Water Melon Juice: ಬೇಸಿಗೆಯಲ್ಲಿ ದೇಹ ತಂಪಾಗಿಸಲು ಪೆಪ್ಪರ್ ಕಲ್ಲಂಗಡಿ ಜ್ಯೂಸ್ ಸೇವಿಸಿ
ಬೇಸಿಗೆ ಐಳ, ಸೆಕೆಗೆ ಆಗಾಗ ನೀರು ಜ್ಯೂಸ್ ಕುಡಿಯಬೇಕೆನಿಸುವುದು ಸಾಮಾನ್ಯ. ಈ ಬಾರಿಯ ಬೇಸಿಗೆ ಬಿಸಿಲು ಕೂಡ ಜಾಸ್ತಿಯಿದ್ದು, ಇದು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹೆಚ್ಚೆಚ್ಚು ನೀರು ಹಾಗೂ ಜ್ಯೂಸ್‌ಗಳನ್ನು ಕುಡಿಯುವ ಮೂಲಕ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಬೇಕು.
ಈ ಬೇಸಿಗೆ ಸಮಯದಲ್ಲಿ ಜ್ಯೂಸ್ ಮಾಡಲು ಕೆಲವೊಂದು ಹಣ್ಣುಗಳು ಬೇಸಿಗೆಯ ಸಮಯದಲ್ಲಿ ಮಾತ್ರ ಹೆಚ್ಚು ಲಭ್ಯವಿರುತ್ತದೆ. ಅದರಲ್ಲಿ ಪ್ರಮುಖವಾಗಿ ಕಲ್ಲಂಗಡಿ ಹಣ್ಣು. ಬೇಸಗೆ ಸಮಯದಲ್ಲಿ ಎಲ್ಲಿ ಹೋದರೂ ಕಲ್ಲಂಗಡಿ ಹಣ್ಣು ಹಾಗೂ ಅದರ ಜ್ಯೂಸ್ ಸಿಗುತ್ತದೆ. ದೇಹವನ್ನು ತಂಪಾಗಿರಿಸಲು ಕಲ್ಲಂಗಡಿ ಹಣ್ಣು ಸಹಾಯ ಮಾಡುತ್ತದೆ. ಜೊತೆಗೆ ಈ ಹಣ್ಣು ರುಚಿ ಕೂಡ ಹೌದು. ಹೀಗಾಗಿ ಹೆಚ್ಚೆಚ್ಚು ಸೇವಿಸಬಹುದು.

ಕಲ್ಲಂಗಡಿ ಹಣ್ಣಿನಲ್ಲಿ ಎಲ್ಲಾ ರೀತಿಯ ಪ್ರೋಟೀನ್, ವಿಟಮಿನ್‌ಗಳು ಮತ್ತು ನಾರಿನಾಶ ಇರುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆಯಾಸ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ ಜೊತೆಗೆ ತೂಕ ಇಳಿಸಲು ಕೂಡ ಸಹಾಯಕಾರಿ.
ಇಷ್ಟೆಲ್ಲಾ ಉಪಯೋಗ ಇರುವ ಕಲ್ಲಂಗಡಿ ಹಣ್ಣು ಹಾಗೂ ಹಣ್ಣಿನ ಜ್ಯೂಸ್ ಸೇವಿಸುದರಿಂದ ಕೆಲವರಿಗೆ ಗಂಟಲಿನಲ್ಲಿ ನೋವು, ನೆಗಡಿಯಂತಹ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಅಂತವರು ಕಲ್ಲಂಗಡಿ ಜ್ಯೂಸ್ ಮಾಡುವ ಪೆಪ್ಪರ್ ಅಂದರೆ ಕಾಳುಮೆಣಸಿನ ಪುಡಿ ಬಳಸುವುದು ಉತ್ತಮ. ಹಾಗಾದರೆ ಕಾಳುಮೆಣಸಿನ ಪುಡಿ ಬಳಸಿ ಕಲ್ಲಂಗಡಿ ಜ್ಯೂಸ್ ಮಾಡುವುದು ಹೇಗೆ ತಿಳಿಯಿರಿ.

ಕಲ್ಲಂಗಡಿ ಜ್ಯೂಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಕಲ್ಲಂಗಡಿ ಹಣ್ಣು- 1 ಕಪ್
ಸಕ್ಕರೆ-2 ಚಮಚ ಅಥವಾ ರುಚಿಗೆ ತಕ್ಕಷ್ಟು
ಕಾಳು ಮೆಣಸಿನ ಪುಡಿ-ಒಂದು ಚಿಟಿಕೆ
ಉಪ್ಪು-ಒಂದು ಚಿಟಿಕೆ
ಕಲ್ಲಂಗಡಿ ಜ್ಯೂಸ್ ಮಾಡುವ ವಿಧಾನ
ಮೊದಲು ಕಲ್ಲಂಗಡಿ ಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಳಿಕ ಅದರಲ್ಲಿರುವ ಬೀಜಗಳನ್ನು ತೆಗೆದು ಬರೀ ಹಣ್ಣು ಇರುವಂತೆ ಬೇರ್ಪಡಿಸಿ. ನಂತರ ಈ ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಮಿಕ್ಸಿ್ ಜಾರಿಗೆ ವರ್ಗಾಯಿಸಿ, ಸಕ್ಕರೆ, ಒಂದು ಚಿಟಿಕೆ ಕಾಳು ಮೆಣಸಿನ ಪುಡಿ, ಒಂದು ಚಿಟಿಕೆ ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ಬೇರೆ ಪಾತ್ರೆಗೆ ವರ್ಗಾಯಿಸಿ, ರುಚಿಗೆ ಬೇಕಾದರೆ ಮತ್ತೆ ಸಕ್ಕರೆ ಸೇರಿಸಿ. ಕೊನೆಯಲ್ಲಿ ಉಳಿದ ಕೆಲವು ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಜ್ಯೂಸ್‌ಗೆ ಸೇರಿಸಿ. ಅಗತ್ಯವಿದ್ದರೆ ಐಸ್ ಕ್ಯೂಬ್‌ಗಳನ್ನು ಸೇರಿಸಿ ಸವಿಯಿರಿ.












Click it and Unblock the Notifications