Get Updates
Get notified of breaking news, exclusive insights, and must-see stories!

Weight Loss: ತೂಕ ನಷ್ಟಕ್ಕೆ ಏಳು ದಿನ ತಿಂಡಿಯಲ್ಲಿ ಈ ಡಯಟ್‌ ಪ್ಲ್ಯಾನ್‌ ಫಾಲೋ ಮಾಡಿ

ತೂಕ ಹೆಚ್ಚಾಗುವುದು ವಿಶ್ವದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ. ಹಲವರು ಹೆಚ್ಚಿನ ತೂಕವನ್ನು ಹೊಂದಿದ್ದು, ರೋಗಗಳಿಗೆ ಗುರಿಯಾಗುತ್ತಾರೆ. ಭಾರತದಲ್ಲೂ ಈ ಸಮಸ್ಯೆ ಹೆಚ್ಚು ವ್ಯಾಪಕವಾಗಿದೆ. ಬೊಜನ್ನು ಕರಗಿಸಲು ಜನ ತರಹೇವಾರಿ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ.

ಬೊಜ್ಜನ್ನು ಕರಗಿಸುವುದರಿಂದ ಸುಂದರವಾಗಿ ಕಾಣಿಸುವುದಲ್ಲದೆ, ಮುಂದೆ ಆಗುವ ಆರೋಗ್ಯ ಸಮಸ್ಯೆಗಳಿಂದಲೂ ದೂರ ಉಳಿಯಬಹುದು. ಹೊಟ್ಟೆಯ ಕೊಬ್ಬನ್ನು ನೀವು ನೈಸರ್ಗಿಕವಾಗಿ ಕಡಿಮೆ ಮಾಡಲು ಉತ್ತಮ ಡಯಟ್‌ ಅವಶ್ಯಕ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಉತ್ತಮ ಡಯಟ್‌ ಹಾಗೂ ವ್ಯಾಯಮ ಅವಶ್ಯಕ.

Follow this 7-Day Breakfast Diet Plan for Weight Loss

ಬೆಳಗ್ಗೆಯ ತಿಂಡಿ ನಿಮ್ಮ ಬೊಜ್ಜು ಹೆಚ್ಚಾಗಿಸುತ್ತದೆ. ಹೀಗಾಗಿ ಬೆಳಗ್ಗೆ ಉತ್ತಮ ಹೈ ಪ್ರೋಟಿನ್ ಆಹಾರವನ್ನೇ ಸೇವಿಸಿ. ಒಳ್ಳೆಯ ತಿಂಡಿ ಮಾಡುವುದು ನಿಮ್ಮ ತೂಕ ನಷ್ಟದ ಕನಸಿಗೆ ಗೇಮ್‌ ಚೆಂಜರ್ ರೀತಿ ಕಾಣಿಸಿಕೊಳ್ಳಬಹುದು. ಬೆಳಗ್ಗೆ ಉತ್ತಮ ಆಹಾರ ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕ ಕಡಿಮೆ ಆಗಲು ಸಹಾಯಕ. ಒಂದು ವಾರ ಸೇವಿಸಬಹುದಾದ ತಿಂಡಿಯ ಬಗ್ಗೆ ವಿವರಣೆ ಇಲ್ಲಿದೆ.

ಮೊದಲ ದಿನ

ನಿಮ್ಮ ದಿನವನ್ನು ನೀರು ಸೇವಿಸುವುದರಿಂದ ಆರಂಭಿಸಿ. ಇದರಿಂದ ಚಯ ಪಚಯ ಕ್ರಿಯೆ ಉತ್ತಮವಾಗುತ್ತದೆ. ಅಲ್ಲದೆ ಇದರಿಂದ ದೇಹದಲ್ಲಿ ಕ್ಯಾಲೊರಿ ನಿಯಂತ್ರಿಸಲು ಸಹಾಯಕ. ತಿಂಡಿ ಪ್ರೋಬಯಾಟಿಕ್ ಆಹಾರಗಳಿಂದ ಕೂಡಿದ್ದರೆ ಒಳ್ಳೆಯದು. ಇಡ್ಲಿ ಅಥವಾ ದೋಸೆಯನ್ನು ತಿನ್ನಬಹುದು. ಈ ಆಹಾರವು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿ. ಪ್ರೋಬಯಾಟಿಕ್‌ ಸೇವನೆಯಿದ ತೂಕ ವೇಗವಾಗಿ ಕಡಿಮೆ ಆಗುತ್ತದೆ. ನೀವು ಕಡಿಮೆ ಕೊಬ್ಬಿನ ಮೊಸರನ್ನು ಸಹ ಸೇವಿಸಬಹುದು.

