ಸಾರ್ ಗಣೇಶನ ಹಬ್ಬಕ್ಕೆ ನಾಲ್ಕು ದಿನ ರಜಾ ಬೇಕಿತ್ತು!

ಎಕ್ಸೆಂಟ್ರಿಕ್ ಯಜಮಾನ ಡಿಬ್ಬಿಯ ಜಾಯಮಾನವನ್ನು ಅರಿತಿದ್ದ ಕೆಲಸಗಾರ ಸುಬ್ಬು ಅಂಜುತ್ತ ಅಳುಕುತ್ತಲೇ ಗಣೇಶ ಚತುರ್ಥಿಗೆ ನಾಲ್ಕು ದಿನಗಳ ರಜಾ ಬೇಕೆಂದು ಕೇಳಲು ಹೋಗುತ್ತಾನೆ.

ಸುಬ್ಬು : ಸರ್, ಹೊಸದಾಗಿ ಮದುವೆಯಾಗಿದ್ದೇನೆ. ಗಣಪತಿ ಹಬ್ಬಕ್ಕೆ ಹೆಂಡತಿ ಊರಿಗೆ ಹೋಗುತ್ತಿದ್ದೇನೆ. ನಾಲ್ಕು ದಿನಗಳ ರಜಾ ಬೇಕಿತ್ತು ಸರ್.

ಡಿಬ್ಬಿ : ದೀಪಾವಳಿಗೆ ಅಳಿಯತನಕ್ಕೆ ಹೆಂಡತಿ ಊರಿಗೆ ಹೋಗುತ್ತಾರಲ್ಲವಾ? ಈಗ್ಯಾಕೆ?

ಸುಬ್ಬು : ಏನೋ ಗೊತ್ತಿಲ್ಲ ಸಾರ್, ಬಾ ಅಂತ ಕರೆದಿದ್ದಾರೆ ಹೋಗಲೇಬೇಕು.

ಡಿಬ್ಬಿ : ಸರ್, ರಜಾ ಮಂಜೂರು ಮಾಡುತ್ತೇನೆ. ಆದರೆ, ಒಂದು ಶರ್ತಿನ ಮೇಲೆ.

ಸುಬ್ಬು : ಅದೇನು ಹೇಳಿ ಸಾರ್...

ಡಿಬ್ಬಿ : ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರೆ ನಿನಗೆ ನಾಲ್ಕು ದಿನಗಳ ರಜಾ ಮಂಜೂರ್. "ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?" (ಬೀಗುತ್ತ ಕೇಳಿದ...)

ಸುಬ್ಬು : ಕಟ್ಟಪ್ಪನಿಗೆ ಬಾಹುಬಲಿ ನಾಲ್ಕು ದಿನಗಳ ರಜಾ ನೀಡಿರಲಿಲ್ಲವೆಂದು ಕಾಣುತ್ತದೆ ಸರ್.

ಡಿಬ್ಬಿ : ಕರೆಕ್ಟ್ ಕರೆಕ್ಟ್... ಗಣಪತಿ ಹಬ್ಬ ಅಷ್ಟೇ ಏಕೆ, ಅನಂತ ಚತುರ್ದಶಿಯನ್ನೂ ಮುಗಿಸಿಕೊಂಡೇ ಬಾ. ನಿಮ್ಮ ಗಣಪತಿಗೆ ನನ್ನದೂ ಒಂದು ನಮಸ್ಕಾರ ಹೇಳಿಬಿಡು.

***
ಇಂದಿನ ಜಮಾನಾದ ವಿದ್ಯಾರ್ಥಿಗಳ ದಿನಚರಿ ಹೀಗಿರುತ್ತೆ ನೋಡಿ...

ಟಿವಿ 2 ಗಂಟೆ, ಫೇಸ್ ಬುಕ್ 3 ಗಂಟೆ, ವಾಟ್ಸಾಪ್ 12 ಗಂಟೆ, ಸ್ನೇಹಿತರಿಗಾಗಿ 1 ಗಂಟೆ, ನಿದ್ದೆ 6 ಗಂಟೆ, ಓದು... ಬರೀ ಢಣಢಣ ಗಂಟೆ! (ಇವೆಲ್ಲ ವಾಟ್ಸಾಪ್ ನಲ್ಲಿ ಬಂದಿರುವ ಜೋಕುಗಳು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+