ಹೀಗೊಂದಷ್ಟು ಮೊಬೈಲ್ ಗಾದೆಗಳು: ನಕ್ಕು ಹಗುರಾಗಿ..!

Posted By:
Subscribe to Oneindia Kannada

* ಮಾತು ಮನೆ ಕೆಡುಸ್ತು, FACEBOOK ಪ್ರಪಂಚ ಕೆಡುಸ್ತು !!
* ಗಂಡ ಹೆಂಡ್ತಿ ಜಗಳ WiFi Reconnect ಆಗೊ ತನಕ
* ಹೊಟ್ಟೆಗೆ ಹಿಟ್ ಇಲ್ದಿದ್ರು, ಮೊಬೈಲಲ್ಲಿ NET ಇರ್ಬೆಕು
* ಹುಡಿಗೀರ್ಗೆ ಮೆಕಪ್ ಚಿಂತೆ, ಹುಡುಗನಿಗೆ JIO sim ಚಿಂತೆ
* 2G ಗೆ ಹೋದ ಮಾನ 4G ಹಾಕಿಸಿದರು ಬಾರದು
* ಬೇರೆಯವರ ವೈಫೈ ಯಲ್ಲಿ APP Update ಮಾಡ್ದೋನೆ ಜಾಣ
* 2G ಕೊಟ್ರೆ ಅತ್ತೆ ಕಡೆ, 4G ಕೊಟ್ರೆ ಸೊಸೆ ಕಡೆ 😂
* ಚಿಂತೆ ಇಲ್ಲದವನಿಗೆ ಸಂತೇಲು ನಿದ್ದೆ.. INTERNET ಇಲ್ಲದವನಿಗೆ ಕೂತಲ್ಲೆ ನಿದ್ದೆ
* ಮನೆಯಲ್ಲಿ ಮೊಬೈಲ್ ಕೆಟ್ರೆ ಅದಕ್ಕೆ ಮಕ್ಕಳೇ ಕಾರಣ...ಮನೆಯಲ್ಲಿ
ಮಕ್ಕಳು ಕೆಟ್ರೆ ಅದಕ್ಕೆ ಮೊಬೈಲೇ ಕಾರಣ...

*******

ಜೋಕು: ಸರಳ ಪ್ರಶ್ನೆಗಳಿಗೆ ಗುಂಡನ 'ಕಚಗುಳಿ' ಉತ್ತರ

ಮತ್ತೊಂದಷ್ಟು ಜೋಕು...
ಅಪಖ್ಯಾತಿಗೂ ಒಂದು ಮಿತಿ ಇರಬೇಕು..
ಬಡವನೊಬ್ಬ ಪ್ರತಿದಿನ ಕಾಗದದಲ್ಲಿ, "ದೇವರೆ, ನನಗೆ 50,000 ರೂಪಾಯಿ ಕಳುಹಿಸಿ" ಎಂದು ಬಲೂನ್ ನಲ್ಲಿ ಚೀಟಿ ಆಂಟಿಸಿ ಗಾಳಿಯಲ್ಲಿ ಹಾರಿಸುತ್ತಿದ್ದ

ಆ ಬಲೂನ್ ಪ್ರತಿದಿನ ಪೊಲೀಸ್ ಠಾಣೆಯ ಬಳಿ ಹಾದುಹೋಗುತ್ತಿತ್ತು ಮತ್ತು ಪೋಲಿಸ್ ಸಿಬ್ಬಂದಿ ಪ್ರತಿದಿನ ಬಲೂನ್ ಅನ್ನು ಹಿಡಿದು ಚೀಟಿ ಓದುತ್ತಿದ್ದರು.

ಆ ಮನುಷ್ಯನ ಮುಗ್ಧತೆಗೆ ನಗುತ್ತಾ, ಒಂದು ದಿನ ಪೊಲೀಸರೆಲ್ಲ ಸೇರಿ, ಬಡವನಿಗೆ ಸಹಾಯ ಮಾಡಬೇಕೆಂದು ಎಂದು ಒಟ್ಟು 25,000 ರೂ.ಸಂಗ್ರಹಿಸಿ ಆ ವ್ಯಕ್ತಿಯ ಮನೆಗೆ ಹೋಗಿ ಕೊಟ್ಟರು.
ಆದರೆ ಮರುದಿನವೂ ಬಲೂನ್ ಪೊಲೀಸ್ ಠಾಣೆಯ ಮೇಲೆ ಹಾದುಹೋಯಿತು. ಅಚ್ಚರಿಯಿಂದ ಪೊಲೀಸ್ ಸಿಬ್ಬಂದಿ ಅದರಲ್ಲಿದ್ದ ಚೀಟಿ ತೆಗೆದು ಹೋದಿದರು. ಅದರಲ್ಲಿ ಬರೆದಿತ್ತು...

"ದೇವರೇ, ನೀವು ಕಳುಹಿಸದ ಹಣ ಸಿಕ್ಕಿತು. ಆದರೆ ನೀವು ಪೊಲೀಸರ ಕೈಯಲ್ಲಿ ಕಳುಹಿಸಬಾರದಿತ್ತು! ಅವರು 25,000 ರೂಪಾಯಿ ತಿಂದು ಹಾಕಿಬಿಟ್ಟಿದ್ದಾರೆ!"

