• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನಾ, ಬೇಕಾದ ಹಾಗೆ ಬಳಸಿಕೋ!

|

ಒಂದಾನೊಂದು ಕಾಲದಲ್ಲಿ ಒಬ್ಬ ವರ್ತಕನಿದ್ದ. ಹಣದ ವಿಷಯದಲ್ಲಿ ಜಿಪುಣ ಅಂದ್ರೆ ಜಗತ್ ಜಿಪುಣ. ಆದರೆ ರಸಿಕತೆಯಲ್ಲಿ ಮಾತ್ರ ಆಹಾಹಾಹಾ ಅಯ್ಯಯ್ಯೋ. ಎಂಥ ಹುಡುಗಿಯನ್ನು ಮದುವೆಯಾಗಿದ್ದನೆಂದರೆ ದೇವಲೋಕದ ಅಪ್ಸರೆಯರನ್ನು ನಿವಾಳಿಸಿ ಭೂಮಿಯ ಮೇಲೆ ಎಸೆಯಬೇಕು.

ಸೌಂದರ್ಯದಲ್ಲಿ ಊರ್ವಶಿ, ಮೇನಕೆ, ಅಪ್ಸರೆ, ರಂಭೆ, ತಿಲೋತ್ತಮೆಯರನ್ನೆಲ್ಲ ಮೀರಿಸುತ್ತಿದ್ದ ವರ್ತಕನ ಹೆಂಡತಿಯಿಂದ ರತಿಸುಖಕ್ಕೇನು ವರ್ತಕನಿಗೆ ಕೊರತೆಯಿರಲಿಲ್ಲ. ಸುಖ ಪಡೆಯುವಲ್ಲಿ ಸಂತುಷ್ಟನಾಗಿದ್ದ ವರ್ತಕನಿಗೆ ಹೆಂಡತಿಯಿಂದ ಒಂದೇ ತಲೆನೋವು. ಆಕೆ ಮಾಡುತ್ತಿದ್ದ ದುಂದುವೆಚ್ಚ ಆತನ ರಸಿಕತೆಯನ್ನು ಬಸಿದುಹಾಕುತ್ತಿತ್ತು.

ಮೊದಲೇ ಜಿಪುಣನಾಗಿದ್ದ ವರ್ತಕ ತನ್ನ ಹೆಂಡತಿಗೆ ಹಣ ಉಳಿಸುವ ಬಗ್ಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ. ಅವಳಿಗೆ ಒಂದು ಸಣ್ಣ ಡಬ್ಬ ಕಾಣಿಕೆಯಾಗಿ ನೀಡಿದ. ಹೆಂಡತಿಗೆ ಆಶ್ಚರ್ಯವೋ ಆಶ್ಚರ್ಯ. ಆ ಡಬ್ಬದ ಮುಚ್ಚಳಕ್ಕೆ ಬೀಗ ಜಡಿದಿದ್ದ. ಇದು ಆತನ ಬುದ್ಧಿ ಏನೆಂದು ತಿಳಿದಿದ್ದ ಅವಳಿಗೆ ಆಶ್ಚರ್ಯ ತರಲಿಲ್ಲ. ಇದರಲ್ಲಿ ಏನೋ ಹುನ್ನಾರವಿದೆ ಎಂಬುದು ಮಾತ್ರ ಆಕೆಯ ಗಮನಕ್ಕೆ ಬಂದಿತು.

ಬೀಗದ ಕೈಯನ್ನು ತನ್ನಲ್ಲೇ ಇಟ್ಟುಕೊಂಡು "ಮೇರೆ ಪ್ಯಾರೆ ಜಾನ್, ಈ ಡಬ್ಬ ನಿನಗಾಗಿ. ಪ್ರತಿ ಬಾರಿ ನನಗೆ ಸಂಭೋಗಿಸಲು ನೀನು ಅವಕಾಶ ನೀಡಿದಾಗ ನಾನು ಅದರಲ್ಲಿ ನೂರು ರುಪಾಯಿ ನೋಟು ಹಾಕುತ್ತೇನೆ. ತಿಂಗಳ ಕೊನೆಯಲ್ಲಿ ಅದರ ಬೀಗ ತೆಗೆಯುತ್ತೇನೆ. ಅದರಲ್ಲಿರುವ ಎಲ್ಲಾ ಹಣ ನಿನ್ನದೆ. ಚಿನ್ನಾ, ಬೇಕಾದ ಹಾಗೆ ಅದನ್ನು ಬಳಸಿಕೋ" ಎಂದ.

