Potato Sandwich: ಮನೆಯಲ್ಲೇ ರುಚಿರುಚಿಯಾದ ಆಲೂಗಡ್ಡೆ ಸ್ಯಾಂಡ್‌ವಿಚ್ ತಯಾರಿಸುವುದು ಹೇಗೆ..?
ಸಂಜೆ ಹೊತ್ತಿಗೆ ಸ್ನ್ಯಾಕ್ಸ್ ತಿನ್ನಲೇ ಬೇಕು ಎನ್ನುವ ಅಭ್ಯಾಸ ಹಲವರಿಗಿದೆ. ಸಂಜೆಯಾದರೆ ಸಾಕು ಬಿಸಿಬಿಸಿ ಚಹಾದೊಂದಿಗೆ ಏನಾದರೂ ಕುರುಕಲು ತಿನ್ನಬೇಕು ಎನಿಸುತ್ತದೆ. ಈ ವೇಳೆ ಹೊರಗಿನ ತಿಂಡಿಗಳನ್ನು ತಿನ್ನದೇ ಮನೆಯಲ್ಲೇ ರುಚಿ ರುಚಿಯಾದ ತಿಂಡಿ ತಯಾರಿಸಿ.
ಮನೆಯಲ್ಲಿ ಬ್ರೆಡ್ ಹಾಗೂ ಆಲೂಗಡ್ಡೆ ಇದ್ದರೆ ಸಂಜೆಗೆ ಒಂದೊಳ್ಳೆ ಸ್ನ್ಯಾಕ್ಸ್‌ಗೆ ರೆಡಿ ಮಾಡಿ. ಸ್ಯಾಂಡ್‌ವಿಚ್ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಆಲೂಗಡ್ಡೆ ಸ್ಯಾಂಡ್‌ವಿಚ್ ನಾಲಿಗೆಗೂ ರುಚಿ..ದೇಹಕ್ಕೂ ಶಕ್ತಿ ಕೊಡುತ್ತದೆ. ಹೀಗಾಗಿ ಮನೆಯಲ್ಲೇ ರುಚಿ ರುಚಿಯಾದ ಆಲೂಗಡ್ಡೆ ಸ್ಯಾಂಡ್‌ವಿಚ್ ತಯಾರಿಸಿ ಸವಿಯಿರಿ. ಆಲೂಗಡ್ಡೆ ಸ್ಯಾಂಡ್‌ವಿಚ್ ತಯಾರಿಸುವ ಸರಳ ವಿಧಾನ ಇಲ್ಲಿದೆ.

ಆಲೂಗಡ್ಡೆ ಸ್ಯಾಂಡ್‌ವಿಚ್‌ಗೆ ಬೇಕಾಗುವ ಸಾಮಾಗ್ರಿಗಳು
ಬ್ರೆಡ್-8
ಬೆಣ್ಣೆ-2 ಚಮಚ
ಆಲೂಗಡ್ಡೆ-2
ಈರುಳ್ಳಿ-1
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ-1
ಮೆಣಸಿನ ಪುಡಿ-1/2 ಚಮಚ
ಗರಂ ಮಸಾಲಾ- 1/2 ಚಮಚ
ಉಪ್ಪು-ನಿಮ್ಮ ರುಚಿಗೆ ತಕ್ಕಷ್ಟು
ಸ್ವಲ್ಪ ನಿಂಬೆ ರಸ

ಆಲೂಗಡ್ಡೆ ಸ್ಯಾಂಡ್‌ವಿಚ್ ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಬೇಯಿಸಿಕೊಂಡು ಸಿಪ್ಪೆ ತೆಗೆಯಿರಿ. ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಹ ನುಣ್ಣಗೆ ಕತ್ತರಿಸಿಕೊಳ್ಳಿ. ಬಳಿಕ ಒಂದು ಬಟ್ಟಲಿನಲ್ಲಿ ಸಿಪ್ಪೆ ಸುಲಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ. ಸಣ್ಣದಾಗಿ ಕೊಚ್ಚಿದ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಜೊತೆಗೆ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿಯನ್ನು ಸಹ ಸೇರಿಸಿ ಮಿಶ್ರಣ ಮಾಡಿ. ಬಳಿಕ ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಹಾಗೂ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ ಒಂದು ಕಡೆ ಇರಿಸಿ.
ಇತ್ತ ಬ್ರೆಡ್‌ವೊಂದನ್ನು ತೆಗೆದುಕೊಂಡು ಬೇಕಿದ್ದರೆ ಟೋಮೆಟೋ ಸಾಸ್ ಹಚ್ಚಿ ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ ಬಳಿಕ ಇನ್ನೊಂಡು ಬ್ರೆಡ್‌ಅನ್ನು ಸ್ಯಾಂಡ್‌ವಿಚ್ ರೀತಿಯಲ್ಲಿ ಇರಿಸಿ. ಬಳಿಕ ಒಂದು ತವಾಕ್ಕೆ ಬೆಣ್ಣೆ ಹಾಕಿ ಬಿಸಿಯಾಗಲು ಇಡಿ. ಬೆಣ್ಣೆ ಕರಗಿದ ಮೇಲೆ ಮೊದಲೇ ಸಿದ್ಧಪಡಿಸಿಕೊಂಡ ಬ್ರೆಡ್‌ಅನ್ನು ತವಾದ ಮೇಲೆ ಹಾಕಿ. ಈಗ ಮತ್ತೆ ಬೆಣ್ಣೆಯ ಮತ್ತೊಂದು ಭಾಗಕ್ಕೆ ನೇರವಾಗಿ ಬೆಣ್ಣೆ ಹಚ್ಚಿ. ಮಧ್ಯಮ ಉರಿ ಬೆಂಕಿಯಲ್ಲಿ ಬ್ರೆಡ್ ಕಂದು ಬಣ್ಣಕ್ಕೆ ತಿರುಗವರೆಗೂ ಬೇಯಿಸಿ. ಕೊನೆಗೆ ತಾವಾದಿಂದ ತೆಗೆದು ಬ್ರೆಡ್ ತೆಗೆದು ಮಧ್ಯ ಕತ್ತರಿಸಿ ಟೊಮೆಟೊ ಸಾಸ್‌ನೊಂದಿಗೆ ಸವಿಯಿರಿ.












Click it and Unblock the Notifications