ಜೋಕು: ತತ್ತಿ ಮೊದಲು ಬಂತೋ ಕೋಳಿನೋ!

Posted By:
Subscribe to Oneindia Kannada

ಮಾಸ್ತರ: ರಾಮ್ಯಾ, ಹೇಳಲೇ ತತ್ತಿ ಮೊದಲು ಬಂತೋ ಏನ್ ಕೋಳಿ 🐓ಮೊದಲ ಬಂತೋ..?

ರಾಮ್ಯಾ: ಸರ್‌ ತತ್ತಿ ಬಂತ್ರಿ..

ಮಂಜ್ಯಾ: ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ..?

ಮಾಸ್ತರ: ಹೇಳಪಾ, ನೀನ ಹೇಳ.

ಮಂಜ್ಯಾ: ಸರ ಮೊದಲ ಬೀರ್ 🍾ಬಂತರಿ,

ಆಮೇಲೆ ಶೇಂಗಾ ಬಂತರಿ,
ಆಮೇಲೆ ತತ್ತಿ ಬಂತರಿ,

ಆಮೇಲೆ ಕೋಳಿ ಬಂತರಿ

ಲಾಸ್ಟಗೆ 850/- ಬಿಲ್ಲ್ ಬಂತರಿ ಸರಾ..

😀😄😜😜😂😂😂
****
ಟೀಚೆರ್ : ಗುಂಡ " ಗಂಡ ಬೇರುಂಡ " ಎಂದರೆ ಏನು ? ವಿವರಿಸು ?

ಗುಂಡ : ಅದು ತುಂಬಾ ಸುಲುಭ ಮೇಡಂ . ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ.

" ಗಂಡ" "ಬೇರೆ" "ಉಂಡ "

😁😊😁😊😁😊😁😊
****
ನ್ಯಾಯಾಲಯದಲ್ಲಿ-

ಜಡ್ಜ್ - ಈ ಗುಂಡನ ಎರಡೂ ಕಿವಿ ಕಟ್ ಮಾಡಿ🤕

ಗುಂಡ - ಬ್ಯಾಡಾ ಸ್ವಾಮಿ ಕಿವಿ ಏನಾರ ಕಟ್ ಮಾಡಿದ್ರ ನಾ ಕುರುಡ ಆಗ್ತೀನಿ..

ಜಡ್ಜ್ - ಲೇ ಹುಚ್ಚಾ ಕಿವಿ ಕತ್ತuರಿಸಿದ್ರ ಕುರುಡ ಹೆಂಗ ಆಗ್ತೀ ಲೇ..⁉

ಗುಂಡ - ಚಷ್ಮಾದ ಕಡ್ಡಿ ಏನ್ ನಿನ್ನ ಕಿವ್ಯಾಗ ಇಡ್ಲ್ಯಾ..❓

😭😵
*****
ಹುಡುಗ: ಮಸ್ತ ಡ್ರೆಸ್ ಹಾಕಿ ಅಲಾ

ಹುಡುಗಿ: ಥ್ಯಾಂಕ್ಸ್

ಹುಡುಗ: ಲಿಫ್ಟಿಕ್ ಅಂತೂ ಬಾರಿ ಐತಿ

ಹುಡುಗಿ: ಥ್ಯಾಂಕ್ಸ್

ಹುಡುಗ: ಮೇಕಪ್ ಅಂತು ಖತರನಾಕ

ಹುಡುಗಿ: ಥ್ಯಾಂಕ್ಸ್ ಅಣ್ಣಾ

ಹುಡುಗ: ಆದರೂ ಎ‌ನ್ ಬಿಡವಾ ಚಂದ ಕಾಣವಲ್ಲಿ.

😂😂😂😂😂😂
****
#ಮದುವೆ ದಿನ ಬರೋ ಹುಡ್ಗಿರು,
#exam ದಿನ ಬರೋ questions ನೋಡಿ ಅನ್ಸೋದು ಒಂದೆ
ಎಲ್ಲೀದ್ವೋ ಇವೆಲ್ಲಾ
😍😍😍😍
*****
ಒಮ್ಮೆ ಕೆಇಬಿ ಅಧಿಕಾರಿಯೊಬ್ಬ ಜಿಪುಣ ವ್ಯಕ್ತಿಯ ಮನೆಗೆ ಮೀಟರ್ ಪರೀಕ್ಷಿಸಲು ಹೋದ..

ಅಧಿಕಾರಿ: ನಿಮ್ಮ ಮನೆಯ ಮೀಟರ್ ಚೆಕ್ ಮಾಡ್ಬೇಕಾಗಿದೆ, ಯಾಕಂದ್ರೆ ಈ ತಿಂಗಳು ನಿಮ್ಮ ಬಿಲ್ ಕೇವಲ 1 ಯೂನಿಟ್ ನಷ್ಟೇ ಬಂದಿದೆ. ನೀವು ಮೀಟರ್ ನಲ್ಲಿ ಏನೋ ಗಡಿಬಿಡಿ ಮಾಡಿದಂಗಿದೆ😡😡..

ಜಿಪುಣ ವ್ಯಕ್ತಿ😏: ಮೀಟರ್ ಸರಿಯಾಗಿದೆ ಸರ್..
ನಾವೇನು ಮಾಡಿಲ್ಲ,
ನಾವು ಬರೀ ಚಿಮಣಿ ಹುಡುಕಲಷ್ಟೇ ಕರೆಂಟ್ ಬಳಸ್ತೀವಿ!!
😝😝😝

ಅಧಿಕಾರಿ ಶಾಕ್😲😲😲!!
😝😂😂😂🤣

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jokes for the Day : Silly Question and Answers Jokes received via whatsapp are here. Check out funny and pun added lines.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