ಓದಿ ತಿಳಿಯಿರಿ: ಕೊವಿಡ್-19 ಸೋಂಕು ತಗುಲಿ 7 ದಿನದಲ್ಲೇ ಡಿಸ್ಚಾರ್ಜ್!

ಬೆಂಗಳೂರು, ಜನವರಿ 10: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವ ಸೌಮ್ಯ ಮತ್ತು ಲಕ್ಷಣರಹಿತ ರೋಗಿಗಳ ಹೋಮ್ ಐಸೋಲೇಷನ್(ಗೃಹ ಪ್ರತ್ಯೇಕತೆ) ಮತ್ತು ಡಿಸ್ಚಾರ್ಜ್ ಸಂಬಂಧಿತ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ.

ಕೊವಿಡ್-19 ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಸಾಂಸ್ಥಿಕ ಅಥವಾ ಗೃಹ ಪ್ರತ್ಯೇಕತೆಗೆ ಒಳಗಾಗಬೇಕು. ಈ ಅವಧಿಯಲ್ಲಿ ಪ್ರತಿನಿತ್ಯ ರೋಗಿಯ ಆರೋಗ್ಯದ ಮೇಲ್ವಿಚಾರಣೆಯನ್ನು ನಡೆಸಲಾಗುತ್ತದೆ. ಕೊವಿಡ್-19 ಸೋಂಕು ತಗುಲಿದ 7 ದಿನಗಳ ನಂತರ ಹಾಗೂ 3 ದಿನಗಳ ಚಿಕಿತ್ಸೆ ಬಳಿಕ ಸೋಂಕಿತನಲ್ಲಿ ಜ್ವರ ಹಾಗೂ ರೋಗದ ಇತರೆ ಲಕ್ಷಣಗಳು ಗೋಚರಿಸದಿದ್ದರೆ ಅಂಥವರನ್ನು ಬಿಡುಗಡೆ ಮಾಡಲಾಗುವುದು.

ಕೊರೊನಾವೈರಸ್ ಸೋಂಕಿನಿಂದ ಗೃಹ ಪ್ರತ್ಯೇಕತೆಗೆ ಒಳಗಾದ ರೋಗಿಯು ಬಿಡುಗಡೆ ಸಂದರ್ಭದಲ್ಲಿ ಮತ್ತೊಮ್ಮೆ ಸೋಂಕು ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಕೊವಿಡ್-19 ಲಕ್ಷಣಗಳೇ ಇಲ್ಲದ ಸೋಂಕಿತರು ಹಾಗೂ ಸೌಮ್ಯ ಲಕ್ಷಣಗಳನ್ನು ಹೊಂದಿರುವ ಸೋಂಕಿತರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಇಲ್ಲಿ ಓದಿ ತಿಳಿಯಿರಿ.

