ಗರ್ಭಿಣಿಯರು ಮೊಟ್ಟೆ ತಿನ್ನುವುದು ಸರಿಯೋ? ತಪ್ಪೋ? ಮಿಸ್‌ ಮಾಡದೇ ಈ ಮಾಹಿತಿ ಓದಿ

ಇಲ್ಲವೇ ಎಂದು ಮಹಿಳೆಯರು ತಿಳಿದುಕೊಳ್ಳಲೇ ಬೇಕು. ಖನಿಜ ಮತ್ತು ಕೊಬ್ಬಿನಂತಹ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಮೊಟ್ಟೆ ಆಹಾರ ಪದ್ಧತಿಯಲ್ಲಿರಬೇಕಾದ ಪ್ರಮುಖ ಆಹಾರ. ಆದರೆ ಗರ್ಭಾವಸ್ಥೆಯಲ್ಲಿ ಮೊಟ್ಟೆ ತಿನ್ನಲು ಕೆಲವು ನಿರ್ಬಂಧಗಳು ಮತ್ತು ನಿಯಮಗಳಿವೆ.

ಗರ್ಭಾವಸ್ಥೆಯಲ್ಲಿ ಮೊಟ್ಟೆಯು ಆರೋಗ್ಯಕರ ಆಹಾರದಲ್ಲಿ ಒಂದು. ಆದರೆ ಮಿತಿಮೀರಿದ ಸೇವನೆಯಿಂದ ತಾಯಿಯ ಆರೋಗ್ಯ ಮತ್ತು ಭ್ರೂಣದ ಬೆಳವಣಿಗೆಯ ಮೇಲೆ ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಹೀಗಾಗಿ ಗರ್ಭಿಣಿಯರು ಮೊಟ್ಟೆಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಮತ್ತು ಅಪಾಯಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

Is It Safe To Eat Eggs During Pregnancy: What You Should Know

ಗರ್ಭಿಣಿಯರು ಮೊಟ್ಟೆಗಳನ್ನು ಸಂಪೂರ್ಣವಾಗಿ ಬೇಯಿಸಿ ಅಥವಾ ಮೊಟ್ಟೆಯಿಂದ ಮಾಡಿದ ಬೇಯಿಸಿದ ಖಾದ್ಯ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಹಸಿ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾದಂತಹ ಹಾನಿಕಾರಕ ಬ್ಯಾಕ್ಟೀರಿಯಾ ಇರುತ್ತದೆ. ಬೇಯಿಸುವುದರಿಂದ ಬ್ಯಾಕ್ಟೀರಿಯಾಗಳು ಸಾಯುತ್ತದೆ. ಹೀಗಾಗಿ ಮೊಟ್ಟೆಯನ್ನು ಆದಷ್ಟು ಬೇಯಿಸಿ ತಿನ್ನಬೇಕು.

ಗರ್ಭಾವಸ್ಥೆಯಲ್ಲಿ ಮೊಟ್ಟೆ ಸೇವನೆಯ ಉಪಯೋಗ

ಮೊಟ್ಟೆಗಳು ಪೋಷಕಾಂಶಗಳಿಂದ ಕೂಡಿದ ಆಹಾರವಾಗಿದ್ದು ತಾಯಿ ಮತ್ತು ಬೆಳೆಯುತ್ತಿರುವ ಮಗುವಿಗೆ ಒಳ್ಳೆಯದು. ಭ್ರೂಣದ ಪ್ರತಿಯೊಂದು ಕೋಶವು ಪ್ರೋಟೀನ್‌ನಿಂದ ಮಾಡಲ್ಪಟ್ಟಿರುವುದರಿಂದ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಪ್ರೋಟೀನ್ ಅತ್ಯಗತ್ಯ. ಸಾಕಷ್ಟು ಪ್ರಮಾಣದಲ್ಲಿ ಮೊಟ್ಟೆಗಳನ್ನು ತಿನ್ನುವುದು ಬೆಳೆಯುತ್ತಿರುವ ಭ್ರೂಣಕ್ಕೆ ಸಹಾಯಕವಾಗುತ್ತದೆ.

