Millionaire Tips: ಕೋಟ್ಯಾಧಿಪತಿಯಾಗಲು ನಿಂಬೆಹಣ್ಣು, ಮೆಣಸಿನಕಾಯಿ ಇದ್ರೆ ಸಾಕು....
ಶ್ರೀಮಂತರ ಬಳಿ ಎಷ್ಟೊಂದು ಹಣವಿರುತ್ತದೆ. ಆ ಹಣ ಎಂದಿಗೂ ಕೊನೆಗೊಳ್ಳುವುದಿಲ್ಲ. ನಾನು ಕೂಡ ಅವನಂತೆ ಶ್ರೀಮಂತನಾಗಬೇಕು ಅನ್ನೋ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಇದಕ್ಕಾಗಿ ಹಗಲಿರುಳು ಶ್ರಮಪಡುವವರು ನಮ್ಮ ನಡುವೆ ಇದ್ದಾರೆ. ಆದರೂ ಕೂಡ ಅವರು ಶ್ರೀಮಂತರಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯವಾದ ಕಾರಣವೊಂದಿದೆ. ಅದನ್ನು ಸರಿಪಡಿಸಿದರೆ ನೀವು ಶ್ರೀಮಂತರಾಗಬಹುದು.
ಈ ಶ್ರೀಮಂತರು ತಮ್ಮ ಮನೆಗೆ ಹಣವನ್ನು ಆಕರ್ಷಿಸಲು ಏನು ಮಾಡುತ್ತಾರೆ? ಅವರ ಹಣ ಎಂದಿಗೂ ಕಡಿಮೆ ಆಗೋದೇ ಇಲ್ಲ ಯಾಕೆ? ವಾಸ್ತವವಾಗಿ ಶ್ರೀಮಂತರು ಇದಕ್ಕಾಗಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಕೇವಲ ಕಠಿಣ ಪರಿಶ್ರಮದಿಂದ ಅವರು ಶ್ರೀಮಂತರಾಗುವುದಿಲ್ಲ. ಮೆನಯಲ್ಲಿ ಇರುವ ಕೆಲ ವಸ್ತುಗಳೂ ಕೂಡ ಹಣವನ್ನು ಆಕರ್ಷಿಸುತ್ತವೆ.

ಹೌದು... ಶ್ರೀಮಂತ ಜನರು ಪ್ರತಿದಿನ ಬೆಳಿಗ್ಗೆ ತಮ್ಮ ಮನೆಯ ಮುಖ್ಯ ಬಾಗಿಲಿಗೆ ಕೆಲ ವಸ್ತುವನ್ನು ನೇತುಹಾಕುತ್ತಾರೆ. ಇದರಿಂದಾಗಿ ಹಣ ಯಾವಾಗಲೂ ಆಕರ್ಷಿತವಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದವೂ ಅವರ ಮೇಲೆ ಇರುತ್ತದೆ. ಶ್ರೀಮಂತರು ಪ್ರತಿದಿನ ಬೆಳಿಗ್ಗೆ ತಮ್ಮ ಮುಖ್ಯ ಬಾಗಿಲಿಗೆ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತುಹಾಕುತ್ತಾರೆ. ಇದನ್ನು ಮನೆಯ ಮುಂದೆ ನೇತು ಹಾಕುವುದರಿಂದ ಯಾರ ಕೆಟ್ಟ ಕಣ್ಣು ಬೀಳುವುದಿಲ್ಲ. ಇದು ಸಂಪತ್ತು ಯಾವಾಗಲೂ ಆಕರ್ಷಿಸುತ್ತದೆ.
ನಿಂಬೆ ಮತ್ತು ಮೆಣಸಿನಕಾಯಿಯನ್ನು ಮನೆ ಅಥವಾ ಅಂಗಡಿಯಲ್ಲಿ ನೇತುಹಾಕಿದರೆ, ಆ ಅಂಗಡಿ ಅಥವಾ ಮನೆಗೆ ದುಷ್ಟ ಕಣ್ಣುಗಳು ಬೀಳುವುದಿಲ್ಲ ಎಂಬ ನಂಬಿಕೆ ಇದೆ. ಇದನ್ನು ನೇತು ಹಾಕುವುದರಿಂದ ಜನರ ಗಮನ ಸೆಳೆಯುತ್ತದೆ. ಇದರಿಂದಾಗಿ ಮನೆ ಅಥವಾ ಅಂಗಡಿಯು ಕೆಟ್ಟ ಕಣ್ಣುಗಳನ್ನು ಎದುರಿಸುವುದಿಲ್ಲ.
