Health Benefits of Ice Apple: ಕೈಯಲ್ಲಿ ಜಾರುವ, ಬಾಯಲ್ಲಿ ಕರಗುವ ತಾಳೆ ಹಣ್ಣು: ಆರೋಗ್ಯಕ್ಕೆ ಆಸ್ತಿ, ತಿನ್ನಬೇಕು ಜಾಸ್ತಿ!
ಬೇಸಿಗೆ ಬಂತೆಂದರೆ ದೇಹದ ಉಷ್ಣತೆಯಿಂದ ನಾನಾ ಸಮಸ್ಯೆಗಳು ಉಂಟಾಗುತ್ತವೆ. ಈ ಋತುವಿನಲ್ಲಿ ತಾಪಮಾನ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ನೀರು ಕುಡಿಯಬೇಕು. ಪಾನೀಯಗಳನ್ನು ಆಗಾಗ ತೆಗೆದುಕೊಳ್ಳಬೇಕು. ಹೆಚ್ಚು ಹಣ್ಣುಗಳನ್ನು ಸೇವಿಸಬೇಕು. ಹಣ್ಣಿನಲ್ಲಿ ವಿಶೇಷವಾಗಿ ಕಲ್ಲಂಗಡಿ, ಕರ್ಬೂಜಾ ಜೊತೆಗೆ ಸೌತೇಕಾಯಿ, ಪೇರು ಹಣ್ಣು ಇವೆಲ್ಲವೂ ದೇಹಕ್ಕೆ ತಂಪನ್ನು ನೀಡುತ್ತವೆ. ಈ ಹಣ್ಣುಗಳ ಸಾಲಿನಲ್ಲಿ ತಾಳೆ ಹಣ್ಣು ಕೂಡ ಸೇರಿದೆ.
ತಾಲೆ ಹಣ್ಣು ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುತ್ತದೆ. ಕೈಯಲ್ಲಿ ಜಾರುವ, ಬಾಯಲ್ಲಿ ಕರಗುವ ತಾಳೆ ಹಣ್ಣು ಆರೋಗ್ಯಕ್ಕೆ ಆಸ್ತಿ ಅಂತಲೇ ಹೇಳಬಹುದು. ಹಾಗಾದರೆ ತಾಳೆ ಹಣ್ಣಿನಲ್ಲಿರುವ ಆರೋಗ್ಯಕರ ಪ್ರಯೋಜನಗಳು ಯಾವವು? ಅವುಗಳಿಂದ ದೇಹಕ್ಕೆ ಯಾವೆಲ್ಲಾ ಲಾಭವಿದೆ ಎನ್ನುವುದನ್ನು ತಿಳಿಯೋಣ.

ಪೋಷಕಾಂಶಗಳ ಆಗರ:
ತಾಳೆ ಹಣ್ಣು ಸಾಕಷ್ಟು ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ವಿಟಮಿನ್ ಬಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳಿವೆ. ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶವಿದೆ .ದೇಹದಲ್ಲಿನ ಕೆಟ್ಟ ಕೊಬ್ಬನ್ನು ನಿಯಂತ್ರಿಸುವ ಶಕ್ತಿ ಇದಕ್ಕಿದೆ.
ತಾಳೆ ಹಣ್ಣು ಆರೋಗ್ಯಕರ ಪ್ರಯೋಜನಗಳು:-
*ದೇಹದ ತೂಕ ಕಡಿಮೆ ಮಾಡುವ ಹಣ್ಣು
ಇದಲ್ಲದೆ ಕೊಬ್ಬನ್ನು ನಿಯಂತ್ರಿಸುವ ಮತ್ತು ದೇಹದ ತೂಕವನ್ನು ಕಡಿಮೆ ಮಾಡುವ ಶಕ್ತಿ ತಾಳೆ ಹಣ್ಣಿಗಿದೆ. ತಾಳೆ ಹಣ್ಣಿನಲ್ಲಿರುವ ನೀರು ಹೊಟ್ಟೆಯನ್ನು ಬೇಗ ತುಂಬಿಸುತ್ತದೆ. ಹಸಿವನ್ನು ನಿಯಂತ್ರಿಸುತ್ತದೆ. ಮಲಬದ್ಧತೆ ಮತ್ತು ಅತಿಸಾರ ಎರಡಕ್ಕೂ ಪರಿಹಾರವಾಗಿ ಇದನ್ನು ಸೇವಿಸಬಹುದು. ಹೊಟ್ಟೆಯ ಅಸ್ವಸ್ಥತೆಯನ್ನು ಗುಣಪಡಿಸಲು ತಾಳೆ ಹಣ್ಣು ತುಂಬಾ ಒಳ್ಳೆಯದು. ಮಲಬದ್ಧತೆ ಮತ್ತು ಅತಿಸಾರದಿಂದ ಬಳಲುತ್ತಿರುವವರು ಹೆಚ್ಚು ತಾಳೆಹಣ್ಣನ್ನು ತಿನ್ನಬಹುದು.

