ಮರಿಗುಂಡನ ಉತ್ತರಕ್ಕೆ ತತ್ತರಿಸಿದ ಗುಂಡ!

Kannada jokes for the day
ಮರಿಗುಂಡ : ಅಪ್ಪಾ.. ನೀವು ಇಂಜಿನಿಯರ್ ಹೇಗಾದ್ರಿ?
ಗುಂಡ : ಅದಕ್ಕೆ ಬಹಳ ಪರಿಶ್ರಮ, ಬುದ್ದಿವಂತಿಕೆ ಇರಬೇಕು.
ಮರಿಗುಂಡ : ಅದಕ್ಕೆ ಅಪ್ಪಾ.. ನಾನು ಕೇಳಿದ್ದು, ಮತ್ತೆ ಹೇಗೆ ನೀವು ಇಂಜಿನಿಯರ್ ಆದ್ರೀಂತ?

***
ತಿಮ್ಮ : ಇವರೆಲ್ಲಾ ಯಾಕೆ ಹೀಗೆ ಓಡ್ತಾ ಇದ್ದಾರೆ?
ಗುಂಡ : ಅದು ರನ್ನಿಂಗ್ ರೇಸ್. ವಿನ್ ಆದವನಿಗೆ ಬಹುಮಾನ ಸಿಗುತ್ತೆ.
ತಿಮ್ಮ : ಅಲ್ಲಾ. ಈ ಜನರಿಗೆ ಬುದ್ದಿ ಇದೆಯಾ. ಬಹುಮಾನ ಕೊಡೋದು ಒಬ್ಬರಿಗೆ ಇಷ್ಟು ಜನ ಓಡ್ತಾ ಇದ್ದಾರಲ್ಲಾ.

***
ಮರಿಗುಂಡ : ಅಲ್ಲಾಪ್ಪಾ . ಇಡೀ ದಿನ ವಟವಟ ಅನ್ನೋ ಅಮ್ಮ. ಇವತ್ತು ಯಾಕೆ ಬಾಯಿ ಮುಚ್ಚಿಕೊಂಡು ಸುಮ್ನಿದ್ದಾಳೆ?
ಗುಂಡ : ಅವ್ಳು ಲಿಪ್ ಸ್ಟಿಕ್ ಕೇಳಿದ್ಲು..
ಮರಿಗುಂಡ : ಯಾಕೆ ನೀವು ತಂದುಕೊಟ್ಟಿಲ್ವಾ?
ಗುಂಡ : ನಾನು ಲಿಪ್ ಸ್ಟಿಕ್ ತರೋ ಬದ್ಲು.. ಫೆವಿ ಸ್ಟಿಕ್ ತಂದು ಕೊಟ್ಟೆ!

***
ಟೀಚರ್ : ದೊಡ್ಡವನಾದ ಮೇಲೆ, ಏನು ಮಾಡಬೇಕೆಂದು ಇದ್ದೀಯಾ?
ಮರಿಗುಂಡ : ಮದುವೆ ಆಗಬೇಕೆಂದಿದ್ದೇನೆ ಮಿಸ್.
ಟೀಚರ್ : ನಾನು ಕೇಳಿದ್ದು ದೊಡ್ಡವನಾದ ಮೇಲೆ ಏನ್ ಆಗ್ತೀಯಾ?
ಮರಿಗುಂಡ : ಮದುಮಗ..
ಟೀಚರ್ : ಬೇಕೂಫಾ. ನಾನು ಕೇಳಿದ್ದು ದೊಡ್ಡವನಾದ ಮೇಲೆ ಏನ್ ಪಡ್ಕೋ ಬೇಕೂಂತ ಇದ್ದೀಯಾ?
ಮರಿಗುಂಡ : ಮದುಮಗಳನ್ನಾ.
ಟೀಚರ್ : Oh.. God. ಹೋಗ್ಲಿ..ನಿನ್ನ ತಂದೆತಾಯಿಗೊಸ್ಕರ ಏನ್ ಮಾಡ್ತೀಯಾ?
ಮರಿಗುಂಡ : ಅವರಿಗೆ ಸೊಸೆ ಕರ್ಕೊಂಡು ಬರ್ತೀನಿ.
ಟೀಚರ್ : ಯು ಸ್ಟುಪಿಡ್.. ದೊಡ್ಡವನಾದ ಮೇಲೆ ತಂದೆತಾಯಿಗೆ ಏನು ಕೊಡ್ತೀಯಾ?
ಮರಿಗುಂಡ : ಅವರಿಗೆ ಮೊಮ್ಮಗನನ್ನು ಕೊಡ್ತೀನಿ..
ಟೀಚರ್ : ಸಾಕಾಪ್ಪಾ. ಸಾಕು. ಸರಿ ದೊಡ್ಡವನಾದ ಮೇಲೆ ನಿನ್ನ ಜೀವನದ ಉದ್ದೇಶವೇನು?
ಮರಿಗುಂಡ : ನಾವಿಬ್ಬರು.. ನಮಗಿಬ್ಬರು ಟೀಚರ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+