Plants: ಒಂದು ರೂಪಾಯಿ ಖರ್ಚಿಲ್ಲದೆ ಮನೆಯಲ್ಲಿ ಗಿಡ ಬೆಳೆಸುವುದು ಹೇಗೆ?
ಮನೆಯಲ್ಲಿ ಗಿಡಗಳನ್ನು ಬೆಳೆಸುವುದು ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಮನೆಯಲ್ಲಿ ಒಂದೆರೆಡು ಗಿಡಗಳು ಇದ್ದರೆ ಮನೆ ಗೋಡೆಗೆ ಬಣ್ಣ ಇಲ್ಲದೇ ಇದ್ದರೂ ಅದು ನೋಡಲು ಚಂದ ಕಾಣಿಸುತ್ತದೆ. ಮನೆಯ ಅಂದ ಮಾತ್ರವಲ್ಲದೆ ಆರೋಗ್ಯವನ್ನು ಈ ಗಿಡಗಳು ಉತ್ತಮವಾಗಿರಿಸುತ್ತವೆ. ಹೀಗಾಗಿ ಒಳಾಂಗಣ ಗಿಡಗಳಿಗೆ ಬೇಡಿಕೆ ಹೆಚ್ಚು. ಹಾಗಂತ ಎಲ್ಲರೂ ಗಿಡಗಳನ್ನು ಕೊಂಡು ತಂದು ಬೆಳೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಖರ್ಚಿಲ್ಲದೆ ಮನೆಯಲ್ಲಿ ಗಿಡಗಳನ್ನು ಬೆಳೆಸುವುದು ಹೇಗೆ?
ಸಾಮಾನ್ಯವಾಗಿ ಮನೆಯಂಗಳದಲ್ಲಿ ಹಾಗೂ ಟೆರೆಸ್ ಮೇಲೆ ಗಿಡಗಳನ್ನು ಬೆಳಸಲಾಗುತ್ತದೆ. ಹೂವಿನ ಗಿಡಗಳು ಹಾಗೂ ತುಳಿಸಿ ಗಿಡ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಬೆಳೆಸುವ ಸಸ್ಯಗಳು. ಮನೆಯ ಮುಂದೆ ಸ್ವಲ್ಪ ಸ್ಥಳವಿದ್ದರೂ ಸಾಕು ಚಿಕ್ಕದೊಂದು ಪಾಟ್ ಇಟ್ಟು ಅದರಲ್ಲಿ ಗುಲಾಬಿ ಹೂವೋ ಅಥವಾ ಇನ್ನಿತರ ಹೂವನ್ನು ಬೆಳೆಸುತ್ತಾರೆ. ಇದಕ್ಕೂ ಮಿಗಿಲಾಗಿ ತುಳಸಿ ಗಿಡವನ್ನು ಹೆಚ್ಚು ಬೆಳೆಸಲಾಗುತ್ತದೆ.

ಬಹುತೇಕರಿಗೆ ಗಿಡಗಳನ್ನು ಮನೆಯೊಳಗೆ ಬೆಳೆಸುವ ಆಸೆ ಇದ್ದರೂ ಸ್ಥಳದ ಕೊರತೆ ಇರುತ್ತದೆ. ಇನ್ನೂ ಕೆಲವರಿಗೆ ಸ್ಥಳವಿದ್ದರೂ ಹಣದ ಕೊರತೆ ಇರುತ್ತದೆ. ಹೀಗೆ ಗಿಡ ಬೆಳೆಸಲು ಸ್ಥಳವಿದ್ದು ಹಣ ಇಲ್ಲ ಅಂತ ಬೇಸರಗೊಂಡಿರುವವರಿಗೆ ಕೆಲ ಸಲಹೆಗಳು ಇಲ್ಲಿದೆ. ನೀವು ಇದನ್ನು ಅನುಸರಿಸುವ ಮೂಲಕ ನಿಮ್ಮ ಮನೆಯಲ್ಲಿ ಸುಂದರವಾದ ಗಿಡಗಳನ್ನು ಬೆಳೆಸಬಹುದು. ಹಾಗಾದರೆ ಖರ್ಚಿಲ್ಲದೆ ಮನೆಯಲ್ಲಿ ಗಿಡ ಬೆಳೆಸುವುದು ಹೇಗೆ ಎನ್ನುವುದನ್ನು ತಿಳಿಯೋಣ.
ನೀವು ಮನೆಯಲ್ಲಿ ಗಿಡ ಹಾಕಲು ಯೋಚನೆ ಮಾಡಿದ್ದರೆ ಅದಕ್ಕೆ ಬೇಕಾದ ಗೊಬ್ಬರವನ್ನು ಮನೆಯಲ್ಲೇ ತಯಾರಿಸಬಹುದು. ಮನೆಯಲ್ಲಿ ಗೊಬ್ಬರ ತಯಾರಿಸುವುದು ಹೇಗೆ? ಎಂದು ಮೊದಲು ತಿಳಿಯೋಣ. ಮನೆಯಲ್ಲಿ ಗಿಡ ಬೆಳೆಸಲು ಕೆಂಪು ಮಣ್ಣು, ಕಪ್ಪು ಮಣ್ಣು ಬೇಕಾಗುತ್ತದೆ.