ಸೌಮ್ಯ ಲಕ್ಷಣ ಹೊಂದಿರುವ ಕೊವಿಡ್-19 ಸೋಂಕಿತರಿಗೆ ಈ ನಿಯಮ

ಸೌಮ್ಯ ಲಕ್ಷಣ ಹೊಂದಿರುವ ಕೊವಿಡ್-19 ಸೋಂಕಿತರಿಗೆ ಈ ನಿಯಮ

ಕೊವಿಡ್-19 ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಸಾಂಸ್ಥಿಕ ಅಥವಾ ಗೃಹ ಪ್ರತ್ಯೇಕತೆಗೆ ಒಳಗಾಗಬೇಕು. ಈ ಅವಧಿಯಲ್ಲಿ ಪ್ರತಿನಿತ್ಯ ರೋಗಿಯ ಆರೋಗ್ಯದ ಮೇಲ್ವಿಚಾರಣೆಯನ್ನು ನಡೆಸಲಾಗುತ್ತದೆ. ಕೊವಿಡ್-19 ಸೋಂಕು ತಗುಲಿದ 7 ದಿನಗಳ ನಂತರ ಹಾಗೂ 3 ದಿನಗಳ ಚಿಕಿತ್ಸೆ ಬಳಿಕ ಸೋಂಕಿತನಲ್ಲಿ ಜ್ವರ ಹಾಗೂ ರೋಗದ ಇತರೆ ಲಕ್ಷಣಗಳು ಗೋಚರಿಸದಿದ್ದರೆ ಅಂಥವರನ್ನು ಬಿಡುಗಡೆ ಮಾಡಲಾಗುವುದು. ಕೊರೊನಾವೈರಸ್ ಸೋಂಕಿನಿಂದ ಗೃಹ ಪ್ರತ್ಯೇಕತೆಗೆ ಒಳಗಾದ ರೋಗಿಯು ಬಿಡುಗಡೆ ಸಂದರ್ಭದಲ್ಲಿ ಮತ್ತೊಮ್ಮೆ ಸೋಂಕು ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಅಗತ್ಯವಿಲ್ಲ

ಮಧ್ಯಮ ಪ್ರಮಾಣ ಲಕ್ಷಣ ಹೊಂದಿದವರಿಗೆ ಈ ನಿಯಮ ಜಾರಿ

ಮಧ್ಯಮ ಪ್ರಮಾಣ ಲಕ್ಷಣ ಹೊಂದಿದವರಿಗೆ ಈ ನಿಯಮ ಜಾರಿ

ಕೊರೊನಾವೈರಸ್ ಸೋಂಕಿನ ಮಧ್ಯಮ ಪ್ರಮಾಣದ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಮೀಸಲಾಗಿರುವ ಕೊವಿಡ್-19 ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗಬೇಕು. ಲಕ್ಷಣರಹಿತ ರೋಗಿಗಳು ಪ್ರಯೋಗಾಲಯದ ದೃಢಪಡಿಸಿದ ಪ್ರಕರಣಗಳಾಗಿದ್ದು, ಅವರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಹಾಗೂ ಶೇಕಡಾ 93ಕ್ಕಿಂತ ಹೆಚ್ಚು ಆಮ್ಲಜನಕದ ಶುದ್ಧತ್ವವನ್ನು ಹೊಂದಿರುತ್ತಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಸೌಮ್ಯ ಲಕ್ಷಣಗಳನ್ನು ಹೊಂದಿರುವವರನ್ನೂ ಸೋಂಕಿತರು ಎಂದು ಪರಿಗಣಿಸಲಾಗುತ್ತದೆ. ಶ್ವಾಸಕೋಶ ಸಮಸ್ಯೆ, ಜ್ವರ ಹಾಗೂ ಉಸಿರಾಟ ಸಮಸ್ಯೆಯನ್ನು ಹೊಂದಿರುವ ಸೋಂಕಿತರಲ್ಲಿ ಶೇ.93ರಷ್ಟು ಆಮ್ಲಜನಕ ಶುದ್ಧತ್ವ ಇರುತ್ತದೆ. ಕಳೆದ ಎರಡು ವರ್ಷಗಳಲ್ಲಿ ಭಾರತ ಸೇರಿದಂತೆ ಜಗತ್ತಿನ ಬಹುಪಾಲು ರಾಷ್ಟ್ರಗಳಲ್ಲಿ ಕೊವಿಡ್-19 ಸೋಂಕಿತರು ಲಕ್ಷಣರಹಿತರು ಹಾಗೂ ಸೌಮ್ಯ ಲಕ್ಷಣಗಳನ್ನು ಹೊಂದಿರುವವರೇ ಆಗಿದ್ದಾರೆ.

