ಹೊಟ್ಟೆ ಬೊಜ್ಜು, ದೇಹದ ತೂಕ ಕಡಿಮೆ ಮಾಡಿಕೊಳ್ಳಲು 5 ಫುಡ್ ಟಿಪ್ಸ್
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಆಹಾರದಲ್ಲಿ ನೀವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು. ಅಕ್ಕಿ ತಿನ್ನುವುದನ್ನು ತಪ್ಪಿಸಿ ನೀವು ಕೆಲವೊಂದು ಸರಳ ಸೂತ್ರಗಳನ್ನು ಫಾಲೋ ಮಾಡಿದರೆ, ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕೆಲವರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಕಷ್ಟಪಡುವುದು ಇದೆ. ಆದರೆ ಆಹಾರ ಪದ್ಧತಿಯಲ್ಲಿ ನೀವು ಬದಲಾವಣೆ ಮಾಡಿಕೊಂಡರೆ ಶೇ 50ರಷ್ಟು ದೇಹದ ತೂಕವನ್ನು ಕಡಿಮೆ ಮಾಡಿಕೊಂಡಂತೆಯೇ ಸರಿ. ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಆಹಾರದಲ್ಲಿ ಅಕ್ಕಿ ಬದಲು 5 ಬೇರೆ ಪದಾರ್ಥಗಳನ್ನು ನೀವು ಬಳಸಿದರೆ ಸಾಕು. ನಿಮ್ಮ ದೇಹದ ತೂಕವನ್ನು ಅರ್ಧ ಕಡಿಮೆ ಮಾಡಿಕೊಳ್ಳಬಹುದು. ಆ 5 ಆಹಾರಗಳ ವಿವರ ಇಲ್ಲಿದೆ.
ದೇಹ ಹಾಗೂ ಹೊಟ್ಟೆಯ ಕೊಬ್ಬನ್ನು ಕರಗಿಸಬೇಕು ಅಂತ ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ. ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೆ ನೀವು ಮನೆಯಲ್ಲೇ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಬದಲಾಯಿಸಬಹುದು. ಭಾರತೀಯ ಆಹಾರ ಪದ್ಧತಿಯಲ್ಲಿ ಅಕ್ಕಿಗೆ ವಿಶೇಷವಾದ ಸ್ಥಾನವಿದೆ. ಅಕ್ಕಿಯಲ್ಲಿ ಹೆಚ್ಚಿನ ಕ್ಯಾಲೋರಿ ಅಂಶ ಮತ್ತು ಅಗತ್ಯ ಪೋಷಕಾಂಶಗಳ ಕೊರತೆ ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಕೆಲವರು ಹೆಚ್ಚು ರೈಸ್ ತಿನ್ನುವುದನ್ನು ಕಡಿಮೆ ಮಾಡುವುದು ಇದೆ. ಕಡಿಮೆ ಬೆಲೆಗೆ ಹಾಗೂ ಸುಲಭವಾಗಿ ಮಾಡಬಹುದಾದ ಅಡಿಗೆಗಳಲ್ಲಿ ಅಕ್ಕಿ - ಅನ್ನ ಸಹ ಸೇರಿರುವುದರಿಂದ ಜನ ಹೆಚ್ಚು ಅಕ್ಕಿಯನ್ನು ಆಹಾರದಲ್ಲಿ ಬಳಸುತ್ತಾರೆ. ಆದರೆ, ಆಹಾರ ಪದ್ಧತಿಯಲ್ಲಿ ನೀವು ಸ್ವಲ್ಪ ಪ್ರಮಾಣದಲ್ಲಿ ಅಕ್ಕಿ ತಿನ್ನುವುದನ್ನು ಕಡಿಮೆ ಮಾಡಿದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಅಕ್ಕಿಯನ್ನು ಆಹಾರದಲ್ಲಿ ಕಡಿಮೆ ಮಾಡಬೇಕು ಸರಿ. ಹಾಗಾದರೆ ಅಕ್ಕಿಗೆ ಬದಲು ಯಾವ ಆಹಾರವನ್ನು ಬಳಸಬೇಕು ಎನ್ನುವ ಪ್ರಶ್ನೆ ಬರುವುದು ಸಹಜ. ಅಕ್ಕಿಗೆ ಬದಲು ಬಳಸಬಹುದಾದ 5 ಪರ್ಯಾಯ ಆಹಾರಗಳ ವಿವರ ಇಲ್ಲಿದೆ.
