ಪ್ರೇಯಸಿಗೆ ಈ ಹೂವು ಕೊಟ್ಟರೆ ನಿಮ್ಮ ಲವ್ ಸಕ್ಸಸ್
ಜ್ಯೋತಿಷ್ಯದ ಪ್ರಕಾರ ಕಮಲದ ಹೂವನ್ನು ಬಹಳ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಹೂವು ಸಂಪತ್ತು, ಸಮೃದ್ಧಿ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ. ಅಲ್ಲದೆ ಇದು ಲಕ್ಷ್ಮಿ ದೇವಿ ಮತ್ತು ವಿಷ್ಣುವಿನ ನೆಚ್ಚಿನ ಹೂವು. ಕಮಲದ ಹೂವನ್ನು ಬ್ರಹ್ಮಕಮಲ ಎಂದೂ ಕರೆಯುತ್ತಾರೆ.
ಶಾಸ್ತ್ರಗಳ ಪ್ರಕಾರ ನೀವು ನಿಮ್ಮ ಕೂದಲಿಗೆ ಕಮಲದ ಹೂವನ್ನು ಇಟ್ಟರೆ ಅಥವಾ ನಿಮ್ಮ ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಈ ಹೂವನ್ನು ಇಟ್ಟುಕೊಂಡರೆ ಅದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಇದು ನಿಮ್ಮ ಕೆಲಸಗಳನ್ನು ವೇಗಗೊಳಿಸುತ್ತದೆ. ಅಲ್ಲದೆ ಗ್ರಹಗಳ ಸ್ಥಿತಿಯಲ್ಲಿಯೂ ಸುಧಾರಣೆ ತರುತ್ತದೆ.

ಕಮಲ ಮತ್ತು ಗ್ರಹಗಳ ಸಂಬಂಧ
ಜ್ಯೋತಿಷ್ಯದ ಪ್ರಕಾರ ಕಮಲದ ಹೂವು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತದೆ. ಆದರೆ ಕೂದಲು ಶನಿ ಗ್ರಹಕ್ಕೆ ಸಂಬಂಧಿಸಿದೆ. ಆದ್ದರಿಂದ ನೀವು ನಿಮ್ಮ ಕೂದಲಿಗೆ ಕಮಲದ ಹೂವನ್ನು ಇಟ್ಟರೆ ಅದು ನಿಮ್ಮ ಜೀವನದಲ್ಲಿ ಶನಿ ಮತ್ತು ಶುಕ್ರ ಎರಡರ ಸಕಾರಾತ್ಮಕ ಪರಿಣಾಮಗಳನ್ನು ಹೆಚ್ಚುವುದು. ಶನಿಯ ಕಾಟ ಅಥವಾ ಸಾಡೇಸಾತಿಯಿಂದ ಪ್ರಭಾವಿತರಾಗಿದ್ದರೆ, ಶುಕ್ರನ ಬೆಂಬಲವನ್ನು ಪಡೆಯಲು ಇದು ಪ್ರಯೋಜನಕಾರಿಯಾಗಿದೆ. ಇದರಿಂದ ನೀವು ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು.
ಕಚೇರಿಯಲ್ಲಿ ಕಮಲವನ್ನು ಇಟ್ಟುಕೊಳ್ಳುವುದರಿಂದಾಗುವ ಪ್ರಯೋಜನಗಳು
ಜ್ಯೋತಿಷ್ಯದ ಪ್ರಕಾರ ನಿಮ್ಮ ಕೆಲಸದ ಸ್ಥಳ ಅಥವಾ ಕಚೇರಿಯಲ್ಲಿ ಉತ್ತರ ದಿಕ್ಕಿಗೆ ಒಂದು ಬಟ್ಟಲು ನೀರಿನಿಂದ ತುಂಬಿಸಿ, ಅದರಲ್ಲಿ ಕಮಲದ ಹೂವನ್ನು ಇರಿಸಿ. ಅದರಲ್ಲಿ ಒಂದು ಬೆಳ್ಳಿ ನಾಣ್ಯವನ್ನು ಹಾಕಿ. ಈ ನೀರನ್ನು ಪ್ರತಿದಿನ ಬದಲಾಯಿಸಿ, ಹಗುರವಾಗಿ ನೀರನ್ನು ಸಿಂಪಡಿಸಿ. ಈ ನೀರನ್ನು ಪ್ರತಿದಿನ ಬದಲಾಯಿಸಲು ಸಾಧ್ಯವಾಗದಿದ್ದರೆ ವಾರದ ಶುಕ್ರವಾರದಂದು ಇದನ್ನು ಮಾಡಬಹುದು. ಹೀಗೆ ಮಾಡುವುದರಿಂದ ಇದು ನಿಮ್ಮ ದಕ್ಷತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬಹುದು.

ವೈವಾಹಿಕ ಜೀವನಕ್ಕೆ ಮಾಧುರ್ಯ
ಜ್ಯೋತಿಷ್ಯದ ಪ್ರಕಾರ ನಿಮ್ಮ ವೈವಾಹಿಕ ಜೀವನವನ್ನು ಸುಧಾರಿಸಲು ಅಥವಾ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಪ್ರೀತಿ ಮತ್ತು ಮಾಧುರ್ಯವನ್ನು ತರಲು ಬಯಸಿದರೆ, ಒಂದು ಕುಂಡದಲ್ಲಿ ಕಮಲದ ಹೂವನ್ನು ನೆಟ್ಟು ಅದನ್ನು ನಿಮ್ಮ ಮಲಗುವ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ.
ಈ ಹೂವು ಕೊಟ್ಟರೆ ನಿಮ್ಮ ಲವ್ ಸಕ್ಸಸ್
ಇನ್ನೂ ಪ್ರೇಮಿ ತನ್ನ ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ಪ್ರೀತಿ ವ್ಯಕ್ತಪಡಿಸಲು ಗುಲಾಬಿ ಹೂವಿನ ಬದಲು ಕಮಲದ ಹೂವು ನೀಡಿದರೆ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಪ್ರೀತಿಗೆ ಒಪ್ಪಿಗೆ ಸಿಗುವ ಸಾಧ್ಯತೆಗಳು ಹೆಚ್ಚು. ಕಮಲದ ಹೂವು ಜನರನ್ನು ಆಕರ್ಷಿಸುತ್ತದೆ. ಇದನ್ನು ನೋಡಿದಾಗ ಮನಸ್ಸಿಗೆ ಖುಷಿ ಆಗಲಿದೆ. ಅಲ್ಲದೆ ಇದು ದೇವರ ನೆಚ್ಚಿನ ಹೂವಾಗಿರುವುದರಿಂದ ನಿರಾಕರಿಸಲು ಮನಸ್ಸಾಗದು.












Click it and Unblock the Notifications