ಗಂಭೀರ ಆರೋಗ್ಯ ಸಮಸ್ಯೆ ಹೊಂದಿದ್ದರೆ ನಿಯಮ ಕಡ್ಡಾಯ

ಗಂಭೀರ ಆರೋಗ್ಯ ಸಮಸ್ಯೆ ಹೊಂದಿದ್ದರೆ ನಿಯಮ ಕಡ್ಡಾಯ

60 ವರ್ಷ ಮೀರಿದ ವ್ಯಕ್ತಿ ಹಾಗೂ ತೀವ್ರ ಅಸ್ವತ್ಥತೆ ಎದುರಿಸುತ್ತಿರುವ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ವೈದ್ಯರಲ್ಲಿ ಸೂಕ್ತ ತಪಾಸಣೆ ನಂತರವಷ್ಟೇ ಹೋಮ್ ಐಸೋಲೇಷನ್ ಗೆ ಅನುಮತಿ ನೀಡಲಾಗುವುದು. ರೋಗ ನಿರೋಧಕ ಶಕ್ತಿಯನ್ನು ತಗ್ಗಿಸುವ (ಹೆಚ್ಐವಿ, ಕ್ಯಾನ್ಸರ್ ಸೇರಿದಂತೆ) ಹಲವು ರೋಗಗಳಿಂದ ಬಳಲುತ್ತಿರುವ ಕೊವಿಡ್-19 ಸೋಂಕಿತರಿಗೆ ಹೋಮ್ ಐಸೋಲೇಷನ್‌ನಲ್ಲಿ ಇರುವುದಕ್ಕೆ ಅನುಮತಿ ನೀಡುವುದಿಲ್ಲ. ಒಂದು ವೇಳೆ ಇಂಥ ರೋಗಿಗಳಿಗೆ ಹೋಮ್ ಐಸೋಲೇಷನ್ ನೀಡುವುದಾದರೆ ವೈದ್ಯಕೀಯ ಅಧಿಕಾರಿಯಿಂದ ಪೂರ್ವಾನುಮತಿ ಪಡೆದುಕೊಂಡಿರಬೇಕು. ಒಬ್ಬ ರೋಗಿಗೆ ಹೋಮ್ ಐಸೋಲೇಷನ್ ನಲ್ಲಿ ಇರುವುದಕ್ಕೆ ಅನುಮತಿ ನೀಡಿದ್ದಲ್ಲಿ, ಕುಟುಂಬದ ಇತರೆ ಸದಸ್ಯರು ಹೋಮ್ ಕ್ವಾರೆಂಟೇನ್ ನಲ್ಲಿ ಇರಬೇಕು. ಹೋಮ್ ಕ್ವಾರೆಂಟೇನ್ ಮಾರ್ಗಸೂಚಿಯನ್ನು ಪಾಲನೆ ಮಾಡುವುದು ಕಡ್ಡಾಯವಾಗಿರುತ್ತದೆ.

ಹೋಮ್ ಐಸೋಲೇಷನ್ ವ್ಯವಸ್ಥೆ ಹೇಗೆ ಇರುತ್ತದೆ?

ಹೋಮ್ ಐಸೋಲೇಷನ್ ವ್ಯವಸ್ಥೆ ಹೇಗೆ ಇರುತ್ತದೆ?