ಸುಮ್ಮನೆ ನಕ್ಕು ಬಿಡಿ : ಟೀಚರ್ -ವಿದ್ಯಾರ್ಥಿ ಜೋಕುಗಳು

*****

ನಾನು ಸ್ಕೂಲ್ ನಲ್ಲಿ ಕಲಿಯುತ್ತಿದ್ದ ಕಾಲದಲ್ಲಿ ಓರ್ವ teacher ನನ್ನಲ್ಲಿ ಸ್ವಲ್ಪ ಸಿಟ್ಟಾಗಿದ್ದರು.

ಒಮ್ಮೆ teacher ಊಟ ಮಾಡುತ್ತಿದ್ದಾಗ ನಾನೂ ಹೋಗಿ ಹತ್ತಿರದಲ್ಲಿ ಕುಳಿತು ಕೊಂಡೆ.

ಆಗ teacher ನನ್ನನ್ನು ನೋಡಿ ಹೇಳಿದರು, 'ಹಂದಿ ಮತ್ತು ಹಕ್ಕಿ ಒಟ್ಟಿಗೆ ಕುಳಿತುಕೊಳ್ಳುವುದಿಲ್ಲ.'

ಆಗ ನಾನು ಹೇಳಿದೆ: ಪರವಾಗಿಲ್ಲ teacher ನಾನು ಹಾರಿ ಹೋಗುತ್ತೇನೆ ಎಂದು ಹೇಳಿ ಸ್ವಲ್ಪ ದೂರ ಹೋಗಿ ಕುಳಿತುಕೊಂಡೆ.
Teacher ಗೆ ತುಂಬಾ ಮಜುಗರವಾಯಿತು.
ಇದಕ್ಕೆ ಪ್ರತಿಕಾರ ತೀರಿಸಲು ಕಾಯುತ್ತಿದ್ದರು...
ಒಮ್ಮೆ ಕ್ಲಾಸಿನಲ್ಲಿ ಅವರು ನನ್ನಲ್ಲಿ ಒಂದು ಪ್ರಶ್ನೆ ಕೇಳಿದರು: ನಿನಗೆ ಒಂದು ಬ್ಯಾಗಿನಲ್ಲಿ 'ಅರಿವು' ಹಾಗೂ ಇನ್ನೊಂದು ಬ್ಯಾಗಿನಲ್ಲಿ 'ಹಣ' ಕೊಟ್ಟರೆ ಅದರಲ್ಲಿ ಒಂದನ್ನು ಆಯ್ಕೆ ಮಾಡಲು ಅವಕಾಶ ನೀಡಿದರೆ ನೀನು ಯಾವ ಬ್ಯಾಗನ್ನು ಇಟ್ಟುಕೊಳ್ಳುತ್ತಿಯ?

ನಾನು ಹೇಳಿದೆ: 'ಹಣದ ಬ್ಯಾಗನ್ನು ತೆಗೆದುಕೊಳ್ಳುತ್ತೇನೆ'

ಆಗ teacher ಹೇಳಿದರು: ದೊಡ್ಡ ಜನ ಆಗುವವರು ಅರಿವಿನ ಬ್ಯಾಗ್ ತೆಗೆದುಕೊಳ್ಳುತ್ತಾರೆ. ನಾನಾಗಿದ್ದರೆ ಅರಿವಿನ ಬ್ಯಾಗ್ ತೆಗೆದುಕೊಳ್ಳುತ್ತಿದ್ದೆ.

ಆಗ ನಾನು ಹೇಳಿದೆ:ಎಲ್ಲರೂ ಅವರವರ ಬಳಿ ಇಲ್ಲದೇ ಇರುವುದನ್ನೇ ತೆಗೆದುಕೊಳ್ಳುತ್ತಾರೆ!

ಈ ಸಲ Teacher ರವರಿಗೆ ನನ್ನ ಮೇಲೆ ಕೋಪ ಸಹಿಸಲಾಗಲಿಲ್ಲ.

ಒಮ್ಮೆ ನನ್ನ ಪರೀಕ್ಷಾ ಪೇಪರ್ ನಲ್ಲಿ ಅವರು ಮಾರ್ಕ್ಸ್ ಮತ್ತು ಗ್ರೇಡ್ ಬರೆಯುವ ಬದಲು ಪೇಪರ್ ನ ಕೊನೆಯಲ್ಲಿ "ಮೂರ್ಖ" ಎಂದು ಮಾತ್ರ ಬರೆದು ಇಟ್ಟರು.

ಈಗ ನನಗೆ teacher ರವರ ಮೇಲೆ ಅಸಾಧ್ಯವಾದ ಸಿಟ್ಟು ಬಂದರೂ ತುಂಬಾ ಸೌಮ್ಯವಾಗಿ ಅವರಲ್ಲಿ ಹೇಳಿದೆ: 'ನೀವು ನನ್ನ ಪೇಪರ್ ನಲ್ಲಿ ನಿಮ್ಮ ಸಹಿ ಮಾತ್ರ ಹಾಕಿದ್ದೀರಿ,ನನ್ನ ಮಾರ್ಕ್ಸ್ ಬರೆಯಲಿಲ್ಲ!'

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After smart phone is invented it has become a part and parcel of life. Here are few modern proverbs on Mobile phone and internet.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