ಪುಸ್ತಕ ಓದುತ್ತಿದ್ದ ವೈದ್ಯ ಡಿಸ್ಮಿಸ್ ಆದ!
ಆ ವೈದ್ಯ ಯಾವ ಪುಸ್ತಕ ಓದುತ್ತಿದ್ದಿದ್ದಕ್ಕಾಗಿ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿತು ಹೇಳಿ? ಉತ್ತರ ಹೊಳೀತಾ?
ಆ ವೈದ್ಯ ಓದುತ್ತಿದ್ದ ಪುಸ್ತಕ "30 ದಿನಗಳಲ್ಲಿ ವೈದ್ಯನಾಗುವುದು ಹೇಗೆ?!"
***
ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾಲೇಜು ಜೀವನದ ಮೊದಲ ದಿನ. ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಡುವಿನ ಸಂವಾದ...
ವಿದ್ಯಾರ್ಥಿ : ನಿನ್ನ ಹೆಸರೇನು?
ವಿದ್ಯಾರ್ಥಿನಿ : ಎಲ್ಲರೂ ನನ್ನನ್ನು " ಅಕ್ಕ' ಅಂತಾರೆ.
ವಿದ್ಯಾರ್ಥಿ : ವಾವ್, what a co-incident. ಎಲ್ಲರೂ ನನ್ನನ್ನ "ಬಾವ" ಅಂತಾರೆ!
***
ಅಪ್ಪ : ಲೇ ಗುಂಡ, ನಿನ್ನ ಪರೀಕ್ಷೆ ಫಲಿತಾಂಶ ಏನಾಯಿತು?
ಗುಂಡ : ಅಪ್ಪಾ, ನಾನು ಮತ್ತೆ ಫೇಲ್ ಆದೆ.
ಅಪ್ಪ : ಇನ್ನು ಮುಂದೆ ನನ್ನನ್ನು ಅಪ್ಪಾ ಅಂತ ಕರೀಬೇಡ.
ಗುಂಡ : ಓ.. ಕಮಾನ್ ಅಪ್ಪಾ.. ನಾನು ಹೇಳ್ತಾ ಇದ್ದಿದ್ದು ನನ್ನ ಸ್ಕೂಲ್ ಟೆಸ್ಟ್ ಬಗ್ಗೆ, ಡಿಎನ್ಎ ಟೆಸ್ಟ್ ಬಗ್ಗೆ ಅಲ್ಲ.
***
ಮಗ : ಅಪ್ಪಾ ನಮ್ ಟೀಚರ್ ಸೂಪರ್ ಆಗಿದ್ದಾರೆ.
ಅಪ್ಪ : ಹಾಗೆಲ್ಲ ಹೇಳಬಾರದು ಮಗು, ಟೀಚರ್ ಅಮ್ಮನಿಗೆ ಸಮಾನ.
ಮಗ : ಹೋಗಪ್ಪಾ ನೀನು, ಯಾವಾಗ್ಲೂ ನಿಂಗೇ ಸೆಟ್ ಮಾಡ್ಕೋಳೋಕೆ ನೋಡ್ತೀಯಾ.