ಮುರಿದ ಅಥವಾ ನುಚ್ಚು ಗೋಧಿ: ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನೀವು ಆಹಾರದಲ್ಲಿ ನುಚ್ಚು ಗೋಧಿಯನ್ನು ಬಳಸಬಹುದಾಗಿದೆ. ಇದು ಅಕ್ಕಿಯಂತೆ ಕಾಣುತ್ತದೆ. ಇದು 90 ಗ್ರಾಂಗೆ ಕೇವಲ 76 ಕ್ಯಾಲೊರಿಗಳನ್ನು ಹೊಂದಿದೆ. ಅಕ್ಕಿಗಿಂತ ಶೇ25ರಷ್ಟು ಕಡಿಮೆ ಕ್ಯಾಲೊರಿಯನ್ನು ಹೊಂದಿದೆ. ಕಾರ್ಬೋಹೈಡ್ರೇಟ್ ಕಡಿಮೆ ಮಾಡಲು ಮತ್ತು ದೇಹದ ತೂಕವನ್ನು ಇಳಿಸಿಕೊಳ್ಳಲು ಉತ್ತಮ ಆಯ್ಕೆಯಾಗಿದೆ.
ಬಾರ್ಲಿ ಮತ್ತು ರಾಗಿ: ಇನ್ನು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನೀವು ಬಾರ್ಲಿ ಅಥವಾ ರಾಗಿಯನ್ನು ಸಹ ಬಳಸಬಹುದಾಗಿದೆ. ಅಕ್ಕಿಗಿಂತ ಹೆಚ್ಚಿನ ಪ್ರೋಟೀನ್ ಹಾಗೂ ಫೈಬರ್ ಅಂಶಗಳು ಇದರಲ್ಲಿ ಇವೆ. ವಿಟಮಿನ್ ಬಿ, ಸತು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಇದರಲ್ಲಿ ಸೇರಿವೆ. ಪೋಷಕಾಂಶ ಸಮೃದ್ಧವಾಗಿರುವ ಈ ವಸ್ತುಗಳನ್ನು ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಅಲ್ಲದೆ ಹಸಿವು ಸಹ ಬೇಗ ಆಗಲ್ಲ ದೇಹದ ತೂಕವೂ ಹೆಚ್ಚಾಗಲ್ಲ.
ಓಟ್ಸ್: ಓಟ್ಸ್ ಹಲವು ಕಾರಣಕ್ಕೆ ದೇಹದ ಆರೋಗ್ಯಕ್ಕೆ ಒಳ್ಳೆಯದಾಗಿದೆ. ಹೃದಯ ಹಾಗೂ ಆರೋಗ್ಯಕ್ಕೆ ಇದು ಒಳ್ಳೆಯ ಆಹಾರ. ತೂಕ ನಷ್ಟಕ್ಕೂ ಇದು ಸಹಕಾರಿಯಾಗಿದೆ. ಹೃದಯಾಘಾತ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಈ ಆಹಾರ ಕಡಿಮೆ ಮಾಡುತ್ತದೆ. ಅಲ್ಲದೆ ಇದರಿಂದ ದೇಹದ ಚರ್ಮ ತುರಿಕೆ ಸಮಸ್ಯೆಯೂ ತಪ್ಪುತ್ತದೆ.
ಬ್ರೋನ್ ರೈಸ್: ಬ್ರೌನ್ ರೈಸ್ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಸೇರಿದಂತೆ ಹಲವು ಒಳ್ಳೆಯ ಪೋಷಕಾಂಶಗಳು ಇವೆ. ಇದನ್ನು ಸೇವಿಸುವುದರಿಂದ ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವವನ್ನು ಆಗುತ್ತದೆ. ಕರುಳು ಸಮಸ್ಯೆಗಳನ್ನು ತಪ್ಪಿಸುತ್ತದೆ ಹಾಗೂ ಮಲಬದ್ಧತೆ ಸಮಸ್ಯೆಯನ್ನು ತಪ್ಪಿಸುತ್ತದೆ.












Click it and Unblock the Notifications