ಮನೆಯಲ್ಲಿ ಈ 5 ಗಿಡಗಳನ್ನು ನೆಟ್ಟರೆ ಲಕ್ಷ್ಮಿ ಮತ್ತು ಶಿವನ ಆಶೀರ್ವಾದ!
ಮರ, ಸಸ್ಯಗಳು ಮನೆಗೆ ಸಂತೋಷ, ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತವೆ ಎಂದು ನಂಬಲಾಗುತ್ತದೆ. ವಾಸ್ತು ಪ್ರಕಾರ ಮರ ಮತ್ತು ಗಿಡಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ, ಆಗ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದರ ಹೊರತಾಗಿ ಆರೋಗ್ಯವೂ ಸುಧಾರಿಸುತ್ತದೆ. ಜೊತೆಗೆ ಮನೆಯಲ್ಲಿ ಈ 5 ಗಿಡಗಳನ್ನು ನೆಟ್ಟರೆ ಲಕ್ಷ್ಮಿ ಮತ್ತು ಶಿವನ ಆಶೀರ್ವಾದ ಸಿಗುತ್ತದೆ.
ಮನೆಯ ಅಂದವನ್ನು ಹೆಚ್ಚಿಸಲು ಕೆಲವರು ಇಂತಹ ಗಿಡಗಳನ್ನು ಮನೆಯಲ್ಲಿ ನೆಡುತ್ತಾರೆ. ಮನೆಯಲ್ಲಿ ಎಲ್ಲಾ ರೀತಿಯ ಸಸ್ಯಗಳನ್ನು ಬೆಳೆಸಲು ಸಾಧ್ಯವಾಗುವುದಿಲ್ಲ. ಆದರೆ ಕೆಲವು ಸಸ್ಯಗಳನ್ನು ಮನೆಯಲ್ಲಿ ಬೆಳಸಬಹುದು. ಹಾಗಾದರೆ ಮನೆಯಲ್ಲಿ ಯಾವ ಗಿಡಗಳನ್ನು ನೆಡಬೇಕು ಎಂದು ತಿಳಿಯೋಣ.

* ಮೋಹಿನಿ ಗಿಡ (Crassula and Jade Plant)
ಮೋಹಿನಿಯನ್ನು ಇಂಗ್ಲಿಷ್‌ನಲ್ಲಿ ಕ್ರಾಸ್ಸುಲಾ ಮತ್ತು ಜೇಡ್ ಪ್ಲಾಂಟ್ (Crassula and Jade Plant) ಎಂದು ಕರೆಯಲಾಗುತ್ತದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಅಲ್ಲದೆ ನಿಮ್ಮ ಮನೆಯ ವಾತಾವರಣ ಒತ್ತಡದಿಂದ ಕೂಡಿದ್ದರೆ ಅಥವಾ ಯಾವಾಗಲೂ ತೊಂದರೆಯಿಂದ ಕೂಡಿದ್ದರೆ ಮನೆಯಲ್ಲಿ ಮೋಹಿನಿ ಗಿಡವನ್ನು ನೆಡಬೇಕು.

*ಹಾವಿನ ಗಿಡ (snake plant)
ಕಷ್ಟಪಟ್ಟರೂ ಪ್ರಗತಿ ಕಾಣದಿದ್ದರೆ ಮನೆಯಲ್ಲಿ ಹಾವಿನ ಗಿಡ (snake plant)ವನ್ನು ನೆಟ್ಟರೆ ಸಾಕು. ಹಾವಿನ ಗಿಡ ನೆಡುವುದರಿಂದ ವೃತ್ತಿಯಲ್ಲಿ ಪ್ರಗತಿಯಾಗುತ್ತದೆ. ನಿಮ್ಮ ವೃತ್ತಿಜೀವನವು ಸ್ಥಗಿತಗೊಂಡಿದ್ದರೆ ಅಥವಾ ನಿಮ್ಮ ಉದ್ಯೋಗದಲ್ಲಿ ಬಡ್ತಿ ಪಡೆಯಲು ಸಾಧ್ಯವಾಗದಿದ್ದರೆ, ನಿಮ್ಮ ಅಧ್ಯಯನ ಅಥವಾ ಕೆಲಸದ ಸ್ಥಳದಲ್ಲಿ ಹಾವಿನ ಗಿಡವನ್ನು ಇರಿಸಿ.

*ಮನಿ ಪ್ಲ್ಯಾಂಟ್ (money plant)
ಈ ಸಸ್ಯದ ಹೆಸರು ಹಣದೊಂದಿಗೆ ಸಂಬಂಧಿಸಿದೆ. ಆದ್ದರಿಂದ ಹಣದ ಸಮಸ್ಯೆ ಎದುರಾದರೆ ಮನಿ ಪ್ಲ್ಯಾಂಟ್ ಇಡುವುದು ನಿಮ್ಮ ಜೀವನದಲ್ಲಿ ಆರ್ಥಿಕ ಪ್ರಗತಿಯನ್ನು ತರುತ್ತದೆ. ಇದಲ್ಲದೆ ನಿಮ್ಮ ಹಣ ಎಲ್ಲೋ ಸಿಕ್ಕಿಹಾಕಿಕೊಂಡರೆ ಮತ್ತು ಸಿಗದಿದ್ದರೆ ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ನೆಡಬೇಕು. ಇದರಿಂದ ಹಣ ಕೈ ಸೇರಲಿದೆ.

*ಬಳ್ಳಿ ಗಿಡ (vine plant)
ಮನೆಯಲ್ಲಿ ಬಳ್ಳಿ ಗಿಡವನ್ನು ನೆಟ್ಟರೆ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಮನೆಯಲ್ಲಿ ಒಂದು ಬಳ್ಳಿ ಗಿಡವನ್ನು ನೆಡುವುದರಿಂದ ಸಂಪತ್ತಿನ ಅಧಿಪತಿ ಕುಬೇರ ಮತ್ತು ಲಕ್ಷ್ಮಿ ದೇವಿಗೆ ತುಂಬಾ ಸಂತೋಷವಾಗುತ್ತದೆ. ಬಳ್ಳಿ ಗಿಡವನ್ನು ನೋಡಿಕೊಳ್ಳಲು ಮರೆಯದಿರಿ. ಧೂಳು ಮತ್ತು ಕೊಳಕು ಅದರ ಮೇಲೆ ನೆಲೆಗೊಳ್ಳಲು ಬಿಡಬೇಡಿ. ಇದು ಮನೆಗೆ ಆರ್ಥಿಕ ಸಮೃದ್ಧಿಯನ್ನು ತರುತ್ತದೆ.

* ಬನ್ನಿ ಮರ (Shami plant)
ಆರ್ಥಿಕ ಸಮೃದ್ಧಿಗಾಗಿ ಮನೆಯಲ್ಲಿ ಬನ್ನಿ ಮರವನ್ನು ನೆಡಬೇಕು. ಶಿವನಿಗೆ ಬನ್ನಿ ಗಿಡ ಎಂದರೆ ತುಂಬಾ ಇಷ್ಟ. ಮನೆಯಲ್ಲಿ ಬನ್ನಿ ಗಿಡ ನೆಟ್ಟರೆ ದಾರಿದ್ರ್ಯ ದೂರವಾಗುತ್ತದೆ. ಇದಲ್ಲದೆ ಶಿವನಿಗೆ ಬನ್ನಿ ಹೂವುಗಳನ್ನು ಅರ್ಪಿಸುವುದರಿಂದ ಶಿವನ ವಿಶೇಷ ಅನುಗ್ರಹ ಸಿಗಲಿದೆ.












Click it and Unblock the Notifications