ಮನೆಯಲ್ಲಿ ಗೊಬ್ಬರ ತಯಾರಿಸುವುದು ಹೇಗೆ?
* ತೆಂಗಿನ ನಾರಿನಿಂದ ಮನೆಯಲ್ಲಿ ಕೊಕೊಪೀಟ್ (coco peat) ಅನ್ನೋ ತಯಾರಿಸಬಹುದು. ಇದು ನಿಮಗೆ ಮನೆಯಲ್ಲಿ ಗಿಡ ಹಾಕಲು ಸಹಾಯಕವಾಗಿದೆ. ಮಣ್ಣಿಕ್ಕಿಂತಲು ಕೊಕೊಪೀಟ್ ಹಾಕಿ ಗಿಡ ಬೆಳೆಸುವುದರಿಂದ ಹೆಚ್ಚು ಆರೋಗ್ಯಕರವಾಗಿ ಗಿಡ ಬೆಳೆಸಬಹುದು.
* ಉಳಿದ ಸೊಪ್ಪು ಅಥವಾ ಅದರ ಕಡ್ಡಿ ಇದ್ದರೆ ಅದನ್ನು ಒಂದು ಜಾಗದಲ್ಲಿ ಹಾಕಿ ಅದರ ಮೇಲೆ ಕಪ್ಪು ಅಥವಾ ಕಪ್ಪು ಮಣ್ಣನ್ನು ಹಾಕಿ. ಹೀಗೆ ಹಾಕಿವಾಗ ಇದು ಬಿಸಿಲಿಗೆ ಇರುವುದು ಮುಖ್ಯ.
* ನಿಮ್ಮ ಮನೆ ಸುತ್ತಲು ಇರುವ ಮರ ಗಿಡಗಳಿಂದ ಉದುರಿದ ಎಲೆ ಹಾಗೂ ಕಡ್ಡಿಗಳನ್ನು ಒಂದೆಡೆ ಹಾಕಿ ಅದರ ಮೇಲೆ ಮಣ್ಣು ಹಾಕಿ ಬಿಡಿ. ಕೆಲ ದಿನಗಳ ನಂತರ ಅದು ಪುಡಿ ಆದ ಮೇಲೆ ಗಿಡಗಳಿಗೆ ಇದನ್ನು ಬಳಕೆ ಮಾಡಬಹುದು.
* ಸಗಣಿ ಕೂಡ ಗಿಡಗಳಿಗೆ ಉತ್ತಮವಾದ ಗೊಬ್ಬರ. ಇದರಿಂದಲೂ ನೀವು ಮನೆಯಲ್ಲಿ ಗಿಡಗಳನ್ನು ಬೆಳೆಸಬಹುದು.

ಖರ್ಚಿಲ್ಲದೆ ಮನೆಯಲ್ಲಿ ಗಿಡ ಬೆಳೆಸುವುದು ಹೇಗೆ?
* ಮನೆಯಲ್ಲಿ ಗಿಡ ಬೆಳೆಸಲು ಮಣ್ಣು ಇದ್ದರೆ ಮಾತ್ರ ಸಾಲದು ಇದಕ್ಕೆ ಗೊಬ್ಬರ, ನೀರು, ಬಿಸಿಲು ಹಾಗೂ ಕಾಳಜಿ ಕೂಡ ಮುಖ್ಯವಾಗಿರುತ್ತದೆ ಎನ್ನುವುದನ್ನು ಗಮನದಲ್ಲಿ ಇಡಿ.
* ಗಿಡ ಹಾಕಲು ಸಸ್ಯಗಳನ್ನು ಹೊರಗಡೆಯಿಂದ ಕೊಂಡು ತರಬೇಕೆಂದಿಲ್ಲ. ಅವುಗಳನ್ನು ಮನೆಯಲ್ಲೇ ಬೆಳೆಸಬಹುದು.
* ನೀವು ಹೊರಗಡೆ ಹೋದಾಗ ಅಥವಾ ನಿಮ್ಮ ಸ್ನೇಹಿತರ ಮನೆಗೆ ಹೋದಾಗ ಅಲ್ಲಿ ಗಿಡಗಳಿದ್ದರೆ ಅವರ ಬಳಿ ಕೇಳಿ ಗಿಡದ ಒಂದು ಕಡ್ಡಿಯನ್ನು ಕತ್ತರಿಸಿಕೊಂಡು ಬನ್ನಿ.
* ಒಂದು ಪಾಟ್‌ನಲ್ಲಿ ಕೆಂಪು ಮಣ್ಣು, ಕಪ್ಪು ಮಣ್ಣು, ಕೊಕೊಪೀಟ್ ಮಿಶ್ರಿತ ಮಣ್ಣನ್ನು ಹಾಕಿ.