ಸೌಮ್ಯ ಮತ್ತು ಲಕ್ಷಣರಹಿತ ಕೊರೊನಾವೈರಸ್ ರೋಗಿ ಎಂಬುದರ ಕುರಿತು ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ಪ್ರಯೋಗಿಕ ವರದಿ ಅಗತ್ಯವಾಗಿರುತ್ತದೆ. ಹೆಚ್ಚುವರಿಯಾಗಿ, ಪರೀಕ್ಷೆ, ವೈದ್ಯಕೀಯ ನಿರ್ವಹಣೆಗೆ ಸಂಬಂಧಿಸಿದ ಮಾರ್ಗದರ್ಶನ, ಅಗತ್ಯವಿದ್ದಲ್ಲಿ ಆಸ್ಪತ್ರೆಯ ಬೆಡ್‌ನ ಪಡೆಯಲು ಕುಟುಂಬಕ್ಕೆ ಜಿಲ್ಲೆ/ಉಪಜಿಲ್ಲಾ ಮಟ್ಟದಲ್ಲಿ ಗೊತ್ತುಪಡಿಸಿದ ನಿಯಂತ್ರಣ ಕೊಠಡಿಯ ಸಂಪರ್ಕ ಸಂಖ್ಯೆ ಒದಗಿಸಬೇಕು. ಅಂತಹ ಪ್ರಕರಣಗಳು ಸ್ವಯಂ-ಪ್ರತ್ಯೇಕತೆಗಾಗಿ ಮತ್ತು ಕುಟುಂಬದ ಸಂಪರ್ಕಗಳನ್ನು ನಿರ್ಬಂಧಿಸಲು ಮನೆಯಲ್ಲಿ ಅಗತ್ಯವಾದ ಸೌಲಭ್ಯ ಹೊಂದಿರಬೇಕು. ಹೋಮ್ ಐಸೋಲೇಷನ್ ನಲ್ಲಿರುವ ರೋಗಿಯ ಆರೈಕೆದಾರರು ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿರಬೇಕು. ದಿನದ 24/7 ರೋಗಿಯ ಆರೈಕೆಗೆ ಅವರು ಲಭ್ಯವಾಗಿರಬೇಕು. ಹೋಮ್ ಐಸೋಲೇಷನ್ ಅವಧಿಯಲ್ಲಿ ಈ ಆರೈಕೆದಾರರೇ ರೋಗಿ ಮತ್ತು ವೈದ್ಯಕೀಯ ಅಧಿಕಾರಿ ನಡುವೆ ಸಂಪರ್ಕ ಸೇತುವೆ ಆಗಿರಬೇಕು.

ಕೊವಿಡ್-19 ರೋಗಿಯ ಚಿಕಿತ್ಸೆ ವಿಧಾನ ಹೇಗೆ?

ಕೊವಿಡ್-19 ರೋಗಿಯ ಚಿಕಿತ್ಸೆ ವಿಧಾನ ಹೇಗೆ?

* ಕೊರೊನಾವೈರಸ್ ಸೋಂಕಿತನು ಚಿಕಿತ್ಸೆ ನೀಡುವ ವೈದ್ಯಾಧಿಕಾರಿ ಜೊತೆಗೆ ಸಂಪರ್ಕದಲ್ಲಿರಬೇಕು, ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಪ್ರಾಮಾಣಿಕವಾಗಿ ಹೇಳಿಕೊಳ್ಳಬೇಕು

* ವೈದ್ಯಕೀಯ ಚಿಕಿತ್ಸೆ ವೇಳೆ ರೋಗಿಯ ಜೊತೆಗೆ ಸಂಪರ್ಕದಲ್ಲಿರುವ ವ್ಯಕ್ತಿಗಳು ಅಸ್ವತ್ಥಗೊಂಡರೆ ಅಂಥವರಿಗೂ ಔಷಧಿಯನ್ನು ನೀಡುವುದು

* ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಇ-ಸಂಜೀವಿನಿ ಎಂಬ ದೂರವಾಣಿ ಸಂಪರ್ಕ ವೇದಿಕೆಯನ್ನು ಬಳಸಿಕೊಳ್ಳಬೇಕು.

* ರೋಗಿಗಳು ಜ್ವರ, ಕೆಮ್ಮು ಹಾಗೂ ಮೂಗು ಸೋರುವಿಕೆಗೆ ಸಂಬಂಧಿಸಿದಂತೆ ರೋಗದ ಲಕ್ಷಣಗಳ ಬಗ್ಗೆ ಜಾಗೃತರಾಗಿರಬೇಕು

* ಕೊವಿಡ್-19 ರೋಗಿಗಳು ದಿನಕ್ಕೆ ಮೂರು ಬಾರಿ ಬಿಸಿ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು

* ಒಂದು ವೇಳೆ ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಪ್ಯಾರಾಸಿಟಮಲ್ 650 ಎಂಜಿ ಮಾತ್ರೆಯನ್ನು ದಿನಕ್ಕೆ 3 ಬಾರಿ ತೆಗೆದುಕೊಳ್ಳಬೇಕು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+