Karnataka Budget 2023: ಚಿತ್ರದುರ್ಗದ ಜನತೆಯ ನಿರೀಕ್ಷೆಗಳಿಗೆ ತಣ್ಣೀರು ಎರಚಿದ ಸರ್ಕಾರ
ಶುಕ್ರವಾರ (ಫೆಬ್ರವರಿ 17) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ನೀಡದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಗೆ ನಿರಾಸೆಯಾಗಿದೆ.
ಚಿತ್ರದುರ್ಗ, ಫೆಬ್ರವರಿ 17: ಶುಕ್ರವಾರ (ಫೆಬ್ರವರಿ 17) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದಾರೆ.
ಮಧ್ಯ ಕರ್ನಾಟಕದ ಬಯಲು ಸೀಮೆಯ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಜನತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಜಿಲ್ಲೆಗೆ ಬಜೆಟ್‌ನಲ್ಲಿ ಏನೇನು ಕೊಡುಗೆ ನೀಡಿದ್ದಾರೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಶುಕ್ರವಾರ ಘೋಷಣೆಯಾದ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ 500 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಣ ಬಿಡುಗಡೆ ಕ್ರಮ ಎಂದು ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಆದರೆ ಈ ಹೇಳಿಕೆ ಕಳೆದ ಮೂರು ವರ್ಷಗಳಿಂದ ಹೇಳಿಕೊಂಡು ಬಂದಿದ್ದಾರೆ ಎನ್ನಲಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆಯವ್ಯಯ ಮಂಡನೆ ನಿರಾಸೆ ಮೂಡಿಸಿದೆ ಎನ್ನಬಹುದು. ಕಳೆದ ಬಜೆಟ್ ನಲ್ಲಿ ಒಂದು ಕೊಡುಗೆಗಳು ಜಾರಿಯಾಗಿದ್ದವು. ಈ ಬಾರಿ ಯಾವುದೇ ರೀತಿಯಲ್ಲಿ ಜಿಲ್ಲೆಗೆ ಆದ್ಯತೆ ಸಿಕ್ಕಿಲ್ಲ. ಇದೊಂದು ಚುನಾವಣೆಯ ಗಿಫ್ಟ್ ಬಜೆಟ್ ಆಗಿದೆ ಎಂದು ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಅಭಿಪ್ರಾಯವೇನು ಎನ್ನುವುದು ಇಲ್ಲಿದೆ.

ಹಿರಿಯೂರಿಗೆ ಅನ್ಯಾಯ: ಜನತೆಯ ಅಸಮಧಾನ
2023ರ ಆಯವ್ಯಯ ಮಂಡನೆಲ್ಲಿ ಘೋಷಣೆ ಮಾಡಿರುವ ರೈತರಿಗೆ ನೀಡುತ್ತಿದ್ದ ಶೂನ್ಯ ಬಡ್ಡಿ ಸಾಲ 3 ಲಕ್ಷ ದಿಂದ 5ಲಕ್ಸಕ್ಕೆ ಏರಿಕೆ ಮಾಡಿರುವುದು, ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಕಾಯಕಲ್ಪ ನೀಡುವುದಾಗಿ ಹೇಳಿರುವುದು ಸ್ವಾಗತರ್ಹ. ಆದರೆ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಭದ್ರಾ ಜಲಾಶಯದಿಂದ 5 ಟಿಎಂಸಿ ಹೆಚ್ಚುವರಿ ನೀರು ಮಂಜೂರು ಮಾಡಿ ಕೊಡುವ ಭರವಸೆ ಹಾಗೂ ಹಿರಿಯೂರು ಸಕ್ಕರೆ ಕಾರ್ಖಾನೆ ಪುನರ್ ಪ್ರಾರಂಭ ಮಾಡುವ ಕುರಿತು ಪ್ರಸ್ತಾಪಿಸದಿರುವುದು ತಾಲೂಕಿನ ಜನತೆಗೆ ದೊಡ್ಡ ಅನ್ಯಾಯವಾಗಿದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್ ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಬಜೆಟ್ ನಿರಾಶಾದಾಯಕ
ಸಿಎಂ ಬೊಮ್ಮಾಯಿ ಅವರ ಬಜೆಟ್ ನಿರಾಶಾದಾಯಕ ಬಜೆಟ್ ಆಗಿದ್ದು ರೈತರಿಗೆ ಯಾವುದೇ ಅನುಕೂಲ ಇಲ್ಲ , ಬಡ್ಡಿ ರಹಿತ ಐದು ಲಕ್ಷ ಸಾಲ ಕೊಡುತ್ತೇವೆ ಎಂದಿದ್ದಾರೆ. ಕೆಲ ಬರಪೀಡಿತ ಜಿಲ್ಲೆಗಳಲ್ಲಿ 1ಲಕ್ಷ ರೂಪಾಯಿ ಸಹ ಕೊಡುತ್ತಿಲ್ಲ, ಇದು ಬಹಳ ಮೊಸದ ಬಜೆಟ್ ಮಂಡನೆಯಾಗಿದೆ. ಕಳೆದ ಬಜೆಟ್‌ನಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಿಸಿದ್ದರು. ಮತ್ತೆ ಅದನ್ನೇ ಹೇಳಿದ್ದಾರೆ. ಮೆಡಿಕಲ್ ಕಾಲೇಜು ಭೂಮಿ ಪೂಜೆ ಹಾಗೂ ನೀಲಿ ನಕ್ಷೆ ತಯಾರಿಸಲು ಒಂದು ವರ್ಷ ಬೇಕಾ ಎಂದು ರೈತ ಮುಖಂಡ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಮೆಡಿಕಲ್ ಕಾಲೇಜು ಸ್ಥಾಪನೆಗೆ 500 ಕೋಟಿ ರೂಪಾಯಿ ಬಿಡುಗಡೆ ಅಷ್ಟೇ ಆದರೆ ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಮಾಡಿಲ್ಲ. ಪ್ರಾರಂಭ ಅಂತ ಹೇಳಿದ್ದರು ಪ್ರತಿ ಬಾರಿಯೂ ಇದನ್ನೇ ಹೇಳುತ್ತಾರೆ. ನಮ್ಮ ಜಿಲ್ಲೆಯ ಕೇಂದ್ರ ಸಚಿವರಿಗೆ ಏನು ಆಗಿದೆ ಎಂಬುದು ಗೊತ್ತಿಲ್ಲ, ಜಿಲ್ಲೆಗೆ ಮೊಸ ಮಾಡಿದ ಸಿಎಂ ಬೊಮ್ಮಾಯಿ ಎಂದು ಕನ್ನಡ ಸಂಘಟನೆಯ ಅಧ್ಯಕ್ಷ ಕೆ ಟಿ. ಶಿವಕುಮಾರ್ ಆರೋಪಿಸಿದರು.
ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಜನತೆ ಸಿಎಂ ಬೊಮ್ಮಾಯಿ ಸರ್ಕಾರದ ಬಜೆಟ್ ಮೇಲೆ ಅಪಾರವಾದ ನಂಬಿಕೆ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರು. ಆದರೆ ಜನತೆ ನಿರೀಕ್ಷೆಗಳನ್ನು ಸುಳ್ಳು ಮಾಡಿ ಬೇಸರ ಮೂಡಿಸಿದೆ ಎನ್ನಬಹುದು.












Click it and Unblock the Notifications