ನಿಂಬೆ ಹಣ್ಣು , ಮೆಣಸನ್ನು ಕಟ್ಟುವ ಹಿಂದೆ ಹಲವು ಸಾಂಪ್ರದಾಯಿಕ, ವೈಜ್ಞಾನಿಕ ಕಾರಣಗಳಿವೆ. ಅಲಕ್ಷ್ಮಿಗೆ ಹುಳಿ, ತೀಕ್ಷ್ಣವಾದ, ಖಾರ ಪದಾರ್ಥಗಳನ್ನು ಇಷ್ಟಪಡುವುದರಿಂದ, ಬಾಗಿಲವರೆಗೆ ಬಂದು ತನಗೆ ಇಷ್ಟವಾದ ಆಹಾರವನ್ನು ತಿಂದು ಹೋಗುತ್ತಾಳೆ. ಈ ಹುಳಿ, ತೀಕ್ಷ್ಣ, ಖಾರ ಪದಾರ್ಥಗಳನ್ನು ಸೇವಿಸಿದ ನಂತರ ಒಳಗೆ ಬರುವ ಪ್ರಚೋದನೆಯನ್ನು ಕಳೆದುಕೊಳ್ಳುವುದರಿಂದ ದುರಾದೃಷ್ಟದ ದೇವತೆ ಒಳಗೆ ಪ್ರವೇಶಿಸುವುದಿಲ್ಲ, ತನ್ನ ದುಷ್ಟ ಕಣ್ಣಿನಿಂದ ಅಂಗಡಿಯ ಮೇಲೆ ದೃಷ್ಟಿ ಹಾಯಿಸದೇ ಹೊರಟು ಹೋಗುತ್ತಾಳೆ ಎನ್ನುವ ನಂಬಿಕೆ ಇದೆ.ಅಲಕ್ಷ್ಮಿಯು ಸಿಹಿ ಪದಾರ್ಥಗಳನ್ನು ಇಷ್ಟಪಡದ ಕಾರಣ ಹಿಂದೂ ಹಬ್ಬಗಳಲ್ಲಿ ಅಲಕ್ಷ್ಮಿ ಬರಬಾರದು ಎನ್ನುವ ಕಾರಣಕ್ಕಾಗಿ ಹುಳಿ ಪದಾರ್ಧಗಳನ್ನು ಮಾಡದೇ ಸಿಹಿ ಪದಾರ್ಥಗಳನ್ನು ಮಾತ್ರ ಮಾಡುತ್ತಾರೆ.
ಇನ್ನೂ ವಾಹನಗಳಿಗೆ ಈ ಲಿಂಬೆಹಣ್ಣು, ಮೆಣಸಿನಕಾಯಿಯನ್ನು ಯಾಕಾಗಿ ಕಟ್ಟುತ್ತಾರೆ. ಒಂದು ಕಾರಣ ಹಿಂದಿನ ಕಾಲದಲ್ಲಿ ರಸ್ತೆಗಳು ಈಗಿನಂತಿರಲಿಲ್ಲ. ಗುಡ್ಡ, ಕಾಡುಗಳ ಮಧ್ಯ ಸಾಗುವಾಗ ವಿಷ ಜಂತುಗಳು ಕಚ್ಚಿ, ವಿಷ ದೇಹದಲ್ಲಿ ಹರಡಿದಿಯಾ ಎಂದು ತಿಳಿಯಲು ನಿಂಬೆ ಹಣ್ಣು, ಮೆಣಸಿನಕಾಯಿಯ ರುಚಿ ನೋಡುತ್ತಿದ್ದರು. ಒಂದು ವೇಳೆ ಹುಳಿ ಹಾಗೂ ಖಾರದ ರುಚಿ ಗೊತ್ತಾದರೆ ವಿಷ ದೇಹಕ್ಕೆ ಹರಡಿಲ್ಲ ಎಂದು ಭಾವಿಸಲಾಗುತ್ತಿತ್ತು. ರುಚಿ ಗೊತ್ತಾಗದೇ ಇದ್ದರೆ ವಿಷ ದೇಹದಲ್ಲಿ ಹರಡಿ ಎಂದು ತಿಳಿಯಲಾಗುತ್ತಿತ್ತು. ಹೀಗಾಗಿ ಈ ಹಿಮದೆ ವಾಹನಗಳಿಗೆ ನಿಂಬೆಹಣ್ಣು ಮೆಣಸಿನಕಾಯಿ ಕಟ್ಟು ಪದ್ಧತಿ ಇದೆ.
ಇನ್ನೂ ಇದು ದುಷ್ಟಶಕ್ತಿಗಳಿಂದ ಮನೆ ಹಾಗೂ ಕಚೇರಿಯನ್ನು ದೂರವಿಡುತ್ತದೆ. ನಿಂಬೆಹಣ್ಣು ಮತ್ತು ಮೆಣಸಿನಕಾಯಿ ನೇತು ಹಾಕುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ, ಅದರ ಬಗ್ಗೆ ಜನರು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದರ ಹಿಂದಿರುವ ವೈಜ್ಞಾನಿಕ ಕಾರಣವೆಂದರೆ ನಿಂಬೆಯ ಹುಳಿ ಮತ್ತು ಮೆಣಸಿನಕಾಯಿಯ ಖಾರವು ತುಂಬಾ ತೀವ್ರವಾದ ವಾಸನೆಯನ್ನು ಹರಡುತ್ತದೆ. ಇದಲ್ಲದೇ ಮನೆ ಬಾಗಿಲಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ನೇತು ಹಾಕುವುದರಿಂದ ಮನೆಯೊಳಗೆ ನೊಣ, ಸೊಳ್ಳೆಗಳು ಬರುವುದಿಲ್ಲ.












Click it and Unblock the Notifications