ನಿಮ್ಮ ಮಕ್ಕಳು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳಿ: ಯಾಕೆ ಗೊತ್ತೇ?
ಇವತ್ತು ಮಕ್ಕಳು ಹಾದಿ ತಪ್ಪಿದ ಬಗ್ಗೆ ನೋವು ತೋಡಿಕೊಳ್ಳುವ ಪೋಷಕರನ್ನು ಅಲ್ಲಲ್ಲಿ ಕಾಣುತ್ತಿರುತ್ತೇವೆ. ಮಕ್ಕಳು ಕಷ್ಟಬಾರದೆಂದು ತಾವೇ ಕಷ್ಟಪಟ್ಟು ದುಡಿದು ಅವರಿಗೆ ಯಾವುದೇ ತೊಂದರೆ ಆಗದಂತೆ ಕೇಳಿದ್ದನ್ನೆಲ್ಲ ಕೊಟ್ಟು ಕಷ್ಟವೇ ಇಲ್ಲದಂತೆ ಸಾಕಿ ಸಲಹಿ ಕೊನೆ ಗಳಿಗೆಯಲ್ಲಿ ಮಕ್ಕಳು ಹಾದಿ ತಪ್ಪಿದರೆ ಮಕ್ಕಳಿದ್ದೂ ಪ್ರಯೋಜನವೇನು ಎಂಬ ಆಲೋಚನೆ ಬಾರದಿರದು. ಸಮಸ್ಯೆ ಎಲ್ಲಿದೆ ಎಂದು ಹುಡುಕುತ್ತಾ ಹೋದರೆ ಮೂಲ ಮಕ್ಕಳಿಗೆ ಸಂಸ್ಕಾರ ಕಲಿಸದಿರುವುದೇ ಆಗಿದೆ.
ಬೆತ್ತಲೆಯಾಗಿ ಭೂಮಿಗೆ ಬರುವ ಮಗು ನಂತರ ಹೆತ್ತವರ ಆರೈಕೆಯಲ್ಲಿ ಬೆಳೆದು ಅವರ ಆಚಾರ, ವಿಚಾರ, ನಡೆ, ನುಡಿಯನ್ನು ಅನುಕರಣೆ ಮಾಡುವುದು ಸಾಮಾನ್ಯ. ಮಗು ಬೆಳೆಯುತ್ತಿದ್ದಂತೆಯೇ ಸುತ್ತಲಿನ ಪರಿಸರ, ಬೆಳೆಯುತ್ತಿರುವ ವಾತಾವರಣ ಎಲ್ಲವೂ ಅದರ ಮೇಲೆ ಪರಿಣಾಮ ಬೀರುತ್ತದೆ. ಪೋಷಕರ ಹಿಡಿತದಲ್ಲಿ ಬೆಳೆಯುವ ಮಗು ನಂತರ ಪ್ರೌಢಾವಸ್ಥೆಗೆ ಕಾಲಿಟ್ಟಾಗ ಅಥವಾ ಆ ನಂತರದ ಬದುಕನ್ನು ಸಾಗಿಸುವಾಗ ಧರ್ಮದ ಮಾರ್ಗಕ್ಕಿಂತ ಅಧರ್ಮದ ಬಾಗಿಲು ಬಹಬೇಗ ತೆರೆದುಕೊಳ್ಳುತ್ತದೆ.

ಬಾಲ್ಯದಿಂದಲೇ ಧರ್ಮದ ಬಗ್ಗೆ ಅರಿತು ಸುಸಂಸ್ಕೃತ ಮನೆತನದಲ್ಲಿಯೇ ಬೆಳೆದಿದ್ದರೂ ಕೆಲವೊಮ್ಮೆ ಸಹವಾಸ ದೋಷದಿಂದಲೋ ಏನೋ ಅಧರ್ಮದ ಹಾದಿ ಹಿಡಿಯಬಹುದು. ನಂತರ ಮನವರಿಕೆಯಾಗಿ ತಾನು ಮಾಡಿದ್ದು ತಪ್ಪು ಎಂಬುದು ಅರಿವಾದಾಗ ಅದನ್ನು ದೂರ ತಳ್ಳಿ ಸನ್ಮಾರ್ಗದತ್ತ ನಡೆಯುವುದು ಜಾಣತನ. ಒಮ್ಮೆ ಅಧರ್ಮದ ಹಾದಿ ಹಿಡಿದವನು ಅದರ ಹಿಡಿತದಿಂದ ಅಷ್ಟು ಸುಲಭವಾಗಿ ಹೊರ ಬರಲಾರ. ಏಕೆಂದರೆ ಅದು ನೀಡುವ ಸುಖ ಮತ್ತಿನ ಸುಖ. ಆದರೆ ಅದು ಹೆಚ್ಚು ದಿನ ಉಳಿಯದ, ಬದುಕನ್ನೇ ನಾಶಗೊಳಿಸುವ ಸುಖ ಎಂಬುದು ಆ ಕ್ಷಣಕ್ಕೆ ನಮಗೆ ತಿಳಿಯಲಾರದು. ಹಾಗೆ ತಿಳಿಯುವ ವೇಳೆಗೆ ಬದುಕು ಸರ್ವ ನಾಶದ ಅಂಚಿಗೆ ತಲುಪಿರುತ್ತದೆ.
ಅನೈತಿಕ ಮಾರ್ಗದಿಂದ ಪಡೆದ ಸಂಪತ್ತು ಉಳಿಯಲ್ಲ!