ಎಲ್ಲ ಮಾತುಗಳನ್ನು ಒಂದೇ ಭಾವನೆಯಿಂದ ಕೇಳಿಸಿಕೊಂಡ ಆಕೆ, 'ಬೇಕಾದ ಹಾಗೆ ಬಳಸಿಕೋ' ಎಂಬ ಪದಗಳು ಕಿವಿಗೆ ಬಿದ್ದಾಗ ಅವಳ ತಲೆಯಲ್ಲಿ ಹೊಸ ಯೋಚನೆ ಮಿಂಚಿನಂತೆ ಸುಳಿಯಿತು.

ರಸಿಕತೆ ಇನ್ನಷ್ಟು ಹೆಚ್ಚಾಯಿತು. ಹಣಕ್ಕಾಗಿ ಹೆಂಡತಿ ಮತ್ತಷ್ಟು ಅವಕಾಶ ನೀಡುತ್ತಿದ್ದಳು. ಹೀಗೆ ಆದಾಗಲೆಲ್ಲಾ ಅವಳಿಗೆ ನೂರು ರುಪಾಯಿ ನೋಟು ಸಿಗುತ್ತಿತ್ತು. ಬರಬರುತ್ತಾ ಗಂಡ ಇವಳನ್ನು ಸಂಧಿಸುವುದನ್ನು ಕಡಿಮೆ ಮಾಡಿದ. ಈಗ ಅವಳಿಗೆ ಹಣದ ಮೌಲ್ಯ ಏನೆಂದು ತಿಳಿಯುತ್ತದೆಂದು ಭಾವಿಸಿದ.

ಒಂದು ತಿಂಗಳ ನಂತರ ಒಂದು ದಿನ ಹೆಂಡತಿಗೆ ತಿಳಿಯದಂತೆ ಡಬ್ಬಿಯ ಮುಚ್ಚಳ ತೆಗೆದ. ಈಗ ಶಾಕ್ ಹೊಡೆಸಿಕೊಳ್ಳುವ ಸರದಿ ವರ್ತಕನದ್ದು. ಏಕೆಂದರೆ, ಅದರಲ್ಲಿ ನೂರು ರುಪಾಯಿ ನೋಟಿಗಿಂತ ಐನೂರು ಮತ್ತು ಸಾವಿರ ರುಪಾಯಿ ನೋಟುಗಳೇ ಜಾಸ್ತಿಯಾಗಿದ್ದವು. ಕಣ್ಣುಗಳು ನಿಗಿನಿಗಿ ಉರಿಯಲು ಪ್ರಾರಂಭಿಸಿದವು.

ವರ್ತಕನಿಗೆ ಸಿಟ್ಟು ತಡೆಯಲಾಗದೆ ಹೆಂಡತಿ ಕೆನ್ನೆಗೆ ಛಟೀರ್ ಅಂತ ಬಾರಿಸಿಬಿಟ್ಟ. "ಹೇಳು.. ಈ ಐನೂರು ಮತ್ತು ಸಾವಿರ ರುಪಾಯಿ ನೋಟು ಎಲ್ಲಿಂದ ಬಂತು?" ಎಂದು ರೋಷಾವೇಷ ತಾಳಿದ.

ಹೆಂಡತಿ ಸಾವಧಾನವಾಗಿ "ಎಲ್ಲರೂ ನಿಮ್ಮಷ್ಟು ಜಿಪುಣರಲ್ಲ, ಅಷ್ಟಲ್ಲದೆ ನೀವೇ ಅವತ್ತು ಹೇಳಿದಿರಲ್ಲ, ಬೇಕಾದ ಹಾಗೆ ಬಳಸಿಕೋ" ಎಂದು ವೈಯಾರದಿಂದ ಉತ್ತರಿಸಿದಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Husband wife adult jokes : Stingy husband presents an empty box to wife and tells her that whenever he indulges in intercourse with her he would put Rs.100 in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more