Mint Tomato Chutney Recipe: ಈ ಒಂದು ಪದಾರ್ಥ ಟೊಮೆಟೊಗೆ ಸೇರಿಸಿ ಚಟ್ನಿ ಮಾಡಿ... ಟೇಸ್ಟ್ ಸಖತ್ ಇರುತ್ತೆ...

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬೆಳಿಗ್ಗೆ ತಿಂಡಿಗೆ ದೋಸೆ, ಇಡ್ಲಿ, ಪೂರಿ, ಚಪಾತಿಯನ್ನು ಮಾಡುವುದು ರೂಢಿ. ನೀವು ಕೂಡ ಇದೇ ಡಿಶ್ ಮಾಡ್ತಾಯಿದ್ದರೆ ನಿಮಗಾಗಿ ವಿಭಿನ್ನ ಬಗೆಯ ಚಟ್ನಿ ಮಾಡುವ ವಿಧಾನ ಇಲ್ಲಿದೆ.

ನೀವು ಬೆಳಿಗ್ಗೆ ತಿಂಡಿಯೊಂದಿಗೆ ಈ ಒಂದು ಚಟ್ನಿಯನ್ನು ತಯಾರಿಸಿ. ಮನೆಯವರು ತುಂಬಾ ಇಷ್ಟಪಟ್ಟು ತಿಂತಾರೆ. ಮಾತ್ರವಲ್ಲದೆ ಎರಡು ಇಡ್ಲಿಯನ್ನು ಜಾಸ್ತಿ ತಿನ್ನುವುದರಲ್ಲಿ ಅನುಮಾನವೇ ಇಲ್ಲ. ಇಡ್ಲಿಗೆ ಖಾರದ ಭಕ್ಷ್ಯಕ್ಕಿಂತ ಸೈಡ್ ಡಿಶ್ ಸ್ವಲ್ಪ ಹುಳಿ ಇದ್ದರೆ ಸಖತ್ತಾಗಿರುತ್ತೆ. ಹಾಗಾಗಿ ಇಡ್ಲಿಗೆ ಟೊಮೆಟೊ ಚಟ್ನಿ ಯಾವಾಗಲೂ ಬೆಸ್ಟ್. ಅದರಲ್ಲಿ 2 ಹಿಡಿ ಪುದೀನಾ ಹಾಕಿದರೆ ಸಾಮಾನ್ಯ ಟೊಮೇಟೊ ಚಟ್ನಿಗಿಂತ ಇನ್ನೂ ರುಚಿ ಹೆಚ್ಚಾಗಿರುತ್ತದೆ.

Pudina Tomato Chutney Recipe Know How to Make Mint Tomato Chutney in Kannada

ಈ ಚಟ್ನಿ ಮಾಡುವುದು ತುಂಬಾ ಸುಲಭ. ಹೀಗಾಗಿ ಈ ಚಟ್ನಿಯನ್ನು ತ್ವರಿತವಾಗಿ ಮಾಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ಸವಿಯಬಹುದು. ಹಾಗಾದರೆ ತಡ ಮಾಡುವುದು ಬೇಡ. ಪುದೀನಾ ಟೊಮೆಟೊ ಚಟ್ನಿ ತಯಾರಿಸುವುದು ಹೇಗೆ ಎಮದು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಂದು ಬಾರಿ ಪುದೀನಾ ಟೊಮೆಟೊ ಚಟ್ನಿಯನ್ನು ತಯಾರಿಸಿ. ನಮ್ಮೊಂದಿಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ.

ಅಗತ್ಯವಿರುವ ವಸ್ತುಗಳು:

* ಎಣ್ಣೆ - 2 ಟೇಬಲ್ಸ್ಪೂನ್

* ಈರುಳ್ಳಿ - 4 (ಸಣ್ಣದಾಗಿ ಹೆಚ್ಚಿದ)

* ದೊಡ್ಡ ಟೊಮೆಟೊ - 2 (ಸಣ್ಣದಾಗಿ ಹೆಚ್ಚಿದ)

* ಪುದೀನಾ - 2 ಹಿಡಿ

*ಉಪ್ಪು - ರುಚಿಗೆ ತಕ್ಕಷ್ಟು...

* ಖಾರ- 2 ಟೇಬಲ್ಸ್ಪೂನ್

* ಸಾಸಿವೆ - 1 tbsp

* ಉದ್ದಿನ ಬೇಳೆ - 1 tbsp

* ಕರಿಬೇವಿನ ಎಲೆಗಳು - 1 ಕಟ್ಟು

*ಕಾಳುಮೆಣಸು-1 tbsp

* ಒಣಮೆಣಸಿನಕಾಯಿ 2

Pudina Tomato Chutney Recipe Know How to Make Mint Tomato Chutney in Kannada

ಪಾಕವಿಧಾನ:

* ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಕಾಳುಮೆಣಸು ಹಾಕಿ ಬಲೂನ್ ನಂತೆ ಊದುವವರೆಗೆ ಹುರಿಯಿರಿ.

* ನಂತರ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.

* ನಂತರ ಟೊಮೆಟೊ ಹಾಕಿ ಅದು ಮೃದುವಾಗುವವರೆಗೆ ಹುರಿಯಿರಿ.

* ಮುಂದೆ ಅದಕ್ಕೆ 2 ಹಿಡಿ ಪುದೀನಾ ಹಾಕಿ 1 ನಿಮಿಷ ಹುರಿದು ತಣ್ಣಗಾಗಲು ಇಡಿ.

* ನಂತರ ಮಿಕ್ಸರ್ ಜಾರ್‌ಗೆ ಹುರಿದ ಸಾಮಾಗ್ರಿಗಳನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ ಹಾಕಿ ಸ್ವಲ್ಪ ರುಬ್ಬಿಕೊಳ್ಳಿ.

* ನಂತರ ರುಬ್ಬಿದ ಚಟ್ನಿಯನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ.

* ಕೊನೆಗೆ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಒಗ್ಗರಣೆಗಾಗಿ 1 ಟೇಬಲ್ ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಸಾಸಿವೆ, ಒಣಮೆಣಸಿನಕಾಯಿ, ಉದ್ದಿನ ಬೇಳೆ, ಕರಿಬೇವಿನ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿ ಚಟ್ನಿಯೊಂದಿಗೆ ಬೆರೆಸಿದರೆ ರುಚಿಯಾದ ಪುದೀನ ಟೊಮೆಟೊ ಚಟ್ನಿ ರೆಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+