ಬಾಸ್ ಸುರೇಸನ ಬೆವರಿಳಿಸಿದ ಸೆಕ್ರೆಟರಿ ಲವೀನಾ
ಕಚೇರಿಯಲ್ಲಿದ್ದ ಎಲ್ಲ ಹೆಂಗಳೆಯರು ಹೊಟ್ಟೆ ಉರಿದುಕೊಳ್ಳುವ ಹಾಗೆ ಬಾಸ್ ಸುರೇಸನ ಗೆಳೆತನ, ನಂಬಿಕೆ, ಸಾಮೀಪ್ಯ, ಆತ್ಮೀಯತೆ ಗಳಿಸಿಕೊಂಡಿದ್ದ, ಪರ್ಫೆಕ್ಟ್ ಸ್ಟಾಟಿಸ್ಟಿಕ್ಸ್ ಹೊಂದಿದ್ದ ಹಾಟ್ ಬ್ಯೂಟಿ ಲವೀನಾ ಕಳೆದ ಕೆಲ ದಿನಗಳಿಂದ ಪ್ರತಿದಿನ ಕಚೇರಿಗೆ ಲೇಟಾಗಿ ಬರುತ್ತಿದ್ದಳು.
ಈ ಸುದ್ದಿ ಬಾಯಿಯಿಂದ ಬಾಯಿಗೆ ಹರಿದಾಡುತ್ತ ಏನೇನೋ ರೂಪ ಪಡೆದುಕೊಳ್ಳತೊಡಗಿತು. ಕಡೆಗೆ ಬಾಸ್ ಸುರೇಸನ ಕಾರಿನ ಚಾಲಕ ದಿನೇಸನ ಮುಖಾಂತರ ಸುರೇಸನ ಹೆಂಡತಿ ರಾಣಿಯ ಕಿವಿಗೂ ಬಿದ್ದು ಮನೆಯಲ್ಲಿ ಪ್ರತಿದಿನ ಭೂಕಂಪವಾಗಲು ಪ್ರಾರಂಭಿಸಿತು.
ಇದು ಪ್ರತಿದಿನ ಮಿನಿ ತೊಟ್ಟು ಕಚೇರಿಗೆ ಬರುತ್ತಿದ್ದ ಸುರೇಸನ ಸೆಕ್ರೆಟರಿ ಲವೀನಾಗೆ ತಿಳಿಯದ ವಿಷಯವೇನಾಗಿರಲಿಲ್ಲ. ಆ ದಿನವೂ ಲವೀನಾ ರೆಡ್ ಟೈಟ್ ಮಿನಿ ಧರಿಸಿ ಕಚೇರಿಗೆ ಲೇಟಾಗಿ ಬಂದಳು. ಮನೆಯಲ್ಲಾದ ಅವಮಾನಕ್ಕೆ ಕುದಿಯುತ್ತಿದ್ದ ಸುರೇಸ ಲವೀನಾಳನ್ನು ತನ್ನ ಚೇಂಬರಿಗೆ ಕರೆಸಿಕೊಂಡ.
"ಲಲಲಲ... ಲವೀನಾ ಯಾಕೆ ದಿನಾ ಕಚೇರಿಗೆ ಲೇಟಾಗಿ ಬರ್ತಿದ್ದಿಯಾ?" ಎಂದು ಬುಸುಗುಡುತ್ತ ಸುರೇಸ ಪ್ರಶ್ನಿಸಿದ.
"ಯಾಕೆ ಇನ್ನೂ ಬೇಗನೆ ಬರಬೇಕಿತ್ತಾ, ತುಂಟ. ಬೈದಿಬೈ ಡೋಂಟ್ ಕಾಲ್ ಮಿ ಲವೀನಾ. ಯು ಕ್ಯಾನ್ ಕಾಲ್ ಮಿ ಲವ್" ಎಂದು ಲವೀನಾ ವೈಯಾರದಿಂದ ನುಲಿಯುತ್ತ ಕೇಳಿದಳು.
"ನೋಡು ಲವ್, ಐ ಮೀನ್ ಲವೀನಾ... ನಮ್ಮಿಬ್ಬರ ಮಧ್ಯೆ ಸಲುಗೆ ಬೆಳೆದಿದೆ ಎಂಬ ಮಾತ್ರಕ್ಕೆ ಹೀಗೆಲ್ಲ ಕಚೇರಿಗೆ ದಿನವೂ ಲೇಟಾಗಿ ಬಂದ್ರೆ ಸರಿಯಾಗಿರಲ್ಲ. ಎಲ್ಲರಂತೆ ನೀನು ಸರಿಯಾದ ಸಮಯಕ್ಕೆ ಆಫೀಸಿಗೆ ಬರಲೇಬೇಕು. ಸಿನ್ಸೀಯರಾಗಿ ಕೆಲಸ ಮಾಡಬೇಕು" ಎಂದು ಆಕೆಯನ್ನು ನೇರವಾಗಿ ದಿಟ್ಟಿಸಲಾಗದೆ ಸುರೇಸ ಹೇಳಿದ.
ಇದಕ್ಕೆ ಏನೂ ಪ್ರತಿಕ್ರಿಯೆ ನೀಡದೆ, ಮತ್ತೆ ವೈಯಾರದಿಂದ ನುಲಿಯುತ್ತ ಸೋಫಾ ಮೇಲೆ ಕುಕ್ಕರಿಸಿದ ಲವೀನಾಳನ್ನು ನೋಡಿ ಮತ್ತೆ ಪಿತ್ತ ನೆತ್ತಿಗೇರಿಸಿಕೊಂಡ ಸುರೇಸ, "ಕಚೇರಿಗೆ ನಿನಗೆ ಬೇಕಾದಂಥ ಸಮಯದಲ್ಲಿ ಬರಬೇಕೆಂದು ಹೇಳಿದ್ದು ಯಾರು?" ಎಂದು ಸುರೇಸ ಗರ್ಜಿಸಿದ.
ತಣ್ಣನೆ ಕ್ರೌರ್ಯದಂಥ ನೋಟ ಬೀರಿ, ಬಾಯಿಗೆ ಬೆಂಕಿ ಅಂಟಿಸದ ಸಿಗರೇಟು ಇಟ್ಟುಕೊಂಡ ಲವೀನಾ, "ನನ್ನ ವಕೀಲ" ಎಂದು ಹೇಳಿ ಕುಳಿತ ಭಂಗಿಯಲ್ಲೇ ಕಾಲಿನ ಮೇಲೆ ಕಾಲು ಹಾಕಿ ಹುಬ್ಬು ಹಾರಿಸಿದಳು. ಸುರೇಸ ಟೈ ಕೂಡ ಒದ್ದೆಯಾಗುವಂತೆ ಬೆವತಿದ್ದ. [ಆಫೀಸ್ ಜೋಕ್ಸ್]












Click it and Unblock the Notifications