Get Updates
Get notified of breaking news, exclusive insights, and must-see stories!

Maha Shivratri 2025: ಶಿವ ನೆಚ್ಚಿನ ಬಿಲ್ವಪತ್ರೆ ಆರೋಗ್ಯ ಪ್ರಯೋಜನಗಳು

ಮಹಾಶಿವರಾತ್ರಿ ಶಿವನ ಆರಾಧನೆಯ ಪ್ರಮುಖ ಹಬ್ಬ. ಇದನ್ನು ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ಬಾರಿಯ ಶಿವೋತ್ಸವವನ್ನು ಫೆಬ್ರವರಿ 26 ರಂದು ಆಚರಿಸಲಾಗುವುದು. ಈ ದಿನ ಭಕ್ತರು ಶಿವನಿಗೆ ಬಿಲ್ವಪತ್ರೆ ಎಲೆಗಳನ್ನು ಅರ್ಪಿಸುತ್ತಾರೆ. ಪರ ಶಿವನಿಗೆ ಬಿಲ್ವಪತ್ರೆ ಪ್ರಿಯವಾಗಿದೆ. ಇದರ ಧಾರ್ಮಿಕ ಮಹತ್ವವನ್ನು ಹೊರತುಪಡಿಸಿ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.

ಬಿಲ್ವಪತ್ರೆ ಧಾರ್ಮಿಕ ಪ್ರಾಮುಖ್ಯತೆ

ನಂಬಿಕೆಯ ಪ್ರಕಾರ ಸತಿ ದೇವಿಯು ತನ್ನ ತಂದೆ ದಕ್ಷನ ಯಾಗದಲ್ಲಿ ಆತ್ಮಾಹುತಿ ಮಾಡಿಕೊಂಡಾಗ, ಶಿವನು ತುಂಬಾ ದುಃಖಿತನಾದನು. ಅವನ ದುಃಖದ ಸ್ಥಿತಿಯನ್ನು ನಿವಾರಿಸಲು ಶಿವನ ಭಕ್ತರು ಬಿಲ್ವಪತ್ರೆಗಳನ್ನು ಅರ್ಪಿಸಲು ನಿರ್ಧರಿಸಿದರು. ಬಿಲ್ವಪತ್ರೆ ಶಿವನನ್ನು ಮೆಚ್ಚಿಸುತ್ತದೆ. ಬಿಲ್ವಪತ್ರೆ ಎಲೆಗಳನ್ನು ಅರ್ಪಿಸುವುದರಿಂದ ಭಕ್ತನ ಎಲ್ಲಾ ಆಸೆಗಳು ಈಡೇರುತ್ತವೆ. ಅವನ ಎಲ್ಲಾ ದುಃಖಗಳು ಮತ್ತು ನೋವುಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

Mahashivratri 2025 why is bel patra offered to shiva what are its health benefits

ಬಿಲ್ವಪತ್ರೆ ಆರೋಗ್ಯ ಪ್ರಯೋಜನಗಳು:-

ಉರಿಯೂತ ನಿವಾರಕ ಗುಣಲಕ್ಷಣ

ಬಿಲ್ವಪತ್ರೆ ರೋಗ ನಿವಾರಕ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸಂಧಿವಾತದಂತಹ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ.

ರೋಗನಿರೋಧಕ ಶಕ್ತಿ ಬಲ

ಬಿಲ್ವಪತ್ರೆ ಸೇವನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಇದ್ದು, ಇದು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.

ಜೀರ್ಣಕ್ರಿಯೆಗೆ ಸಹಾಯ

ಬಿಲ್ವಪತ್ರೆ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಗ್ಯಾಸ್, ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಣ

ಬಿಲ್ವಪತ್ರೆಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದು ಮಧುಮೇಹ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಒತ್ತಡ ಮತ್ತು ಆತಂಕ ಕಡಿಮೆ

ಬಿಲ್ವಪತ್ರೆ ಬಳಕೆಯಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುವುದು. ಇದರ ರಸವನ್ನು ಸೇವಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುವುದು. ಜೊತೆಗೆ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನ ಆಶೀರ್ವಾದ ದೊರೆಯುವುದಲ್ಲದೆ, ಭಕ್ತರಿಗೆ ಗಮನಾರ್ಹ ಆರೋಗ್ಯ ಪ್ರಯೋಜನಗಳೂ ದೊರೆಯುತ್ತವೆ. ಈ ಹಬ್ಬದಂದು ಬಿಲ್ವಪತ್ರೆಯನ್ನು ಅರ್ಪಿಸಿ ವಿಶೇಷ ಪೂಜೆ ಮಾಡುವುದು ಮಾನಸಿಕ ನೆಮ್ಮದಿಯನ್ನು ನಿಡುತ್ತದೆ. ಅಲ್ಲದೆ ಇದು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+