krishna janmashtami 2023: ಮನೆಯಲ್ಲಿ ಸಂಪತ್ತು ಪ್ರಾಪ್ತಿಗಾಗಿ ಈ ಸ್ಥಳದಲ್ಲಿ ಕೃಷ್ಣನ ಮೂರ್ತಿ ಇಡಿ...
ನಾವು ನಮ್ಮ ಮನೆಯಲ್ಲಿ ದೇವರ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುತ್ತೇವೆ. ಲಕ್ಷ್ಮಿ, ಸರಸ್ವತಿ, ವಿನಾಯಕ ಹಾಗೂ ಶ್ರೀಕೃಷ್ಣನ ಮೂರ್ತಿಗಳನ್ನು ಸಾಮಾನ್ಯವಾಗಿ ಮನೆಯಲ್ಲಿಟ್ಟು ಪೂಜಿಸುವ ಪದ್ಧತಿ ಇದೆ.
ಕೃಷ್ಣನ ವಿಗ್ರಹಗಳು ನೋಡಲು ಸುಂದರವಾಗಿ ಇರುತ್ತವೆ. ಜೊತೆಗೆ ಈ ವಿಗ್ರಹಗಳ ಪೂಜೆಯಿಂದ ಮನೆಯಲ್ಲಿ ಶಾಂತಿ, ನೆಮ್ಮೆದಿ, ಪ್ರೀತಿ, ಅದೃಷ್ಟ ನೆಲೆಸಿರುತ್ತದೆ ಎಂದು ನಂಬಲಾಗಿದೆ. ವಿಶೇಷವಾಗಿ ಕೃಷ್ಣ ಜಯಂತಿಯಂದು ಕೃಷ್ಣನ ವಿಗ್ರಹವನ್ನು ಖರೀದಿಸಿ ಮನೆಯಲ್ಲಿ ಇಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

ಆದರೆ ಈ ವಿಗ್ರಹವನ್ನು ಖರೀದಿಸಿ ಮನೆಯಲ್ಲಿಟ್ಟು ಪೂಜೆ ಮಾಡುವುದು ಮಾತ್ರವಲ್ಲದೆ ಅದನ್ನು ಸರಿಯಾದ ದಿಕ್ಕಿನಲ್ಲಿಡುವುದು ಮುಖ್ಯ. ವಾಸ್ತು ಪ್ರಕಾರ ಮನೆಯಲ್ಲಿ ಇಟ್ಟಿರುವ ಯಾವುದೇ ವಸ್ತುವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡಬೇಕು. ಆಗ ಮಾತ್ರ ನಿಮ್ಮ ಮನೆಯಲ್ಲಿ ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.
ಅದೂ ಕೂಡ ಮನೆಯಲ್ಲಿ ಕೃಷ್ಣನ ವಿಗ್ರಹಗಳನ್ನು ಇರಿಸುವಾಗ ಸರಿಯಾದ ದಿಕ್ಕು, ಸರಿಯಾದ ಸ್ಥಳ ಮತ್ತು ವಿಗ್ರಹದ ವಾಸ್ತುವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮನೆಯಲ್ಲಿ ತಪ್ಪಾದ ಜಾಗದಲ್ಲಿ ಕೃಷ್ಣನ ಮೂರ್ತಿಗಳನ್ನು ಇಟ್ಟರೆ ಅದು ಅದೃಷ್ಟದ ಬದಲು ಅಶುಭವನ್ನು ನೀಡುತ್ತದೆ. ಹಾಗಾದರೆ ಕೃಷ್ಣನ ವಿಗ್ರಹವನ್ನು ಯಾವ ಸ್ಥಳದಲ್ಲಿ ಇಡಬೇಕು? ಎನ್ನುವ ವಾಸ್ತು ನಿಯಮಗಳನ್ನು ನೋಡೋಣ.