ಎರಡನೇ ದಿನ

ಆಹಾರ ತಜ್ಞರ ಪ್ರಕಾರ, ಚಹಾ ಕುಡಿಯುವದನ್ನು ಬಿಟ್ಟು, ಗ್ರೀನ್‌ ಟೀಗೆ ಶಿಫ್ಟ್‌ ಆಗಿ. ಗ್ರೀನ್‌ ಟೀ ಕೊಬ್ಬನ್ನು ಬರ್ನ್‌ ಮಾಡಲು ಸಹಾಯಕ. ಬೆಳಗಿನ ಉಪಾಹಾರದಲ್ಲಿ ಗ್ರೀನ್ ಟೀ ನಂತರ ಓಟ್ಸ್ ಸೇವಿಸಬೇಕು. ಓಟ್ಸ್ ಸೇವಿಸುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯಕ.

Follow this 7-Day Breakfast Diet Plan for Weight Loss

ಮೂರನೇ ದಿನ

ವಾರದ ಮೂರನೇ ದಿನ, ಉಪಾಹಾರಕ್ಕಾಗಿ ಮೊಟ್ಟೆಗಳನ್ನು ಸೇವಿಸಿಬಹುದು. ಇದರಲ್ಲಿ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತದೆ. ಮೊಟ್ಟೆಯ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಬೆಳಗಿನ ಉಪಾಹಾರಕ್ಕಾಗಿ ನೀವು ಬೇಯಿಸಿದ ಮೊಟ್ಟೆಗಳನ್ನು ಸೇವಿಸಬಹುದು.

ನಾಲ್ಕನೇ ದಿನ

ಗ್ರೀಕ್ ಮೊಸರು, ತಿನ್ನ ಬಹುದು. ಇದರ ಸೇವನೆಯಿಂದ ಹೆಚ್ಚಿನ ಪ್ರೋಟೀನ್ ಸಿಗುತ್ತದೆ. ಇದು ತೂಕ ನಷ್ಟಕ್ಕೆ ಸಹಾಯಕವಾಗಿದೆ.

ಐದನೇ ದಿನ

ವಾರದ ಐದನೇ ದಿನದಂದು ನೀವು ಮೊಳಕೆಯಿಂದ ಕೂಡಿದ ಸಲಾಡ್‌ ತಿನ್ನಬಹುದು. ಇದು ರಿಚ್‌ ಫೈಬರ್‌ನಿಂದ ಕೂಡಿರುತ್ತದೆ. ಫೈಬರ್ ಹೊಂದಿರುವ ಮೊಳಕೆ, ತರಕಾರಿಗಳನ್ನು ತಿನ್ನಬಹುದು. ಇದರಿಂದ ಕರುಳಿನ ಆರೋಗ್ಯ ವೃದ್ಧಿಸುತ್ತದೆ.

Follow this 7-Day Breakfast Diet Plan for Weight Loss

ಆರನೇ ದಿನ

ವಾರದ ಆರನೇ ದಿನ, ಬೆಳಗಿನ ಉಪಾಹಾರಕ್ಕಾಗಿ ತರಕಾರಿ ಹಾಗೂ ಕಡಿಲೆ ಬೇಳೆ ಅಥವಾ ಉದ್ದಿನ ಬೇಳೆಯಿಂದ ತಯಾರಿಸಿದ ದೋಸೆಯನ್ನು ತಿನ್ನಬಹುದು. ದೋಸೆ ಮಿಶ್ರಣಕ್ಕೆ ಹೆಚ್ಚಾಗಿ ತರಕಾರಿ ಹಾಕಿಕೊಂಡು ಸೇವನೆ ಮಾಡುವುದರಿಂದ ಹೆಚ್ಚಿನ ಪೋಷಕಾಂಶಗಳು ಸಿಗುತ್ತವೆ. ಇದು ಕೊಬ್ಬನ್ನು ಸುಡುವಲ್ಲಿ ಪ್ರಯೋಜನಕಾರಿಯಾಗಿದೆ.

ಏಳನೇ ದಿನ

ಬಾದಾಮಿ ಹಾಲಿನೊಂದಿಗೆ ನೀವು ದಿನವನ್ನು ಪ್ರಾರಂಭಿಸಬಹುದು. ಬಾದಾಮಿ ಹಾಲು ಹೊಟ್ಟೆಯನ್ನು ತುಂಬಿಸುತ್ತದೆ ಮತ್ತು ಆಹಾರದ ಹಸಿವನ್ನು ನಿಯಂತ್ರಿಸುತ್ತದೆ.

ಇನ್ನು ನಿಮ್ಮ ದೇಹಕ್ಕೆ ಈ ಮೇಲಿನ ಪದಾರ್ಥಗಳು ಒಗ್ಗಿಕೊಳ್ಳುತ್ತವೇಯೋ ಇಲ್ಲವೋ ಎಂಬುದನ್ನು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸೇವಿಸಿದರೆ ಒಳ್ಳೆಯದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+