Is It Safe To Eat Eggs During Pregnancy: What You Should Know

ಮೊಟ್ಟೆಯಲ್ಲಿ ವಿಟಮಿನ್‌ ಬಿ, ವಿಟಮಿನ್‌ ಡಿ, ಸತು, ಕಬ್ಬಿಣ, ಫೋಲಿಕ್ ಆಮ್ಲ ಮತ್ತು ತಾಮ್ರದಂತಹ ಖನಿಜಗಳ ಸಮೃದ್ಧವಾಗಿದೆ. ಮೊಟ್ಟೆ ಸೇವನೆಯು ಭ್ರೂಣದ ಮೆದುಳಿನ ಬೆಳವಣಿಗೆ ಮತ್ತು ನರವ್ಯೂಹ ಬೆಳವಣಿಗೆಗೆ ಒಳ್ಳೆಯದು. ಗರ್ಭಾವಸ್ಥೆಯಲ್ಲಿ ಮಹಿಳೆಗೆ ಒಂದು ದಿನದಲ್ಲಿ ಮಾರು 200 ರಿಂದ 300 ಹೆಚ್ಚುವರಿ ಕ್ಯಾಲೋರಿಗಳು ಬೇಕಾಗುತ್ತವೆ. ಮೊಟ್ಟೆ ಸೇವನೆ ಸುಮಾರು 70 ಕ್ಯಾಲೊರಿಗಳನ್ನು ನೀಡುತ್ತದೆ. ಹೀಗಾಗಿ ತಾಯಿ ಮತ್ತು ಮಗುವಿಗೆ ಕ್ಯಾಲೋರಿ ಪೂರೈಸಲು ಸಹಾಯ ಮಾಡುತ್ತದೆ.

ನಿಯಮಿತವಾಗಿ ಮೊಟ್ಟೆಗಳನ್ನು ತಿನ್ನುವುದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇನ್ನು ಗರ್ಭಿಣಿ ಮಹಿಳೆ ಒಂದು ವಾರದಲ್ಲಿ ಮೂರಿಂದ ನಾಲ್ಕು ಬೇಯಿಸಿದ ಮೊಟ್ಟೆಗಳನ್ನು ಸೇವಿಸಬಹುದು ಎನ್ನಲಾಗಿದೆ.

Is It Safe To Eat Eggs During Pregnancy: What You Should Know

ಗರ್ಭಾವಸ್ಥೆಯಲ್ಲಿ ಮೊಟ್ಟೆ ಸೇವನೆಯ ಅನಾನುಕೂಲವೇನು..?

ಗರ್ಭಿಣಿಯರು ಸರಿಯಾಗಿ ಆರಿಸದ ಸರಿಯಾಗಿ ಬೇಯಿಸದ ಮೊಟ್ಟೆಗಳನ್ನು ಸೇವಿಸುವುದು ಅಪಾಯಕಾರಿಯಾಗಿದೆ. ಹಸಿ ಅಥವಾ ಬೇಯಿಸದ ಮೊಟ್ಟೆಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಅದು ವಿಷಕಾರಿ. ಬೇಯಿಸದ ಮೊಟ್ಟೆ ಸೇವನೆಯಿಂದ ಜ್ವರ, ವಾಂತಿ ಅತಿಸಾರ, ನಿರ್ಜಲೀಕರಣ ಮತ್ತು ಕಿಬ್ಬೊಟ್ಟೆಯ ನೋವು ಸೇರಿದಂತೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಇದು ಗರ್ಭಪಾತಕ್ಕೆ ಕಾರಣವಾಗಬಹುದು.

ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಮಗು ಹುಟ್ಟಿದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೊಟ್ಟೆ ಸೇವನೆಯಿಂದ ಕೆಲವು ಮಹಿಳೆಯರಿಗೆ ಚರ್ಮದ ಹಾಗೂ ಮೂಗಿನ ಅಲರ್ಜಿ ಬರುವ ಸಾಧ್ಯತೆ ಇದೆ. ಒಂದು ವೇಳೆ ಗರ್ಭಿಣಿ ಮಹಿಳೆ ಈ ಹಿಂದೆಯೇ ಕೊಲೆಸ್ಟ್ರಾಲ್‌ ಸಮಸ್ಯೆಯಿಂದ ಬಳಲುತ್ತಿದ್ದರೆ ಮೊಟ್ಟೆಯ ಹಳದಿ ಸೇವನೆಯಿಂದ ಕೊಲೆಸ್ಟ್ರಾಲ್‌ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಮೊಟ್ಟೆ ಸೇವನೆಯಲ್ಲಿ ಜಾಗ್ರತೆ ವಹಿಸಿ. ಇನ್ನು ಗರ್ಭಿಣಿ ಮಹಿಳೆಯರು ತಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ವೈದ್ಯರು ನೀಡುವ ಸಲಹೆಯನ್ನು ಮಾತ್ರ ಪಾಲಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+