ಮರೆತು ಹೋಗಿರುವ 7 ಭಾರತೀಯ ಬೇಸಿಗೆ ಹಣ್ಣುಗಳು: ಆರೋಗ್ಯ ಲಾಭಗಳು ಮತ್ತು ಸಂಪೂರ್ಣ ಮಾಹಿತಿ

ಈ ಹಿಂದೆ ಬೇಸಿಗೆ ಬಂತೆಂದರೆ ಸಾಕು ಈ ಹಣ್ಣುಗಳೇ ನಮ್ಮ ಬಾಲ್ಯದ ನೆನಪುಗಳನ್ನು ನೆನಪಿಸುತ್ತವೆ. ಆದರೆ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕೂಡ ಇತರ ಹಣ್ಣುಗಳು ಕಾಣಿಸೋದು ಬಹಳ ಅಪರೂಪ ಆಗಿದೆ. ಇಲ್ಲಿದೆ ಇಂತಹ 8 ಮರೆತುಹೋಗುತ್ತಿರುವ ಭಾರತೀಯ ಬೇಸಿಗೆ ಕಾಲದ ಹಣ್ಣುಗಳ ಬಗ್ಗೆ ಸರಳ ಮಾಹಿತಿ:

1. ಬೆಟ್ಟ ಕಣಗಲು (Elephant Apple)

ಪೂರ್ವ ಭಾರತದ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಹಣ್ಣು, ಅತ್ಯಂತ ಗಟ್ಟಿಯಾದ ಹೊರಚರ್ಮವನ್ನು ಹೊಂದಿದೆ. ಹುಳಿ ಮತ್ತು ಒಗರು ಮಿಶ್ರಿತ ರುಚಿಯನ್ನು ಹೊಂದಿರುವ ಇದನ್ನು ಚಟ್ನಿ ಹಾಗೂ ದಾಲ್‌ಗಳಲ್ಲಿ ಬಳಸಲಾಗುತ್ತದೆ. ಆದರೆ ಇದನ್ನು ತಾಜಾ ಹಣ್ಣಾಗಿ ನೇರವಾಗಿ ತಿನ್ನುವ ಅಭ್ಯಾಸವು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಬೆಟ್ಟ ಕಣಗಲು ಜೀರ್ಣಶಕ್ತಿಯನ್ನು ಹೆಚ್ಚಿಸಲು, ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಮತ್ತು ದೇಹಕ್ಕೆ ಉತ್ತಮ ರೋಗನಿರೋಧಕ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.

2. ಸೀಮೆ ಹುಣಸೆ (Manila Tamarind)

ಜಿಲೇಬಿ ಆಕಾರವನ್ನು ಹೋಲುವ ಈ ಸೀಮೆ ಹುಣಸೆಯು ಒಂದು ಕಾಡು ಹಣ್ಣು. ಇದರ ಒಳಗೆ ಬಿಳಿ ಬಣ್ಣದ ಸಿಹಿಯಾದ ತಿರುಳುಗಳು ಇರುತ್ತದೆ. ಒಂದು ಕಾಲದಲ್ಲಿ ಮಕ್ಕಳಿಗೆ ಬಹಳ ಇಷ್ಟವಾಗಿದ್ದ ಈ ಹಣ್ಣಾಗಿತ್ತು. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ ಮತ್ತು ಇದು ಶೀತ, ಕೆಮ್ಮಿನಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಮತ್ತು ದೇಹಕ್ಕೆ ಶಕ್ತಿ ನೀಡಲು ಸಹಾಯ ಮಾಡುತ್ತದೆ.

7 Forgotten Summer Fruits

3. ಕವಳಿ ಹಣ್ಣ (Bengal Currant)

ಕವಳಿ ಹಣ್ಣ ಚಿಕ್ಕದಾಗಿ, ಗುಲಾಬಿ ಮತ್ತು ಬಿಳಿ ಬಣ್ಣದ ಈ ಹಣ್ಣು ತುಂಬಾ ಹುಳಿಯಾಗಿರುತ್ತದೆ. ಉಪ್ಪಿನಕಾಯಿ, ಜಾಮ್ ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಇಂದಿನ ಜನರು ಹೆಚ್ಚು ಸಿಹಿ ಹಣ್ಣುಗಳಿಗೆ ಒಲವು ತೋರಿಸುತ್ತಿರುವುದರಿಂದ ಈ ವಿಶಿಷ್ಟ ಕಾಡು ಹಣ್ಣಿನ ಬಳಕೆ ಹಾಗೂ ಜನಪ್ರಿಯತೆ ಕಡಿಮೆಯಾಗಿದೆ. ಕವಳಿ ಹಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚುತ್ತದೆ ಮತ್ತು ರಕ್ತಹೀನತೆ ಕಡಿಮೆಯಾಗುತ್ತದೆ.

