Ragi Hesaru Bele Dose Recipe: ಪಟ್ ಎಂದು ತಯಾರಾಗುವ ರುಚಿಕರ, ಗರಿಗರಿಯಾದ ರಾಗಿ ಹೆಸರು ಬೇಳೆ ದೋಸೆ ರೆಸಿಪಿ ಇಲ್ಲಿದೆ

ಗ್ಲೂಟನ್ ಫ್ರೀ ಎಂದು ಹೆಸರಾಗಿರುವ ರಾಗಿ ಎಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಉತ್ತಮ ಪೋಷಕಾಂಶಗಳ ಖನಿಜವಾಗಿರುವ ರಾಗಿಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಬರೀ ರಾಗಿ ಮುದ್ದೆ ತಿಂದು ಬೇಜಾರಾಗಿದ್ದರೇ ದೋಸೆ, ಇಡ್ಲಿ, ಹಾಲುಬಾಯಿ ತರಹದ ತಿಂಡಿಗಳ ಮೂಲಕ ಸೇವಿಸಬಹುದು.

ರಾಗಿ ಜೊತೆಗೆ ಹೆಸರು ಬೆಳೆಯನ್ನು ಬೆರೆಸಿ ದೋಸೆ ಮಾಡಬಹುದು. ಇದು ಪಟಾಪಟ್ ಎಂದು ತಯಾರಾಗುವ ಜೊತೆಗೆ ಆರೋಗ್ಯಕರ ಕೂಡ ಹೌದು. ರಾಗಿ ಹೆಸರು ಬೇಳೆ ದೋಸೆ ಅಥವಾ ರಾಗಿ ಮೂಂಗ್ ದಾಲ್ ದೋಸೆ ಮಾಡಲು ಇಡೀ ರಾತ್ರಿ ನೆನೆಸಿ ಸಮಯ ಕೊಟ್ಟು ಮಾಡಬೇಕಿಲ್ಲ. ಪಟ್ ಅಂತ ತಯಾರಾಗುತ್ತದೆ.

How to make Ragi hesaru bele dose Green gram recipe

ಗರಿಗರಿಯಾದ, ಸುಲಭ ಮತ್ತು ಆರೋಗ್ಯಕರ ರಾಗಿ ಹೆಸರು ಬೇಳೆ ದೋಸೆಯನ್ನು ಹೆಸರು ಬೇಳೆ, ರಾಗಿ ಹಿಟ್ಟು, ಹಸಿರು ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಉಪ್ಪನ್ನು ಬಳಸಿ ತಯಾರಿಸಬಹುದು. 20 ನಿಮಿಷಗಳಲ್ಲಿ ಈ ತಿಂಡಿ ತಯಾರಾಗುತ್ತದೆ. ಇದು ಬೆಳಗ್ಗೆ ಬೇಗ ತಿಂಡಿ ಮಾಡಲು ಹುಡುಕುವವರಿಗೆ ಸುಲಭವಾದ ಆಯ್ಕೆ.

ರಾಗಿ ಹೆಸರು ಬೇಳೆ ದೋಸೆ ಮಾಡಲು ಬೇಕಾದ ಪದಾರ್ಥಗಳು

* 1/2 ಕಪ್ ಹೆಸರು ಬೇಳೆ

*1/2 ಕಪ್ ರಾಗಿ ಹಿಟ್ಟು

* 1 ಸೆಂ ಉದ್ದದ ಶುಂಠಿ

*2 ಹಸಿರು ಮೆಣಸಿನಕಾಯಿಗಳು

* ಸ್ವಲ್ಪ ಕೊತ್ತಂಬರಿ ಸೊಪ್ಪು

* ಅರ್ಧ ಟೀಸ್ಪೂನ್ ಜೀರಿಗೆ

*ರುಚಿಗೆ ತಕ್ಕಷ್ಟು ಉಪ್ಪು

How to make Ragi hesaru bele dose Green gram recipe

ರಾಗಿ ಹೆಸರು ಬೇಳೆ ದೋಸೆ ಮಾಡುವ ವಿಧಾನ

ಹೆಸರುಬೇಳೆಯನ್ನು 15 ನಿಮಿಷಗಳ ಕಾಲ ನೆನೆಸಿಡಿ. ನೆನೆಸಿದ ಹೆಸರುಬೇಳೆ ಮಿಕ್ಸಿ ಜಾರ್‌ನಲ್ಲಿ ಹಾಕಿಕೊಳ್ಳಿ. ರಾಗಿ ಹಿಟ್ಟು ಸೇರಿಸಿ. ಶುಂಠಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆ ಸೇರಿಸಿ. ಅಗತ್ಯವಿರುವ ನೀರು ಸೇರಿಸಿ ಮೃದುವಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬಟ್ಟಲಿಗೆ ಹಾಕಿಕೊಳ್ಳಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.

ಪ್ಯಾನ್ ಅನ್ನು ಬಿಸಿ ಮಾಡಿ, ಹಿಟ್ಟನ್ನು ತೆಳುವಾಗಿ ಹಾಕುತ್ತಾ ದೋಸೆ ಹಾಕಿ. ಮುಚ್ಚಳವನ್ನು ಮುಚ್ಚಿ ಮತ್ತು ಸಿದ್ಧವಾಗುವವರೆಗೆ ಬೇಯಿಸಿ. ಬಳಿಕ ಬಿಸಿ ಬಿಸಿ ದೋಸೆಯನ್ನು ತೆಂಗಿನಕಾಯಿ ಚಟ್ನಿ ಅಥವಾ ಟೊಮೋಟೋ ಚಟ್ನಿಯೊಂದಿಗೆ ಸವಿಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+