ಏನ ಬೇಡಲಿ ನಿನ್ನ ಬಳಿ ಬಂದು ಸಾಂತಾ ಕ್ಲಾಸ್
ಕ್ರಿಸ್ ಮಸ್ ದಿವಸ ಸಾಯಂಕಾಲ ಸಾಂತಾಕ್ಲಾಸ್ ಬ್ರಿಗೇಡ್ ರಸ್ತೆಗೆ ಹೋಗಿದ್ದ. ಅಲ್ಲಿರುವ ಅಂಗಡಿಗಳನ್ನೆಲ್ಲ ಸುತ್ತಾಡಿ, ಐಸ್ ಕ್ರೀಂ, ಪಾಪ್‌ಕಾರ್ನ್ ತಿಂದು ಮಾಲ್‌ಗಳಲ್ಲಿ ವಿಂಡೋ ಶಾಪಿಂಗ್ ಮಾಡಿ ಸುಸ್ತಾಗಿ ಕಟ್ಟೆ ಮೇಲೆ ಕುಳಿತಿದ್ದ. ಆತ ಕುಳಿತಿದ್ದ ಜಾಗಕ್ಕೆ ಸುಮಾರು 20 ವರ್ಷ ವಯೋಮಾನದ ಸುಂದರ ತರುಣಿಯೊಬ್ಬಳು ಬಂದಳು. ಬಂದವಳೇ ಆತನ ತೊಡೆಯ ಮೇಲೆ ಕುಳಿತುಬಿಟ್ಟಳು.
ಸಾಮಾನ್ಯವಾಗಿ ಸಾಂತಾ ಚಿಕ್ಕ ಮಕ್ಕಳ ಆಸೆ ಪೂರೈಸುತ್ತಾನೆಯೇ ಹೊರತು ಪ್ರೌಢರಿಗೆ ಒಲಿಯುವುದಿಲ್ಲ. ಆದರೂ ಮೂಲತಃ ಸಜ್ಜನನಾದ ಸಾಂತಾ "ಏನಮ್ಮಾ ಏನು ಬೇಕಾಗಿತ್ತು ನಿನಗೆ" ಎಂದು ಪ್ರಶ್ನಿಸಿದ.
"ನನಗೇನೂ ಬೇಡ ಸಾಂತಾ, ಆದರೆ ಉಡುಗೊರೆ ಬೇಕಾಗಿರುವುದು ನನ್ನ ತಾಯಿಗೆ ತಾತಾ" ಎಂದಳು ತರುಣಿ. ಸಾಂತಾನಿಗೆ ಆಶ್ಚರ್ಯವಾಯಿತು. "ಏನಮ್ಮಾ ನಿನಗೋಸ್ಕರ ಏನೂ ಕೇಳುತ್ತಿಲ್ಲ, ನಿಮ್ಮ ತಾಯಿಗೋಸ್ಕರ ಕೇಳುತ್ತಿದ್ದೀಯಾ, ಚಿಕ್ಕ ವಯಸ್ಸಿನಲ್ಲಿ ಎಂಥ ದೊಡ್ಡ ಗುಣ, ಎಂಥ ದೊಡ್ಡ ಗುಣ" ಎಂದು ಸಾಂತಾ ಸಂತಸಪಟ್ಟು "ನಿಮ್ಮ ತಾಯಿಗೆ ಏನು ಉಡುಗೊರೆ ಕೊಡಲಿ" ಕೇಳು ಎಂದ.
"ನನ್ನ ಅಮ್ಮನಿಗೆ ಒಬ್ಬ ಒಳ್ಳೆ ಅಳಿಯ ಬೇಕಂತೆ, ಕೊಡ್ತೀಯಾ ಸಾಂತಾ" ಎಂದಳು ತರುಣಿ.
ಪೂರಕ ಓದಿಗೆ
ಬಾಕ್ಸಿಂಗ್ ಡೇ :ಮಾನವೀಯತೆಯ ಭಾವಸ್ಪಂದನ, ಕ್ರಿಕೆಟ್ ಕಲಿಗಳ ಕದನ












Click it and Unblock the Notifications