* ಬೇಸಿಗೆಯಲ್ಲಿ ದೇಹವನ್ನು ಸಕ್ರಿಯಗೊಳಿಸುವ ಐಸ್ ಸೇಬು
ತಾಳೆ ಹಣ್ಣನ್ನು ವಿಶೇಷವಾಗಿ ಪ್ರೀತಿಯಿಂದ ಐಸ್ ಸೇಬು ಎಂದೂ ಕರೆಯುತ್ತಾರೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮಾನವ ನಿರ್ಮಿತ ಔಷಧವಾಗಿದೆ. ಇದು ಬೇಸಿಗೆ ಋತುವಿನಲ್ಲಿ ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ತಾಳೆ ಹಣ್ಣು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಮತ್ತು ದೇಹದ ತೂಕವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
*ಜೀರ್ಣಕ್ರಿಯೆಗೆ ಉತ್ತಮ
ದೇಹದ ಉಷ್ಣತೆಯಿಂದ ಬಳಲುತ್ತಿರುವವರು ಎಷ್ಟೇ ನೀರು ಕುಡಿದರೂ ಬಾಯಾರಿಕೆ ತಣಿಸಿಕೊಳ್ಳುವುದಿಲ್ಲ. ತಾಳೆ ಹಣ್ಣು ತಿಂದರೆ ಬಾಯಾರಿಕೆ ಕಡಿಮೆಯಾಗಿ ದೇಹ ತಂಪಾಗುತ್ತದೆ. ಗರ್ಭಿಣಿಯರು ತಾಳೆ ಹಣ್ಣು ತಿಂದರೆ ಜೀರ್ಣಕ್ರಿಯೆ ಉತ್ತಮಗೊಂಡು ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆ ದೂರವಾಗುತ್ತದೆ.

* ರಕ್ತಹೀನತೆ ನಿವಾರಣೆ
ರಕ್ತಹೀನತೆ ಇರುವವರಿಗೆ ತಾಳೆ ಹಣ್ಣು ಉತ್ತಮ ಔಷಧಿ. ತಾಳೆಹಣ್ಣಿನಲ್ಲಿರುವ ಆಂಥೋಸಯಾನಿನ್ ಎಂಬ ರಾಸಾಯನಿಕ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗೆಡ್ಡೆಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ತಾಳೆ ಮರದ ಎಳನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಬೇಸಿಗೆಯಲ್ಲಿ ಉಂಟಾಗುವ ಸಮಸ್ಯೆಗಳು ದೂರವಾಗುತ್ತವೆ.
*ಕರುಳಿನ ಸಮಸ್ಯೆಯಿಂದ ಮುಕ್ತಿ
ತಾಳೆ ಹುಣ್ಣುಗಳು ಕರುಳಿನ ಸಮಸ್ಯೆಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ. ಹೀಗಾಗಿ ಬೇಸಿಗೆಯಲ್ಲಿ ಬಿಸಿಲ ತಾಪ ತಡೆಯಲು ತಾಳೆ ಹಣ್ಣು ತಿನ್ನಬೇಕು ಎಂದು ಸಲಗೆ ನೀಡಲಾಗುತ್ತದೆ. ವಯಸ್ಕರು ಮತ್ತು ಯುವಜನಾಂಗ ತಾಳೆ ಹಣ್ಣಿನ ಚರ್ಮವನ್ನು ತೆಗೆಯದೆಯೇ ತಿನ್ನುವುದು ಉತ್ತಮ. ಇದನ್ನು ತಿಂದರೆ ದೇಹದಲ್ಲಿ ನೀರಿನಂಶ ಹೆಚ್ಚುತ್ತದೆ ಮತ್ತು ಬಿಸಿಲಿನಿಂದ ಉಂಟಾಗುವ ತಲೆಸುತ್ತು ಕಡಿಮೆಯಾಗುತ್ತದೆ.

* ಹೊಟ್ಟೆಯ ನಾನಾ ಸಮಸ್ಯೆಗಳಿಗೆ ರಾಮಬಾಣ ತಾಳೆ
ಹೊಟ್ಟೆ ಹುಣ್ಣು, ಹೊಟ್ಟೆಯ ಸಮಸ್ಯೆಗಳು, ಮಲಬದ್ಧತೆ, ದೇಹದ ಆಯಾಸ, ಚರ್ಮ ರೋಗಗಳು, ಲಿವರ್ ಸಮಸ್ಯೆ, ಅಜೀರ್ಣ, ಶಕ್ತಿಯ ಕೊರತೆ ಕೂಡ ಈ ತಾಳೆ ಹಣ್ಣಿನಿಂದ ಗುಣವಾಗುತ್ತವೆ. ಗರ್ಭಿಣಿಯರೂ ಈ ಹಣ್ಣು ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಾಗುತ್ತದೆ. ಅಸಿಡಿಟಿ ಸಮಸ್ಯೆ ಇರುವುದಿಲ್ಲ.












Click it and Unblock the Notifications