ಗ್ಲೂಕಾನ್-ಡಿ ಅಥವಾ ಒಆರ್‌ಎಸ್, ಬೇಸಿಗೆಯಲ್ಲಿ ಯಾವುದು ಕುಡಿಯಬೇಕು ಗೊತ್ತಾ ಇಲ್ಲಿದೆ ಮಾಹಿತಿ
ಗ್ಲೂಕಾನ್-ಡಿ ಅಥವಾ ಒಆರ್‌ಎಸ್, ಬೇಸಿಗೆಯಲ್ಲಿ ಯಾವುದು ಕುಡಿಯಬೇಕು ಗೊತ್ತಾ ಇಲ್ಲಿದೆ ಮಾಹಿತಿ

4. ಚಕ್ಕೋತ ಹಣ್ಣು (Pomelo)

ಚಕ್ಕೋತ ಹಣ್ಣು ದೊಡ್ಡ ಗಾತ್ರದ ಮತ್ತು ಹಸಿರು ಬಣ್ಣದದಿಂದ ಕೂಡಿರುತ್ತದೆ ಮತ್ತು ಹಣ್ಣಿನ ಒಳಭಾಗವು ಕಿತ್ತಳೆಯಂತೆಯೇ ಎಸಳುಗಳನ್ನು ಹೊಂದಿರುತ್ತದೆ. ಇದು ಸಿಹಿ, ಹುಳಿ ಮತ್ತು ಸ್ವಲ್ಪ ಕಹಿ ಮಿಶ್ರಿತ ವಿಶಿಷ್ಟ ರುಚಿಯನ್ನು ಹೊಂದಿದೆ. ರಾಜಸ್ಥಾನದಲ್ಲಿ ಉಪ್ಪಿನಕಾಯಿಗೆ ಬಳಸಲಾಗುತ್ತದೆ. ಚಕ್ಕೋತದಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ. ಇದು ರಕ್ತನಾಳಗಳಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯಾಘಾತದ ಅಪಾಯವನ್ನು ತಗ್ಗಿಸುತ್ತದೆ.

Eating Garlic in Summer: ಬೆಳ್ಳುಳ್ಳಿ ಆರೋಗ್ಯಕ್ಕೆ ಸೂಪರ್‌; ಬೇಸಿಗೆಯಲ್ಲಿ ಇರಲಿ ಎಚ್ಚರ
Eating Garlic in Summer: ಬೆಳ್ಳುಳ್ಳಿ ಆರೋಗ್ಯಕ್ಕೆ ಸೂಪರ್‌; ಬೇಸಿಗೆಯಲ್ಲಿ ಇರಲಿ ಎಚ್ಚರ

5. ಕರಂಬಲ (Star Fruit)

ನಕ್ಷತ್ರದ ಆಕಾರದಲ್ಲಿ ಕತ್ತರಿಸುವ ಈ ಹಣ್ಣು ವಿಶಿಷ್ಟವಾದ ಹುಳಿ-ಸಿಹಿ ರುಚಿ ಹೊಂದಿದೆ. ಹಿಂದೆ ರೈಲು ಪ್ರಯಾಣದ ಸಮಯದಲ್ಲಿ ಮಸಾಲೆ ಹಾಕಿ ತಿನ್ನುವುದು ಬಹಳ ಸಾಮಾನ್ಯವಾಗಿತ್ತು. ಈಗ ಇದು ಹೆಚ್ಚು ಅಲಂಕಾರಿಕವಾಗಿ ಮಾತ್ರ ಬಳಸಲಾಗುತ್ತಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆ ಸುಧಾರಿಸಲು ಮತ್ತು ದೇಹದ ತೂಕವನ್ನು ಇಳಿಸಲು ಅತ್ಯಂತ ಪ್ರಯೋಜನಕಾರಿ.

7 Forgotten Summer Fruits

6. ಪುನರ್ಪುಳಿ (Kokum)

ಪುನರ್ಪುಳಿ ಸಾಮಾನ್ಯವಾಗಿ ಒಣಹಣ್ಣಿನ ರೂಪದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಆದರೆ ತಾಜಾ ಪುನರ್ಪುಳಿ ಹಣ್ಣು ಅತಿ ಹೆಚ್ಚಿನ ರಸಭರಿತವಾಗಿದ್ದು, ದೇಹಕ್ಕೆ ತಂಪು ನೀಡುವ ಗುಣ ಹೊಂದಿದೆ. ಇದನ್ನು ಹೆಚ್ಚಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಪುನರ್ಪುಳಿ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪು ನೀಡುವುದಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಅಸಿಡಿಟಿ ಸಮಸ್ಯೆಯನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ ಎಂದೆ ಹೇಳಲಾಗುತ್ತದೆ.

7 Forgotten Summer Fruits

7. ಶಹತೂತ್(Mulberries)

ಉದ್ದವಾದ ಮತ್ತು ನೇರಳೆ ಬಣ್ಣದ ಈ ಹಣ್ಣು ತಿನ್ನುವಾಗ ಕೈಗೆ ನೇರಳೆ ಬಣ್ಣ ಹಚ್ಚುತ್ತದೆ. ಮಧುರವಾದ ರುಚಿಯನ್ನು ಶಹತೂತ್ ತುಂಬಾ ನಾಜೂಕಾಗಿ ಇರುತ್ತದೆ. ಇದರಲ್ಲಿ ವಿಟಮಿನ್ ಸಿ (Vitamin C) ಹೇರಳವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇಗ ಹಾಳಾಗುತ್ತದೆ ಎಂಬ ಕಾರಣದಿಂದಲೆ ಇಂದಿನ ಮಾರುಕಟ್ಟೆಯಲ್ಲಿ ಹೆಚ್ಚು ಕಾಣಿಸೋದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+