• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿ; ನವೆಂಬರ್ 7ರಂದು ನೇರ ಸಂದರ್ಶನ

|
Google Oneindia Kannada News

ಕಲಬುರಗಿ, ಅಕ್ಟೋಬರ್ 31; ಕಲಬುರಗಿ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. 20 ರಿಂದ 40 ವರ್ಷದ ವಯೋಮಿತಿಯ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ತರಬೇತಿ ನೀಡಲಾಗುತ್ತದೆ.

ಅರಣ್ಯ ಇಲಾಖೆ ನೇಮಕಾತಿ; 10 ಹುದ್ದೆಗಳಿಗೆ ಅರ್ಜಿ ಹಾಕಿ ಅರಣ್ಯ ಇಲಾಖೆ ನೇಮಕಾತಿ; 10 ಹುದ್ದೆಗಳಿಗೆ ಅರ್ಜಿ ಹಾಕಿ

ಸ್ವಯಂ ಉದ್ಯೋಗ ಪ್ರಾರಂಭಿಸಲು ಆಸಕ್ತಿಯುಳ್ಳ ಜಿಲ್ಲೆಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಗೆ 2022ರ ನವೆಂಬರ್ ಎರಡನೇ ವಾರದಲ್ಲಿ 10 ದಿನಗಳ ಕಾಲ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫಿಲಿಪ್ಸ್‌ನಿಂದ ಬರೋಬ್ಬರಿ 4,000 ಉದ್ಯೋಗ ಕಡಿತ! ಫಿಲಿಪ್ಸ್‌ನಿಂದ ಬರೋಬ್ಬರಿ 4,000 ಉದ್ಯೋಗ ಕಡಿತ!

ಆಸಕ್ತಿಯುಳ್ಳ 20 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವವರು ಕನಿಷ್ಠ ಎಸ್. ಎಸ್. ಎಲ್. ಸಿ. ಉತ್ತೀರ್ಣ/ ಅನುತ್ತೀರ್ಣರಾಗಿರಬೇಕು.

ಕೆಪಿಎಸ್‌ಸಿ ನೇಮಕಾತಿ; ಹೈ-ಕ ಭಾಗದ 6 ಕಾರ್ಮಿಕ ನಿರೀಕ್ಷಕ ಹುದ್ದೆಗಳು ಕೆಪಿಎಸ್‌ಸಿ ನೇಮಕಾತಿ; ಹೈ-ಕ ಭಾಗದ 6 ಕಾರ್ಮಿಕ ನಿರೀಕ್ಷಕ ಹುದ್ದೆಗಳು

ಪರಿಶಿಷ್ಟ ಜಾತಿಯ ಮಹಿಳಾ ಅಭ್ಯರ್ಥಿಗಳು 2022ರ ನವೆಂಬರ್ 7 ರಂದು ಬೆಳಗ್ಗೆ 11 ಗಂಟೆಗೆ ಜಂಟಿ ನಿರ್ದೇಶಕರು, ಸಿಡಾಕ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ (ವಿಭಾಗೀಯ ಕಛೇರಿ) ಸಿಓಇ ಕಟ್ಟಡ, ಸರ್ಕಾರಿ ಬಾಲಕರ ಐಟಿಐ ಆವರಣ, ಎಂ. ಎಸ್. ಕೆ. ಮಿಲ್ ರಸ್ತೆ, ಕಲಬುರಗಿ-585102 ಇಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.

ಅಭ್ಯರ್ಥಿಗಳು ಅವಶ್ಯಕ ದಾಖಲಾತಿಗಳಾದ ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ಪ್ರತಿ, ಜಾತಿ ಪ್ರಮಾಣ ಪತ್ರ ಪ್ರತಿ, ