Walking: ವಾಕಿಂಗ್ ಮಾಡುವಾಗ ಈ ತಪ್ಪನ್ನು ಮಾಡುತ್ತಿದ್ದೀರಾ? ತೂಕ ನಷ್ಟ ಆಗುತ್ತಿಲ್ಲವೇ?
ಇಗಿನಿ ಒತ್ತಡದ ಜೀವನದಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಸಮಯಕ್ಕೆ ಅನುಸಾರವಾಗಿ ನಾವು ಸಹ ಅಡ್ಜಸ್ಟ್ ಆಗಬೇಕಾಗುತ್ತದೆ. ಹೀಗೆ ನಾವು ಸಮಯಕ್ಕೆ ಹೊಂದಿಕೊಂಡು ನಡೆದು ಈಗ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಬಿಟ್ಟಿದ್ದೇವೆ. ಹೀಗಾಗಿ ಯುವ ಜನತೆ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇನ್ನು ದೆಹದಲ್ಲಿ ಕೊಬ್ಬು ಬೆಳೆದು ತೂಕ ಹೆಚ್ಚಾಗುತ್ತಿದೆ.
ಕೊಬ್ಬು ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಜನರು ತಮ್ಮ ಕೊಬ್ಬು ಹಾಗೂ ಮುಂದಿನ ಆರೋಗ್ಯವನ್ನು ಕಾಯ್ದುಕೊಳ್ಳಲು ವಾಕಿಂಗ್ ಹಾಗೂ ಜಿಮ್ ನಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ. ಇನ್ನು ಹಲವರು ತಮಗೆ ಹತ್ತಿರ ವಿರುವ ಪಾಕ್‌ನಲ್ಲಿ ವಾಕ್ ಮಾಡುತ್ತಾರೆ. ವಾಕಿಂಗ್ ಹೀಗೆ ಪಾಕ್‌ನಲ್ಲಿ ಒಂದೇ ಸ್ಥಳದಲ್ಲಿ ರೌಂಡ್ ಹೊಡೆಯುವುದುರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ತಜ್ಞರು ಸಲಹೆ.

ಸಾಮಾನ್ಯವಾಗಿ ಏನು ತಪ್ಪು ಮಾಡುತ್ತೇವೆ?
ಪ್ರತಿದಿನ ಬೆಳಿಗ್ಗೆ 40-45 ನಿಮಿಷಗಳ ವೇಗದ ನಡಿಗೆ ಉತ್ತಮ ವ್ಯಾಯಾಮವಾಗಿದೆ. ಬೆಳಿಗ್ಗೆ ಅನೇಕ ಜನರು ಉದ್ಯಾನವನದ ಸುತ್ತಲೂ ತಿರುಗುವುದನ್ನು ನೀವು ನೋಡುತ್ತೀರಿ. ನಗರ ಪ್ರದೇಶದಲ್ಲಿ ವಾಸಿಸುವ ಜನರು ಸಣ್ಣ ಉದ್ಯಾನವನಗಳನ್ನು ಸುತ್ತುತ್ತಾರೆ. ಆದರೆ ಆರೋಗ್ಯ ತಜ್ಞರು ಹೀಗೆ ನಡೆಯುವುದು ಸೂಕ್ತವೆಂದು ಹೇಳುವುದಿಲ್ಲ.
ಗಂಟೆಗಟ್ಟಲೆ ನಡೆದರೂ ತೂಕ ಕಡಿಮೆಯಾಗುತ್ತಿಲ್ಲ ಎಂದು ಕೆಲವರು ದೂರುತ್ತಾರೆ. ನಿಮ್ಮೊಂದಿಗೆ ಅದೇ ಆಗುತ್ತಿದ್ದರೆ, ನಡಿಗೆಯಲ್ಲಿ ನೀವು ಕೆಲವು ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದು ಅರ್ಥ. ನೀವು ಪ್ರತಿದಿನ ಸರಿಯಾಗಿ ನಡೆದರೆ, 40 ನಿಮಿಷಗಳ ನಡಿಗೆಯಲ್ಲಿ ನೀವು ಸುಲಭವಾಗಿ, ಒಂದು ತಿಂಗಳಿನಲ್ಲಿ 3-4 ಕೆಜಿ ತೂಕವನ್ನು ಕಳೆದುಕೊಳ್ಳಬಹುದು.
ಹೀಗೆ ವಾಕ್ ಮಾಡಬೇಡಿ?
ಗಾರ್ಡ್‌ನ ಸುತ್ತುವುದನ್ನು ನಿಲ್ಲಿಸಿ ಅಥವಾ ತಪ್ಪಿಸಿ. ಈ ರೀತಿ ನಡೆಯುವುದರಿಂದ ಯಾವುದೇ ಒಂದು ಭಾಗದ ಮೇಲೆ ಒತ್ತಡ ಬೀಳಬಹುದು. ನಡೆಯುವಾಗ ಅಥವಾ ಓಡುವಾಗ ನಿಮ್ಮ ಭಂಗಿಯನ್ನು ನೋಡಿಕೊಳ್ಳಿ. ಸೊಂಟದ ಕೆಳಗೆ ನಿಮ್ಮ ಕಾಲುಗಳನ್ನು ಒಟ್ಟಿಗೆ ಇರಿಸಿ. ತಲೆ ಮತ್ತು ಕುತ್ತಿಗೆಯನ್ನು ನೇರವಾಗಿ ಇರಿಸಿಕೊಂಡು ನಡೆಯಿರಿ.