* ನಂತರ ನೀವು ತಂದು ಗಿಡದ ಕಡ್ಡಿಯನ್ನು ಮಣ್ಣಿನಲ್ಲಿ ಇಟ್ಟು, ಆ ಕಡ್ಡಿಯ ತುದಿಯನ್ನು ಹಾಗೇ ಬಿಡಬೇಡಿ. ಅದರ ಮೇಲೆ ಸಗಣಿಯ ಉಂಡೆಯನ್ನು ಹಚ್ಚಿ. ಸಗಣಿ ಇಲ್ಲದೇ ಹೋದಲ್ಲಿ ಅದನ್ನು ಬಾಗಿಸಿ ಮಣ್ಣಲ್ಲಿ ಚುಚ್ಚಿ. ಸ್ವಲ್ಪ ನೀರು ಹಾಕಿ. ಪಾಟ್ ಅನ್ನು ಬಿಸಿಲಿಗೆ ಇಡಿ.
* ಇದಕ್ಕೆ ಮನೆಯಲ್ಲಿ ತಯಾರಿಸಿದ ಗೊಬ್ಬರವನ್ನೂ ಬಳಕೆ ಮಾಡಬಹುದು. ಈ ರೀತಿಯಲ್ಲಿ (ದಾಸವಾಳ, ಸೂಜಿ ಮಲ್ಲಿಗೆ, ತುಳಸಿ, ಪೇಪರ್ ರೋಸ್, ಮನಿ ಪ್ಲ್ಯಾಂಟ್, ತುಳಸಿ, ಗುಲಾಬಿ.. ಇತ್ಯಾದಿ ಗಿಡಗಳನ್ನು ಬೆಳೆಸಬಹುದು)

* ಕೆಲವರ ಮನೆಯಲ್ಲಿ ಇಂಥಹ ಗಿಡಗಳು ಹೆಚ್ಚಾಗಿ ಬೆಳೆದಿರುತ್ತವೆ. ಅದನ್ನು ಅವರು ಕತ್ತರಿಸಿ ಕೂಡ ಬೀಸಾಡಬಹುದು. ಅದನ್ನು ನೀವು ಮನೆಗೆ ತಂದು ತುಂಬಾ ಸುಲಭವಾಗಿ ಬೆಳೆಸಬಹುದು.
*ಹೀಗೆ ಬೆಳೆಸುವ ಗಿಡಗಳಿಗೆ ಕಾಳಜಿ ಅತ್ಯಗತ್ಯ. ಅದಕ್ಕೆ ನಿತ್ಯ ನೀರು, ಬಿಸಿಲು, ಬೇಡವಾದ ಎಲೆಗಳನ್ನು ತೆಗೆಯುವುದು ಇವೆಲ್ಲವನ್ನು ಚಾಚೂ ತಪ್ಪದೆ ಮಾಡಬೇಕಾಗುತ್ತದೆ.
* ಪ್ರವಾಸಕ್ಕೆ ಹೋದಾಗ ಅಥವಾ ಇನ್ನಿತರ ಸ್ಥಳಗಳಿಗೆ ಹೋದಾಗ ಮನೆಯಲ್ಲಿ ಬೆಳಸಬೇಕಾದ ಅದೆಷ್ಟೋ ಗಿಡಗಳು ಅಲ್ಲಿ ಸಿಗುತ್ತವೆ. ರಸ್ತೆ ಬದಿಯಲ್ಲೇ ಕೆಲವೊಮ್ಮ ಅವು ಬೆಳೆದಿರುತ್ತವೆ. ಅವುಗಳನ್ನು ನೀವು ಮನೆಯಲ್ಲಿ ತಂದು ಬೆಳಸಬಹುದು.
* ಟೊಮೆಟೊ ಬೀಜವನ್ನು ಪಾಟ್‌ನಲ್ಲಿ ಇಡಿ.
* ಮೆಣಸಿನಕಾಯಿ ಬೀಜ ಹಾಗೂ ಹಣ್ಣಿನ ಬೀಜವನ್ನೂ ನೀವು ಪಾಟ್‌ನಲ್ಲಿ ಹಾಕಿ ಗಿಡಗಳನ್ನು ಬೆಳಸಬಹುದು.
*ಮಾತ್ರವಲ್ಲ ಮಾರುಕಟ್ಟೆಯಲ್ಲಿ ಕೊಂಡು ತರುವ ಪುದೀನ ಎಲೆ ತೆಗೆದ ಕಾಂಡವನ್ನು ಮತ್ತೆ ಮಣ್ಣಿನಲ್ಲಿ ಇಡಿ. ಅದು ಚಿರುರುತ್ತದೆ. (ಇದರಂತೆ ತರಕಾರಿ ಬೀಜಗಳನ್ನು ಹಾಕಬಹುದು, ಸೊಪ್ಪನ್ನು ಮಣ್ಣಿನಲ್ಲಿ ಇಟ್ಟು ಮತ್ತೆ ಬೆಳೆಸಬಹುದು)
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications