WCD Recruitment 2024: ಕರ್ನಾಟಕ ಸರ್ಕಾರಿ ಉದ್ಯೋಗ, ನೇಮಕಾತಿ ವಿವರ ತಿಳಿದು ಈಗಲೇ ಅರ್ಜಿ ಹಾಕಿ
ಬೆಂಗಳೂರು, ಫೆಬ್ರವರಿ 04: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೀದರ್ (WCD Bidar) ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಈ ನಿಮಿತ್ತ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಹುದ್ದೆ ಸೇರಬಯಸುವವರು ಈ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೀದರ್ ನಲ್ಲಿ ಒಟ್ಟು 96 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇವೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಕಳುಹಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೀದರ್ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಅರ್ಜಿ ಸಲ್ಲಿಕೆಗೂ ಮೊದಲು ಇಲ್ಲಿ ತಿಳಿಸಿರುವ ಪೂರ್ಣ ಮಾಹಿತಿ ತಿಳಿದುಕೊಳ್ಳಿ.

ನೇಮಕಾತಿ ಪ್ರಕ್ರಿಯೆ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಮಹಿಳಾ ಹಗೂ ಮಕ್ಕಳ ಅಭಿವೃದ್ಧಿ ಇಲಾಖೆ
ಹುದ್ದೆ ಹೆಸರು: ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ
ಒಟ್ಟು ಹುದ್ದೆ: 96
ವೇತನ: ನಿಗದಿ ಆಗಿಲ್ಲ
ಪೋಸ್ಟಿಂಗ್: ಬೀದರ್
ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 5
ಒಟ್ಟು 31 ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರ ಒಟ್ಟು 65 ಸ್ಥಾನ ಸೇರಿ ಒಟ್ಟು 96 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ಪೈಕಿ 10ನೇ ತರಗತಿ ಮತ್ತು 12ನೇ ತರಗತಿ, ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಎಂದು ತಿಳಿಸಿದರು.

ವಯಸ್ಸಿನ ಮಿತಿ
ಬೀದರ್‌ನ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಲೋಕಪಯೋಗಿ ಇಲಖಾ PWD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಪರಿಶೀಲಿಸಿ ನಂತರ ಸಂದರ್ಶನ ನಡೆಸಿ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ವೇತನ ನಿಗದಿ ಮಾಡಲಾಗಿಲ್ಲ ಎಂದು ತಿಳಿಸಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕುವಂತೆ ತಿಳಿಸಲಾಗಿದೆ. ಅರ್ಹರು ಈ ಕೂಡಲೇ ಇಲ್ಲಿ ನೀಡಲಾಗಿರುವ https://karnemakaone.kar.nic.in/abcd/home.aspx ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿ ಅಧಿಸೂಚನೆ ನೋಡಬಹುದು.
ನೆನಪಿಡಬೇಕಾದ ದಿನಾಂಕ
ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಜನವರಿ 10
ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 5











Click it and Unblock the Notifications