ಹೆಣ್ಣಿನ ಕಡೆಯವ್ರೆಲ್ಲಾ ಛತ್ರದಿಂದಲೇ ಪರಾರಿ!

Kannada jokes
ಮದುವೆ ಮನೆಗೆ ಸಂಭ್ರಮ ಸಡಗರದಿಂದ ಆಗಮಿಸಿದ ವರನ ಕಡೆಯವರಿಗೆ ಮೂರ್ಛೆ ಬೀಳುವಂಥ ಅಚ್ಚರಿ ಕಾದಿತ್ತು. ಮದುವೆ ಛತ್ರಕ್ಕೆ ಬಂದರೆ ಎದುರುಗೊಳ್ಳಲು ಹೆಣ್ಣಿನ ಕಡೆಯವರು ಒಬ್ಬರೂ ಇಲ್ಲ. ಒಬ್ಬ ನರಪಿಳ್ಳೆಯೂ ಇಲ್ಲದ ಹಾಗೆ ಎಲ್ಲರೂ ಮಂಗಮಾಯವಾಗಿದ್ದರು.

ಆಗಿದ್ದೇನೆಂದರೆ, ಗಂಡಿನ ಕಡೆಯ ಕೆಲ ಜನ ಛತ್ರಕ್ಕೆ ಮೊದಲೇ ಬಂದು, ದೇಶಾವರಿ ಮಾತನಾಡುತ್ತ, "ಚಿನ್ನದ ಬೆಲೆ ಸಿಕ್ಕಾಪಟ್ಟೆ ದುಬಾರಿಯಾಗಿದೆ. ರೋಲ್ಡ್ ಗೋಲ್ಡ್ ಹಾಕ್ಕೊಂಡೋಗೋವ್ರೆ ಜಾಸ್ತಿ. ಯಾವುದನ್ನೂ ನಂಬೋಹಾಗಿಲ್ಲ. ಹೆಣ್ಣಿನ ಕಡೆಯವ್ರು 20 ತೊಲ ಬಂಗಾರ ಹಾಕಿದ್ದಾರಂದ್ರೆ ಸಿಕ್ಕಾಪಟ್ಟೆ ಶ್ರೀಮಂತರಾಗಿರಬೇಕು. ಯಾವುದಕ್ಕೂ ಹುಷಾರಾಗಿರಬೇಕು" ಅಂತ ಅಂದಿದ್ದನ್ನು ಕೇಳಿದ್ದೇ, ಹೆಣ್ಣಿನ ಕಡೆಯವರು ಕಾಲಿಗೆ ಬುದ್ಧಿ ಹೇಳಿದ್ದಾರೆ.

***

ನೂರು ಸಿಹಿಮುತ್ತು

ಅಂದು ಹೆಂಡತಿಯ ಹುಟ್ಟುಹಬ್ಬ. ಜಸ್ಸಿ ಸಿಂಗ್‌ ಹೆಂಡತಿಗೇನಾದರೂ ಉಡುಗೊರೆ ಕೊಡಬೇಕೆಂದುಕೊಂಡ. ಆದರೆ ಹಣವೇ ಇಲ್ಲ.

ತಕ್ಷಣ ಆತನಿಗೊಂದು ಐಡಿಯಾ ಹೊಳೆಯಿತು. ಬ್ಯಾಂಕ್‌ ಚೆಕ್‌ ತೆಗೆದುಕೊಂಡು ಹಣ ನಮೂದಿಸಬೇಕಾದ ಜಾಗದಲ್ಲಿ 'ನೂರು ಸಿಹಿಮುತ್ತುಗಳು" ಎಂದು ಬರೆದು ಹೆಂಡತಿಗೆ ಕೊಟ್ಟು ಕಚೇರಿಗೆ ಹೋದ.

ಜಸ್ಸಿ ಸಿಂಗ್‌ ಮನೆಗೆ ವಾಪಸ್‌ ಬಂದಾಗ ಹೆಂಡತಿ ಖುಷಿಯಲ್ಲಿದ್ದಳು. ತಾನು ಕಳುಹಿಸಿದ ಗಿಫ್ಟ್‌ ಚೆಕ್‌ ಪರಿಣಾಮವಿರಬೇಕೆಂದುಕೊಂಡ. ಆದರೂ ಸಂತೋಷಕ್ಕೆ ಕಾರಣವೇನೆಂದು ಹೆಂಡತಿಯನ್ನು ಕೇಳಿದ. ಆಕೆ ಹೇಳಿದಳು:'ನಿಮ್ಮ ಚೆಕ್‌ಗೆ ಥ್ಯಾಂಕ್ಸ್‌. ಬ್ಯಾಂಕ್‌ ಮೇನೇಜರ್‌ ನಿಮ್ಮ ಚೆಕ್‌ನ್ನು ಕ್ಯಾಶ್‌ ಮಾಡಿಕೊಟ್ಟ."

***

ಸಿಡುಕಬೇಡ ಸಿಂಗಾರಿ

'ಪ್ರಿಯೆ, ಜೀವನವಿಡೀ ಹೀಗೆ ನಗುನಗ್ತಾ ಇರ್ತೀಯಲ್ಲ ? ನನ್ನ ಮೇಲೆ ಸಿಡುಕೋದು ಗೊಣಗೋದು ಮಾಡೋಲ್ಲ ಅಂತ ದೇವರ ಮುಂದೆ ಆಣೆ ಮಾಡ್ತೀಯ?" ಹುಡುಗ ಆಸೆಯಿಂದ ಅವಳನ್ನು ಕೇಳಿದ.

'ಪ್ರಿಯಾ, ನಾನು ನಿನ್ನ ಮದುವೆ ಆಗ್ತಾ ಇದ್ದೀನಿ ಅನ್ನೋದು ಮರೆತೇ ಬಿಟ್ಟೆಯಾ?" ಹುಡುಗಿ ನೆನಪಿಸಿದಳು.

***

ಚಂದಾ ಕೊಟ್ಟುಬಿಡೋದೇ ವಾಸಿ

'ಸಾರ್‌, ಚಂದಾ ಪುಸ್ತಕ ಹಿಡಿದು ಇಲ್ಲೊಬ್ಬ ಬಂದಿದ್ದಾನೆ" ರಿಸೆಪ್ಷನಿಸ್ಟ್‌ ರೀಟಾ ಒಳಗಿದ್ದ ಬಾಸ್‌ಗೆ ಫೋನಿನಲ್ಲಿ ತಿಳಿಸಿದಳು.

'ಹ್ಯಾಗಿದ್ದಾನೆ ಅವನು?"

'ಅವನ ಮುಖ ನೋಡಿದರೆ ಚಂದಾ ಕೊಟ್ಟು ಬಿಡೋದೇ ಒಳ್ಳೇದು ಅನ್ನಿಸ್ತಾ ಇದೆ ಸಾರ್‌" ಭಯದಿಂದ ರೀಟಾ ಹೇಳಿದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+