ಕೃಷ್ಣನ ಮೂರ್ತಿ ಇಡುವಾಗ ಇವುಗಳ ಬಗ್ಗೆ ಗಮನವಿರಲಿ
* ಕೃಷ್ಣನ ವಿಗ್ರಹ ಮಾತ್ರವಲ್ಲ, ಮನೆಯಲ್ಲಿ ಯಾವುದೇ ದೇವರ ವಿಗ್ರಹವನ್ನು ಇಡಬೇಕಾದರೂ ವಿಗ್ರಹದ ಎತ್ತರವನ್ನು ಮೊದಲು ಗಮನಿಸಬೇಕು. ಮತ್ತು ವಿಗ್ರಹದ ಎತ್ತರವನ್ನೂ ನೋಡಿ ಖರೀದಿ ಮಾಡಬೇಕು ವಿಗ್ರಹವು ಕಣ್ಣಿನ ಮಟ್ಟದಲ್ಲಿ ಗೋಚರಿಸುವಂತಿರಬೇಕು. ಅಂದರೆ ಅತಿ ಹೆಚ್ಚು ಅಥವಾ ತುಂಬಾ ಕಡಿಮೆ ಎತ್ತರ ಇರಬಾರದು.
* ಕೃಷ್ಣನ ವಿಗ್ರಹಗಳನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇರಿಸಬೇಕು. ಜೊತೆಗೆ ವಿಗ್ರಹ ಪೂರ್ವ ಅಥವಾ ಪಶ್ಚಿಮಕ್ಕೆ ಅಭಿಮುಖವಾಗಿರಬೇಕು. ಇದರ ಹೊರತಾಗಿ ಇರಿಸುವ ದಿಕ್ಕು ವಾಸ್ತು ಪ್ರಕಾರ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಶೌಚಾಲಯ ಅಥವಾ ಮಲಗುವ ಕೋಣೆಯ ಬಳಿ ದೇವರ ಮೂರ್ತಿಗಳನ್ನು ಇಡಬಾರದು ಎಂಬುದನ್ನು ನೆನಪಿಡಿ.
* ಕೃಷ್ಣನ ಮೂರ್ತಿಯನ್ನು ಮನೆಯಲ್ಲಿ ಇರಿಸುವಾಗ ವಿಗ್ರಹಕ್ಕೆ ಸರಿಯಾದ ಪ್ರಮಾಣದ ಬೆಳಕು ಸಿಗಬೇಕು. ಅದೂ ಆಗ್ನೇಯ ದಿಕ್ಕಿನಿಂದ ವಿಗ್ರಹಕ್ಕೆ ಬೆಳಕು ಬಡಿಯಬೇಕು. ದೇವಾಲಯಗಳಲ್ಲಿ ನೀವು ಗಮನಿಸಿದರೆ, ದೀಪಗಳನ್ನು ಈ ದಿಕ್ಕುಗಳಲ್ಲಿ ಇರಿಸಲಾಗುತ್ತದೆ. ಏಕೆಂದರೆ ಈ ದಿಕ್ಕು ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆಯೊಳಗೆ ಉತ್ತಮ ಶಕ್ತಿಯನ್ನು ಆಕರ್ಷಿಸುತ್ತದೆ. ಪರಿಣಾಮವಾಗಿ ಮನೆಯಲ್ಲಿ ಸಂಪತ್ತು ಮತ್ತು ಸಂತೋಷ ಹೆಚ್ಚಾಗುತ್ತದೆ.
* ಕೃಷ್ಣನ ಪ್ರತಿಮೆಯ ಪ್ರಕಾರ ಬಹಳ ಮುಖ್ಯ. ನಿಮ್ಮ ಮನೆಯಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದರೆ, ಮಗುವಿನ ಆಕಾರದ ಕೃಷ್ಣನ ವಿಗ್ರಹವನ್ನು ಇಡುವುದು ಒಳ್ಳೆಯದು. ಆದರೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಸಂಪತ್ತು ಹೆಚ್ಚಬೇಕೆಂದರೆ ಕರುವಿರುವ ಕೃಷ್ಣನ ವಿಗ್ರಹವನ್ನು ಖರೀದಿಸಿ ಇಟ್ಟುಕೊಳ್ಳಬೇಕು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications