ಮೊದಲ ರಾತ್ರಿ ಸ್ನೇಹಿತರು ಮಾಡಿದ ಕುಚೋದ್ಯ
ಲವೀಶ್ ಮತ್ತು ಲವೀನಾ ಮದುವೆ ಭರ್ಜರಿಯಾಗಿ ನಡೆಯಿತು. ಪ್ರೇಮ ವಿವಾಹವಾಗಿದ್ದ ದಂಪತಿಗಳಿಬ್ಬರು ಮೊದಲ ರಾತ್ರಿಯ ಸುಖಕ್ಕೆ ಚಟಪಡಿಸುತ್ತಿದ್ದರು. ಇದಕ್ಕಾಗಿ ಫೈವ್ ಸ್ಟಾರ್ ಹೋಟೆಲೊಂದರಲ್ಲಿ ವಿಶೇಷ ಸಿದ್ಧತೆ ಮಾಡುವುದಾಗಿ ಲವೀಶ್‌ನ ಜಿಗರಿ ದೋಸ್ತ್‌ಗಳಾದ ದಿನೇಸ, ಸುರೇಸ ಮತ್ತು ಸತೀಸ ವಹಿಸಿಕೊಂಡಿದ್ದರು. ಇದಕ್ಕೆ ಲವೀಶ್ ಕೂಡ ಒಪ್ಪಿಗೆ ನೀಡಿದ್ದ.
ಆದರೆ, ಈ ಮೂವರು ಪ್ರಾಣ ಸ್ನೇಹಿತರ ಇರಾದೆಯೇ ಬೇರೆಯಾಗಿತ್ತು. ಮೊದಲ ರಾತ್ರಿಯ ಸಖತ್ ಸಿದ್ಧತೆ ಮಾಡುವ ಜೊತೆಗೆ ದಂಪತಿಗಳಿಬ್ಬರಿಗೂ ಒಬ್ಬೊಬ್ಬರು ಒಂದೊಂದು ಚಮಕ್ ನೀಡಬೇಕೆಂದು ಗುಟ್ಟಾಗಿ ಮಾತನಾಡಿಕೊಂಡಿದ್ದರು. ಇದು ಈ ಪೆದ್ದು ಲವೀಶ್‌ಗೆ ಗೊತ್ತಿರಲಿಲ್ಲ. ಆತ, ಫಸ್ಟ್ ನೈಟ್ ಕನಸಿನಲ್ಲಿಯೇ ಮುಳುಗಿದ್ದ.
ಸರಿ, ಮೂವರು ಗುಟ್ಟಾಗಿ ಸೇರಿದರು. ಮೂವರಲ್ಲಿ ದಿನೇಸ ಬಡಗಿ ಅಂದ್ರೆ ಕಾರ್ಪೆಂಟರ್, ಸುರೇಸ ವಿದ್ಯುತ್ ತಜ್ಞ ಅಂದ್ರೆ ಎಲೆಕ್ಟ್ರಿಷಿಯನ್ ಮತ್ತು ಸತೀಸ ವೈದ್ಯ ಅಂದ್ರೆ ಡಾಕ್ಟರ್. ನೀನೇನ್ಮಾಡ್ತೀಯ ಮೊದಲು ಹೇಳು ಎಂದು ಒಬ್ಬರಿಗೊಬ್ಬರು ಕಿತ್ತಾಡಿದರು. ಕಡೆಗೆ ದಿನೇಸ ತನ್ನ ಪ್ಲಾನನ್ನು ಬಹಿರಂಗಪಡಿಸಿದ.
ಲವೀಶ್ ಮತ್ತು ಲವೀನಾರಿಬ್ಬರೂ ಇನ್ನೇನು ಸೇರಬೇಕೆನ್ನುವ ಹೊತ್ತಿನಲ್ಲಿ ಮಂಚಕ್ಕೆ ಕರೆಂಟ್ ಪಾಸ್ ಮಾಡಿ ಶಾಕ್ ನೀಡಬೇಕೆಂದು ದಿನೇಸ ಹೇಳಿದ. ನಂತರ ಸುರೇಸ, ಮಂಚವನ್ನು ಶಿಥಿಲಗೊಳಿಸಿ ಅಲುಗಾಡಿಸುವಂತೆ ಮಾಡಿ ಹೊಸಜೋಡಿಗಳಿಗೆ ಮಾಡುವ ಮುನ್ನವೇ ಮುಂಚ ಮುರಿದಂತೆ ಭಾಸವಾಗುವಂತೆ ಮಾಡುವುದಾಗಿ ಹೇಳಿದ.
ನಂತರ ಡಾಕ್ಟರ್ ಸತೀಸನ ಸರದಿ ಬಂದಾಗ, ತಾನು ಏನು ಮಾಡುವುದೆಂದು ಹೇಳುವುದಿಲ್ಲ ಮಾಡಿ ತೋರಿಸುತ್ತೇನೆ ಎಂದು ಹೇಳಿ ಉಳಿದಿಬ್ಬರಿಗೆ ನಿರಾಶೆ ಮೂಡಿಸಿದ. ಏನಾದ್ರೂ ಮಾಡ್ಕೋ ಅಂತ ಇಬ್ಬರು ತಮ್ಮ ಪ್ಲಾನ್ ಎಕ್ಸಿಕ್ಯೂಟ್ ಮಾಡುವುದರಲ್ಲಿ ನಿರತರಾದರು. ಡಾಕ್ಟರ್ ಮಾತ್ರ ಒಳಗೊಳಗೇ ನಗುತ್ತಿದ್ದ.
ಮೊದಲ ರಾತ್ರಿಯ ಘಳಿಗೆ ಬಂದೇ ಬಿಟ್ಟಿತು. ಲವೀಶ್ ಮತ್ತು ಲವೀನಾ ಫೈವ್ ಸ್ಟಾರ್ ಹೋಟೆಲ್ ರೂಂ ಸೇರಿಕೊಂಡು ಬಾಗಿಲು ಹಾಕಿಕೊಂಡರು. ಈಕಡೆ ಮೂವರು ಸ್ನೇಹಿತರು ಒಬ್ಬರಿಗೊಬ್ಬರು ಕಣ್ಣು ಮಿಟುಕಿಸಿಕೊಂಡಿದ್ದರು. ಆ ರಾತ್ರಿ ಕಳೆದು ಹಗಲು ಆಗೇಬಿಟ್ಟಿತಲ್ಲ. ಸ್ನಾನಗೀನ ಮುಗಿಸಿದ ಮೇಲೆ ಲವೀಶ್ ತನ್ನ ಸ್ನೇಹಿತರನ್ನು ತನ್ನ ರೂಮಿಗೆ ಕರೆಯಿಸಿಕೊಂಡ.
"ಅಲ್ರೋ, ಮಂಚಕ್ಕೆ ಕರೆಂಟ್ ಪಾಸ್ ಮಾಡಿಸಿ ಶಾಕ್ ಕೊಟ್ಟಿದ್ದು ಮಜವಾಗಿತ್ತು, ನಂತರ ಮಂಚದ ಮೇಲೆ ಉರುಳುತ್ತಿದ್ದಂತೆ ಮಂಚವೇ ಮುರಿದಂತೆ ಭಾಸವಾಗಿದ್ದು ಇನ್ನೂ ಸೂಪರಾಗಿತ್ತು. ಬಲ್ ನನ್ ಮಕ್ಳು ಕಣ್ರಾ ನೀವು. ಅವೆರಡೂ ಓಕೆ, ಆದರೆ ಕಾಂಡೋಮ್‌ನಲ್ಲಿ ಲೋಕಲ್ ಅನೆಸ್ತೀಶಿಯಾ ಹಾಕಿದ್ದು ಯಾರದು? ಅವನನ್ನು ಮಾತ್ರ ಕೊಲ್ಲದೆ ಬಿಡುವುದಿಲ್ಲ" ಎಂದು ಅಬ್ಬರಿಸುತ್ತಿದ್ದಂತೆ ಸತೀಸ ಅಲ್ಲಿಂದ ಪರಾರಿಯಾಗಿದ್ದ. [ಗಂಡ ಹೆಂಡತಿ ಜೋಕ್ಸ್]












Click it and Unblock the Notifications