ನನ್ನ ಹೆಸರು ಅಬ್ದುಲ್ ನಾರಾಯಣ್ ಡಿಸೋಜ!

ಮಗನೇ ಗುಂಡ.. ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಬೇಕಾದ ವರವನ್ನು ಕೇಳು ಎಂದ.
ಗುಂಡ - ಭಗವಂತ.. ನನಗೊಂದು ಸುಂದರವಾದ ಹುಡುಗಿಯನ್ನು ಕರುಣಿಸು.
ದೇವರು - ನೀನು ಮುಸ್ಲಿಂ ಆಗಿದ್ದರೆ ಕತ್ರಿನಾ, ಹಿಂದೂ ಆಗಿದ್ದರೆ ಕರೀನಾ, ಕ್ರೈಸ್ತನಾಗಿದ್ದರೆ ಜೆನಿಲಿಯಾಳನ್ನು ಕರುಣಿಸುವೆ. ಹೇಳು.. ಏನು ನಿನ್ನ ಹೆಸರು?
ಗುಂಡ - ವಾವ್.. ನನ್ನ ಹೆಸರು ಅಬ್ದುಲ್ ನಾರಾಯಣ್ ಡಿಸೋಜ..
***
ತಾಯಿ - ಮಗನೇ ಏನು ಮಾಡುತ್ತಿದ್ದೀಯಾ ?
ಮಗ - ಅಮ್ಮಾ ನಾನು ಓದುತ್ತಿದ್ದೇನೆ.
ತಾಯಿ - ಗುಡ್. ಏನು ಓದುತ್ತಿದ್ದೀಯಾ?
ಮಗ - ಅದೇ ಅಮ್ಮ.. ನಿನಗೆ ಸೊಸೆಯಾಗಿ ಬರುವವಳ ಮೆಸೇಜ್..
***
ಗುಂಡ ಶೌಚಾಲಯಕ್ಕೆ ಹೋದ ಪಕ್ಕದಿಂದ ಹೇಗಿದ್ದೀಯಾ? ಎನ್ನುವ ಶ್ವರ ಕೇಳಿ ಬಂತು.
ಗುಂಡ : ನಾನು ಚೆನ್ನಾಗಿದ್ದೇನೆ.
ಪಕ್ಕದಿಂದ : ಏನು ಮಾಡುತ್ತಿದ್ದೀಯ?
ಗುಂಡ : ನೀನು ಏನು ಮಾಡುತ್ತಿದ್ದೀಯ ಅದನ್ನೇ ನಾನು ಮಾಡುತ್ತಿದ್ದೇನೆ.
ಪಕ್ಕದಿಂದ : ನಾನು ಅಲ್ಲಿಗೆ ಬರಲೇ?
ಗುಂಡ : ಈಗ ಬೇಡ..
ಪಕ್ಕದಿಂದ : ಏ ನಾನು ನಿನಗೆ ಆಮೇಲೆ ಫೋನ್ ಮಾಡುತ್ತೇನೆ. ಪಕ್ಕದೊಲ್ಲೊಬ್ಬ ಬೇಕೂಫಾ ನನ್ನ ಪ್ರಶ್ನೆಗೆಲ್ಲಾ ಉತ್ತರಿಸುತ್ತಿದ್ದಾನೆ.
***
ಈಗ ಸ್ಯಾಂಡಲ್ ವುಡ್ ನ ಪ್ರಮುಖ ನಟ/ನಟಿಯರ ಮಕ್ಕಳು ಇಪ್ಪತ್ತು ವರ್ಷಗಳ ನಂತರ ಚಿತ್ರ ನಿರ್ಮಿಸಿದರೆ, ಚಿತ್ರಕ್ಕೆ ಯಾವ ರೀತಿಯ ಹೆಸರಿಡಬಹುದು ಎನ್ನುವ ಹಾಗೆ ಸುಮ್ಮನೆ ಒಂದು ಕಲ್ಪನೆ...
ರಕ್ಷಿತಾ/ಪ್ರೇಮ್ ಮಗ - ಕರಿಯ 2
ಸುದೀಪ್ ಮಗ - ಕಿಚ್ಚ ಲುಚ್ಚ
ಉಪೇಂದ್ರ ಮಗ - H2SO4
ರವಿಚಂದ್ರನ್ ಮಗ - ಆಂಟಿಯ ಬ್ಲೌಸ್ ಕದ್ದ
ದರ್ಶನ್ ಮಗ - ಶಿವಾಜಿನಗರ
ಪುನೀತ್ ಮಗ - ನಮ್ಮ ಗೂಳಿ












Click it and Unblock the Notifications