ಸಿಮೆಂಟ್ ರಸ್ತೆಯಲ್ಲಿ ಲೈಟ್ ರನ್ ಮಾತ್ರ ಮಾಡಿ. ಉದ್ಯಾನವನದಲ್ಲಿ ಅಥವಾ ಕೆಸರಿನ ಸ್ಥಳದಲ್ಲಿ ವೇಗವಾಗಿ ಓಡಲು ಪ್ರಯತ್ನಿಸಿ.ವಾರದಲ್ಲಿ 2 ದಿನ ಮಾತ್ರ ಓಡಿ.
ಬಾಯಿ ತೆರೆದು ಉಸಿರಾಡಬೇಡಿ
ನಡೆಯುವಾಗ ಅಥವಾ ಓಡುವಾಗ ಬಾಯಿ ತೆರೆದು ಉಸಿರಾಡಬೇಡಿ. ಮೂಗಿನ ಮೂಲಕ ಉಸಿರಾಟವು ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ನಡೆಯುವಾಗ ಬಾಯಾರಿಕೆಯಾದಾಗಲೆಲ್ಲಾ ಒಂದು ಗುಟುಕು ನೀರು ಕುಡಿಯಿರಿ. 1 ಗಂಟೆ ನಡೆದರೆ, 250 ಮಿಲಿ ನೀರನ್ನು ಸೇವಿಸಬಹುದು. 1 ಗಂಟೆಯ ವೇಗದ ನಡಿಗೆ ಅಥವಾ ಜಾಗಿಂಗ್ ನಂತರ ಸೇಂದ ಲವಣ ಬೆರಿಸಿದ ನೀರನ್ನು ಕುಡಿಯಿರಿ. ಇದು ಸೋಡಿಯಂ ಸಮತೋಲನವನ್ನು ಕಾಪಾಡುತ್ತದೆ.
ಒಂದು ವೇಳೆ ನೀವು ವಾಕ್ ಮಾಡುವಾಗ ನಿಮ್ಮ ಭುಜಗಳು ಬಾಗಿದ್ದಲ್ಲಿ ನಿಮ್ಮ ವಾಕಿಂಗ್ ವೇಗ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ಕುತ್ತಿಗೆಯಲ್ಲಿ ನೋವನ್ನು ಉಂಟುಮಾಡಬಹುದು. ನಡಿಗೆಯ ಸಮಯದಲ್ಲಿ ಕೈ ಚಲನೆಯನ್ನು ಸಹ ನೋಡಿಕೊಳ್ಳಿ. ಕೈಯನ್ನು ಸಡಿಲವಾಗಿ ಬಿಟ್ಟು ವಾಕ್ ಮಾಡಿ. ಮುಷ್ಟಿಯನ್ನು ಬಿಗಿದುಕೊಂಡು ನಡೆಯುವುದರಿಂದ ಭುಜಗಳಲ್ಲಿ ನೋವು ಉಂಟಾಗುತ್ತದೆ.












Click it and Unblock the Notifications