Drumstick Brinjal Curry Recipe: ಸಂತೆಯಲ್ಲಿ ನುಗ್ಗೆಕಾಯಿ ಬದನೆಕಾಯಿ ತಂದಿರೆನು? ಹಿಂಗ ಸಾಂಬರ್ ಮಾಡ್ರಲ್ಲಾ... ಮಸ್ತ್ ಇರ್ತೈತಿ

ಸಂತೆಗೆ ಹೋದರೆ ತಾಜಾ ತಾಜಾ ತರಕಾರಿಯನ್ನು ಕೊಂಡು ತರಲಾಗುತ್ತದೆ. ಅವುಗಳನ್ನು ತಾಜಾವಾಗಿರುವಾಗಲೇ ಬೇಸಿಕೊಂಡು ತಿಂದರೆ ನಾಲೆಗೆಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಮನೆಯಲ್ಲಿ ನುಗ್ಗೆಕಾಯಿ ಹಾಗೂ ಬದನೆಕಾಯಿ ಇದ್ದರೆ ಇವೆರೆಡರ ಕಾಂಬಿನೇಷನ್‌ನಲ್ಲಿ ಸಾಂಬರ್ ತಯಾರಿಸಿ.

ಈ ಸಾಂಬರ್ ಅನ್ನದೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ. ಇದನ್ನು ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಇಷ್ಟಪಟ್ಟು ತಿಂತಾರೆ. ಮುಖ್ಯವಾಗಿ ಈ ಸ್ಟೈಲ್ ನಲ್ಲಿ ಸಾರು ಮಾಡಿದರೆ ಮನೆ ತುಂಬಾ ಘಮಾ ಘಮಾ ವಾಸನೆ ಬರುತ್ತದೆ. ಹಾಗಾದರೆ ತಡ ಮಾಡುವುದು ಬೇಡ ನುಗ್ಗೆಕಾಯಿ ಹಾಗೂ ಬದನೆಕಾಯಿ ಸಾರು ಮಾಡುವುದು ಹೇಗೆ ನೋಡೋಣ.

Drumstick Brinjal Curry Recipe Know How to Make Nuggekai Badankai Sambar in Kannada

ನೀವು ಕೂಡ ಮನೆಯಲ್ಲಿ ಒಂದು ಬಾರಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವನನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ. ಹಾಗಾದರೆ ನುಗ್ಗೆಕಾಯಿ ಹಾಗೂ ಬದನೆಕಾಯಿ ಸಾರು ಮಾಡುವ ವಿಧಾನವನ್ನು ಈಗ ತಿಳಿಯೋಣ.

ಅಗತ್ಯವಿರುವ ವಸ್ತುಗಳು:

* ಹುಣಸೆಹಣ್ಣು - 1 ನಿಂಬೆ ಗಾತ್ರ

* ಆಲಿವ್ ಎಣ್ಣೆ - 2 ಚಮಚ

* ಸಾಸಿವೆ - 1 ಚಮಚ

* ತೊಗರಿ ಬೇಳೆ - ಒಂದು ಹಿಡಿ

* ಈರುಳ್ಳಿ ಸೊಪ್ಪು - 20

* ಬೆಳ್ಳುಳ್ಳಿ - 10

* ಕರಿಬೇವಿನ ಎಲೆ

* ನುಗ್ಗೆಕಾಯಿ - 1

* ಬದನೆಕಾಯಿ - 6

* ಟೊಮೆಟೊ - 2 (ರುಬ್ಬಿದ)

* ಮೆಣಸಿನ ಪುಡಿ - 3 tbsp.

Drumstick Brinjal Curry Recipe Know How to Make Nuggekai Badankai Sambar in Kannada

ರುಬ್ಬುವುದಕ್ಕೆ...

* ತೆಂಗಿನಕಾಯಿ - 2 ಚಿಪ್ಸ್

* ಜೀರಿಗೆ - 1/2 ಟೀಸ್ಪೂನ್

* ಮೆಣಸು - 1/2 ಟೀಸ್ಪೂನ್

ಪಾಕವಿಧಾನ:

* ಮೊದಲು ಹುಣಸೆ ಹಣ್ಣನ್ನು ಒಂದು ಕಪ್ ನೀರಿನಲ್ಲಿ 15 ನಿಮಿಷ ನೆನೆಸಿ ಉಪ್ಪನ್ನು ಹಾಕಿ. ನಂತರ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ, ರಸವನ್ನು ಹೊರತೆಗೆದು ಪಕ್ಕಕ್ಕೆ ಇರಿಸಿ.

* ನಂತರ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ.

* ಬಳಿಕ ತೊಗರಿ ಬೇಳೆ ಸೇರಿಸಿ ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ. ಎರಡು ಕಪ್ ನೀರು ಹಾಕಿ ಇದಕ್ಕೆ ಉಪ್ಪು, ಖಾರದ ಪುಡಿ, ಹುಣಸೆಹಣ್ಣಿನ ರಸ ಹಾಕಿ.

* ಒಂದು ಮಿಕ್ಸರ್ ಜಾರ್ ನಲ್ಲಿ ತೆಂಗಿನಕಾಯಿ, ಜೀರಿಗೆ, ಮೆಣಸು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಂಡು ಗ್ರೇವಿಗೆ ಹಾಕಿ ಕುಕ್ಕರ್ ಮುಚ್ಚಿ ಎರಡು ವಿಸಿಲ್ ಆಗುವವರೆಗೆ ಬಿಡಿ.

* ನಂತರ ಕರಿಬೇವಿನ ಸೊಪ್ಪು, ನುಗ್ಗೆಕಾಯಿ ಹಾಗೂ ಬದನೆಕಾಯಿ ಹಾಕಿ ಚೆನ್ನಾಗಿ ಕುದಿಸಿ

* ನಂತರ ಸಾರಿಗೆ ಮೆಣಸಿನ ಪುಡಿ ಸೇರಿಸಿ 1 ನಿಮಿಷ ಬೆರೆಸಿದರೆ ರುಚಿಕರವಾದ ಬದನೆಕಾಯಿ ನುಗ್ಗೆಕಾಯಿ ಕರಿ ಗ್ರೇವಿ ರೆಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+