ಗ್ರೀನ್ ಟೀ vs ಬ್ಲಾಕ್ ಟೀ: ಆರೋಗ್ಯಕ್ಕೆ ಯಾವುದು ಬೆಸ್ಟ್? ಗೊಂದಲ ಬೇಡ, ತಜ್ಞರ ಉತ್ತರ ಇಲ್ಲಿದೆ
ಇಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಮೊದಲು ಬೇಡುವುದೆ ಗಿಡಮೂಲಿಕೆ ಚಹಾಗಳು. ಅದರಲ್ಲೂ ವಿಶೇಷವಾಗಿ 'ಗ್ರೀನ್ ಟೀ' ಮತ್ತು 'ಬ್ಲಾಕ್ ಟೀ' ನಡುವೆ ಯಾವುದು ಉತ್ತಮ ಎಂಬ ದೊಡ್ಡ ಮಟ್ಟದ ಚರ್ಚೆ ಮತ್ತು ಗೊಂದಲಲ್ಲಿದೆ. ಕೆಲವರು ಗ್ರೀನ್ ಟೀ ಕುಡಿಯಿರಿ ಎಂದರೆ ಇನ್ನು ಕೆಲವರು ಬ್ಲಾಕ್ ಟೀ ಆರೋಗ್ಯಕ್ಕೆ ರಾಮಬಾಣ ಎನ್ನುತ್ತಾರೆ. ಹಾಗಾದರೆ ಈ ಎರಡರಲ್ಲಿ ಯಾವುದು ನಿಜಕ್ಕೂ ಒಳ್ಳೆಯದು? ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಒಂದೇ ಗಿಡ, ಬೇರೆ ಬೇರೆ ರೂಪ!
ಗ್ರೀನ್ ಟೀ ಮತ್ತು ಬ್ಲಾಕ್ ಟೀ ಇವೆರಡನ್ನೂ 'ಕ್ಯಾಮೆಲಿಯಾ ಸಿನೆನ್ಸಿಸ್' ಎಂಬ ಒಂದೇ ಸಸ್ಯದಿಂದ ತಯಾರಿಸಲಾಗುತ್ತದೆ. ಆದರೆ ಇವುಗಳ ತಯಾರಿಕಾ ಪ್ರಕ್ರಿಯೆ ಮಾತ್ರ ವಿಭಿನ್ನ.
ಗ್ರೀನ್ ಟೀ: ಇವುಗಳನ್ನು ಅತಿ ಕಡಿಮೆ ಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಎಲೆಗಳನ್ನು ಹೆಚ್ಚು ಒಣಗಿಸದೆ ಇರುವುದರಿಂದ ಇವುಗಳಲ್ಲಿನ ಪೋಷಕಾಂಶಗಳು ಹಾಗೆಯೇ ಉಳಿಯುತ್ತವೆ.
ಬ್ಲಾಕ್ ಟೀ: ಈ ಚಹಾ ಎಲೆಗಳನ್ನು ಹೆಚ್ಚು ಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಯಿಂದಾಗಿ ಎಲೆಗಳು ಕಪ್ಪಾಗುತ್ತವೆ ಮತ್ತು ರುಚಿಯಲ್ಲಿ ಬದಲಾವಣೆ ಕಂಡುಬರುತ್ತದೆ.

ಪೋಷಕಾಂಶಗಳ ಸಮರ: ಯಾವುದರಲ್ಲಿ ಏನಿದೆ?
ಈ ಎರಡು ಪಾನೀಯಗಳು ದೇಹಕ್ಕೆ ಒಂದೇ ರೀತಿಯ ಲಾಭಗಳನ್ನು ನೀಡಿದರೂ, ಅವುಗಳ ಗುಣಲಕ್ಷಣಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ.
ಕೆಫೀನ್ ಅಂಶ: ಗ್ರೀನ್ ಟೀ ಸೇವನೆಯಿಂದ ದೇಹಕ್ಕೆ ಕಡಿಮೆ ಪ್ರಮಾಣದ ಕೆಫೀನ್ ಸಿಗುತ್ತದೆ. ಆದರೆ ಬ್ಲಾಕ್ ಟೀಯಲ್ಲಿ ಕೆಫೀನ್ ಪ್ರಮಾಣ ತುಸು ಅಧಿಕವಾಗಿರುತ್ತದೆ.
ರುಚಿ: ಗ್ರೀನ್ ಟೀ ಸ್ವಲ್ಪ ಕಹಿ ಅಥವಾ ಒಗರಾಗಿದ್ದರೆ, ಬ್ಲಾಕ್ ಟೀ ಸ್ವಲ್ಪ ಹುಳಿ ಮಿಶ್ರಿತ ರುಚಿಯನ್ನು ಹೊಂದಿರುತ್ತದೆ.
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ 'ಗ್ರೀನ್ ಟೀ' ಮುಂಚೂಣಿ
ಗ್ರೀನ್ ಟೀಯಲ್ಲಿ 'EGCG' (Epigallocatechin Gallate) ಎಂಬ ಶಕ್ತಿಶಾಲಿ ಆಂಟಿ-ಆಕ್ಸಿಡೆಂಟ್ ಇರುತ್ತದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ ಕ್ಯಾನ್ಸರ್ ಕಣಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ಸ್ತನ ಕ್ಯಾನ್ಸರ್, ಪ್ರೊಸ್ಟೇಟ್ ಮತ್ತು ಕೋಲನ್ ಕ್ಯಾನ್ಸರ್ ಬರದಂತೆ ತಡೆಯಲು ಗ್ರೀನ್ ಟೀ ಸಹಕಾರಿ. ಬ್ಲಾಕ್ ಟೀ ಸಂಸ್ಕರಣೆ ವೇಳೆ ಈ EGCG ಪ್ರಮಾಣ ಕಡಿಮೆಯಾಗುವುದರಿಂದ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಬ್ಲಾಕ್ ಟೀಗಿಂತ ಗ್ರೀನ್ ಟೀ ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಆರೋಗ್ಯಕ್ಕಾಗುವ ಪ್ರಯೋಜನಗಳು ಮತ್ತು ಮುನ್ನೆಚ್ಚರಿಕೆ
ಖಾಲಿ ಹೊಟ್ಟೆಯಲ್ಲಿ ಕುಡಿಯುವುದು: ಅತಿಯಾದ ಗ್ರೀನ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕೆಲವರಿಗೆ ಅಸಿಡಿಟಿ ಆಗಬಹುದು. ಊಟವಾದ 1 ಗಂಟೆಯ ನಂತರ ಗ್ರೀನ್ ಟೀ ಕುಡಿಯುವುದು ಉತ್ತಮ.
ಸಕ್ಕರೆ ಬಳಸಬೇಡಿ: ಇವೆರಡರ ಪೂರ್ಣ ಲಾಭ ಪಡೆಯಲು ಸಕ್ಕರೆ ಅಥವಾ ಹಾಲು ಸೇರಿಸದೆ ಕುಡಿಯಿರಿ. ರುಚಿಗಾಗಿ ಸ್ವಲ್ಪ ನಿಂಬೆ ರಸ ಅಥವಾ ಜೇನುತುಪ್ಪ ಸೇರಿಸಬಹುದು.












Click it and Unblock the Notifications