ಹಾಗೆ ನೋಡಿದರೆ ಪ್ರತಿ ವ್ಯಕ್ತಿಯೂ ಏಳು-ಬೀಳುಗಳನ್ನು ಬದುಕಿನಲ್ಲಿ ಕಂಡಿರುತ್ತಾನೆ. ಧರ್ಮದ ಹಾದಿಯಲ್ಲಿ ಹೊರಟವನಿಗೆ ತಕ್ಷಣಕ್ಕೆ ಜಯವಾಗಲೀ, ಸುಖವಾಗಲೀ ಸಿಗಲಾರದು. ಆದರೆ ನೆಮ್ಮದಿಗೆ ಎಂದೂ ಕೊರತೆ ಬಾರದು. ಬಹಳಷ್ಟು ಮಂದಿ ಸುತ್ತಲಿನವರು ಏಳಿಗೆಯಾದ ಬಗ್ಗೆ ತಮ್ಮಲ್ಲಿಯೇ ಹೀಗಳೆದುಕೊಳ್ಳುತ್ತಾರೆ. ನಾನೇನು ಮಾಡಿದ್ದೇನೆ? ಧರ್ಮದ ಹಾದಿ ಹಿಡಿದು ನಾನು ಸಾಧಿಸಿದ್ದೇನು? ಹೀಗೆ ಸಮಯ ಸಿಕ್ಕಾಗ ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ. ತಮ್ಮ ಬದುಕಿನಾವಧಿಯಲ್ಲಿ ಏನು ಸಂಪಾದಿಸಿದ್ದೇವೆ ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದ್ದೇವೆ ಎನ್ನುವುದೇ ಮುಖ್ಯವಾಗಿರುತ್ತದೆ.
ಅನೈತಿಕ ಮಾರ್ಗದಿಂದ ಗಳಿಸಿದ ಸಂಪತ್ತಿಗೆ ಕ್ರಮೇಣ ದೊಡ್ಡ ಮೊತ್ತದ ಕಂದಾಯ ಕಟ್ಟಬೇಕಾಗಬಹುದು ಎಂಬುದನ್ನು ನಾವು ಮರೆಯಬಾರದು. ಸತ್ಯಮೇವ ಜಯತೇ ಎಂಬ ವಾಕ್ಯದ ಪರಿಪಾಲನೆಯಲ್ಲಿ ನಡೆದರೆ ಶೀಘ್ರವಾಗಿ ಪ್ರಾಪ್ತಿ ದೊರೆಯದಿದ್ದರೂ, ಮಂದಗತಿಯ ಬರಡು ಬದುಕು ಸಿಕ್ಕರೂ ಆತ್ಮ ಸಂತೋಷ ಸದಾ ಉಳಿದಿರುತ್ತದೆ. ದುರ್ಮಾರ್ಗದಲ್ಲಿ ಹೊರಟವನಿಗೆ ಹೊರಗಿನ ಬೆಡಗಿನ ಪ್ರಪಂಚದ ಎಲ್ಲ ಸುಖಗಳು ದೊರೆತರೂ ಅಂತರಂಗದ ಅತೃಪ್ತಿ ಸದಾ ತಾಂಡವವಾಡುತ್ತಿರುತ್ತದೆ. ಹೀಗಾಗಿ ಮನಃಶಾಂತಿಯಿಲ್ಲದೆ, ಕೊರಗಿನಲ್ಲಿಯೇ ದಿನ ಕಳೆಯಬೇಕಾಗುತ್ತದೆ.

ಸನ್ಮಾರ್ಗದ ಹಾದಿಯಲ್ಲಷ್ಟೆ ಸುಖ, ನೆಮ್ಮದಿ
ನಾವು ಹಿಡಿದ ಮಾರ್ಗ ಸನ್ಮಾರ್ಗದಾಗಿದ್ದು, ಅದರಿಂದಲೇ ಸಾಧಿಸಬೇಕು. ಸಾಧಿಸಿದ್ದು, ಅದು ವಿದ್ಯೆಯೂ ಅಥವಾ ಇನ್ಯಾವುದೋ ಆಗಿರಲಿ ಅದನ್ನು ತುಂಬಾ ಜಾಗ್ರತೆಯಿಂದ ರಕ್ಷಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಹೆಚ್ಚು ಕಾಲ ನಮ್ಮೊಂದಿಗಿದ್ದು, ನಮ್ಮನ್ನು ಕಾಪಾಡುತ್ತವೆ. ಇಲ್ಲಾಂದ್ರೆ ಸಾಧನೆ, ಯಶಸ್ಸು, ಶ್ರೇಯಸ್ಸು, ಹಣ, ಸಂಪತ್ತು, ಎಲ್ಲವೂ ನಮ್ಮಿಂದ ನಿರ್ಗಮಿಸಲು ಹೆಚ್ಚು ಕಾಲವಿರಲಾರದು. ಆದ್ದರಿಂದ ಇವತ್ತು ಇದ್ದದ್ದು ನಾಳೆಯೂ ಇರುತ್ತದೆ ಎನ್ನಲಾಗುವುದಿಲ್ಲ. ಮೇಲೇರಿದವರು ಕೆಳಗಿಳಿಯಲೇ ಬೇಕಾಗುತ್ತದೆ. ಆದ್ದರಿಂದ ಸಿರಿತನ ಬಂದಾಗ ಹಿಗ್ಗದೆ, ಬಡತನದಲ್ಲಿ ಕುಗ್ಗದೆ ಬದುವುದನ್ನು ಕಲಿಯಬೇಕಾಗುತ್ತದೆ. ಮತ್ತು ಅದೇ ನಮ್ಮ ಬದುಕು ಎನ್ನುವುದರಲ್ಲಿ ಎರಡು ಮಾತಿಲ್ಲ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications