗೆ ಮೀಸಲಾಗಿರುವುದರಿಂದ ಈ ದಿನ ಮದ್ಯವನ್ನು ಖರೀದಿಸುವುದನ್ನು ಮತ್ತು ಕುಡಿಯುವುದನ್ನು ತಪ್ಪಿಸಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಅಮಾವಾಸ್ಯೆಯ ದಿನವು ಶನಿ ದೇವರಿಗೆ ಸಂಬಂಧಿಸಿದೆ. ಹಾಗಾಗಿ ಈ ದಿನ ಮದ್ಯ ಸೇವಿಸಿದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಬಂದು ಹಲವಾರು ಸಮಸ್ಯೆಗಳನ್ನು ಎದುರಿಸುವಂತೆ ಮಾಡುತ್ತದೆ.
ಮಾಂಸಗಳು
ಮದ್ಯದಂತೆ ಅಮವಾಸ್ಯೆಯ ದಿನದಂದು ಮಾಂಸದ ಖರೀದಿ ಅಥವಾ ಸೇವನೆಯನ್ನು ತಪ್ಪಿಸಬೇಕು. ಅಮವಾಸ್ಯೆಯ ದಿನದಂದು ಯಾವುದೇ ಮಾಂಸಾಹಾರ ಸೇವಿಸಿದರೆ ಜಾತಕದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅದಲ್ಲದೇ ಅಮವಾಸ್ಯೆಯ ದಿನ ಮಾಂಸಾಹಾರ ಸೇವಿಸುವುದರಿಂದ ಶನಿಗ್ರಹದಿಂದ ಉಂಟಾಗುವ ತೊಂದರೆಗಳು ಮತ್ತಷ್ಟು ಹೆಚ್ಚಾಗುತ್ತವೆ.
ಗೋಧಿ ಹಿಟ್ಟು
ಅಮಾವಾಸ್ಯೆಯಂದು ಗೋಧಿ ಹಿಟ್ಟನ್ನು ಖರೀದಿಸುವುದನ್ನು ತಪ್ಪಿಸಬೇಕು. ಇದನ್ನು ಪುರಟಾಸಿ ಮಾಸದ ಅಮಾವಾಸ್ಯೆಯಂದು ಖರೀದಿಸುವುದನ್ನು ಸಹ ತಪ್ಪಿಸಬೇಕು. ಒಂದು ವೇಳೆ ಹಾಗೆ ಕೊಂಡು ತಿಂದರೆ ಅದು ಅಶುಭವೆಂದು ಪರಿಗಣಿಸಲಾಗುತ್ತದೆ.
ನೆತ್ತಿಯ ಮೇಲೆ ಎಣ್ಣೆ ಹಾಕುವುದನ್ನು ತಪ್ಪಿಸಿ
ಅಮವಾಸ್ಯೆಯ ದಿನ ತಲೆಗೆ ಎಣ್ಣೆ ಹಚ್ಚುವುದನ್ನು ತಪ್ಪಿಸಬೇಕು. ಬದಲಾಗಿ ಈ ದಿನ ಎಣ್ಣೆಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ.
ಪೂಜೆಯ ವಸ್ತುಗಳು
ಅಮಾವಾಸ್ಯೆಯ ದಿನ ಪಿತೃಕ್ಕೆ ಪೂರ್ವಜರನ್ನು ಪೂಜಿಸಲು ಮಂಗಳಕರ ದಿನವಾಗಿದೆ. ಈ ದಿನ ಪೂಜಾ ಸಾಮಗ್ರಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಈ ದಿನದಂದು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಿದರೆ, ಅದು ಪುಣ್ಯವನ್ನು ನೀಡುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications