ಕಾರವಾರದ ಕಿಮ್ಸ್ ನಲ್ಲಿ ಬೋಧಕರ ಹುದ್ದೆ ಖಾಲಿ ಇದೆ
ಕಾರವಾರ. ಆಗಸ್ಟ್, 24: ಕಾರವಾರದ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ವಿಭಾಗದ ಬೋಧಕರ ಅರ್ಜಿ ಸಲ್ಲಿಸಬಹುದಾಗಿದೆ. ಆಗಸ್ಟ್ 31 ರಂದು ನಡೆಯುವ ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳು ಭಾಗವಹಿಸಬಹುದು.
ಯಾವ ವಿಭಾಗ?
ಫಿಸಿಯಾಲಜಿ, ಪಾರ್ಮಕಾಲಜಿ, ಮೈಕ್ರೋಬಯಾಲಜಿ, ಪೊರೆನ್ಸಿಕದ ಮೆಡಿಸಿನ್, ಕಮ್ಯುನಿಟಿ ಮೆಡಿಸಿನ್, ಎಪಿಡೆಮಿಯಲಾಜಿಸ್ಟ್/ಸ್ಟಟಿಸ್ಟಿಷಿಯನ್, ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್ ಟಿಬಿ ಮತ್ತು ಚೆಸ್ಟ್ ಮೆಡಿಸಿನ್, ಡರ್ಮಟಾಲಜಿ, ಸೈಕ್ಯಾಟ್ರಿ, ಜನರಲ್ ಸರ್ಜರಿ, ಅರ್ಥೋಪೆಡಿಕ್ಸ್, ಇಎನ್ ಟಿ, ಅಪ್ತಮೊಲಜಿ, ಒಬಿಜಿ, ಅನಸ್ತೇಷಿಯಾಲಜಿ, ರೇಡಿಯಾಲಜಿ ಮತ್ತು ಕ್ಯಾಶುವಲಿಟಿ ಮೆಡಿಸಿನ್ ಆಫಿಸರ್ ವಿಭಾಗದಲ್ಲಿ ಹುದ್ದೆಗಳು ಖಾಲಿ ಇವೆ.

ಯಾವ ದಾಖಲೆ ಬೇಕು?
* ಪ್ರೊಫೆಸರ್: ಎಂಬಿಬಿಎಸ್ ನೊಂದಿಗೆ ಎಂಡಿ/ಎಂಎಸ್ ಪದವಿ ಪಡೆದುಕೊಂಡಿರಬೇಕು. ಕನಿಷ್ಠ ಮೂರು ವರ್ಷ ಅಸೋಸಿಯೇಟ್ ಪ್ರೊಫೆಸರ್ ಆಗಿ ಕೆಲಸ ಮಾಡಿದ ಅನುಭವ.
* ಅಸೋಸಿಯೇಟ್ ಪ್ರೊಫೆಸರ್: ಎಂಬಿಬಿಎಸ್ ನೊಂದಿಗೆ ಎಂಡಿ/ಎಂಎಸ್ ಪದವಿ ಪಡೆದುಕೊಂಡಿರಬೇಕು. ಅಸಿಸ್ಟೆಂಟ್ ಪ್ರೊಫೆಸರ್ ಆಗಿ 4 ವರ್ಷದ ಅನುಭವ
* ಅಸಿಸ್ಟೆಂಟ್ ಪ್ರೊಫೆಸರ್: ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ರೆಸಿಡೆಂಟ್, ರಿಜಿಸ್ಟ್ರಾರ್, ಡೆಮಾಸ್ಟ್ರೇಟರ್ ಅಥವಾ ಟ್ಯೂಟರ್ ಆಗಿ ಮೂರು ವರ್ಷ ಅನುಭವ.
* ಸೀನಿಯರ್ ರೆಸಿಡೆಂಟ್/ ಜೂನಿಯರ್ ರೆಸಿಡೆಂಟ್: ಎಂಬಿಬಿಎಸ್ ಕಡ್ಡಾಯ. ಸೀನಿಯರ್ ರೆಸಿಡೆಂಟ್ ಗೆ ಮೂರು ವರ್ಷದ ಸೇವಾ ಅನುಭವ ಅಗತ್ಯ.
* ಚೀಫ್ ಮೆಡಿಕಲ್ ಆಫೀಸರ್/ ಟ್ಯೂಟರ್: ಎಂಬಿಬಿಎಸ್ ವ್ಯಾಸಂಗ ಸಂಪೂರ್ಣ
ಎಷ್ಟು ಹುದ್ದೆ ಖಾಲಿ ಇದೆ?
5 ಪ್ರೊಫೆಸರ್, 15 ಅಸೋಸಿಯೇಟ್ ಪ್ರೋಫೆಸರ್, 18 ಅಸಿಸ್ಟೆಂಟ್ ಪ್ರೊಫೆಸರ್, 17 ಸೀನಿಯರ್ ರೆಸಿಡೆಂಟ್, 26 ಜೂನಿಯರ್ ರೆಸಿಡೆಂಟ್, 11 ಟ್ಯೂಟರ್ ಮತ್ತು 4 ಚೀಫ್ ಮೆಡಿಕಲ್ ಆಫೀಸರ್ ಹುದ್ದೆಗಳು ಖಾಲಿ ಇವೆ. ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಶುಲ್ಕವಾಗಿ 500 ರು. ಡಿಡಿಯನ್ನು ಸಂಸ್ಥೆಯ ಹೆಸರಲ್ಲಿ ಪಾವತಿ ಮಾಡಿರಬೇಕು.
ಸಂದರ್ಶನ ದಿನಾಂಕ: ಆಗಸ್ಟ್ 31, 2016, ಬುಧವಾರ
ಸಮಯ: ಬೆಳಗ್ಗೆ 9 ಗಂಟೆಯಿಂದ
ಸ್ಥಳ: ಕಿಮ್ಸ್ ಆಸ್ಪತ್ರೆ, ಎಂಜಿ ರಸ್ತೆ ಕಾರವಾರ, ಉತ್ತರ ಕನ್ನಡ
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್ ತಾಣ












Click it and Unblock the Notifications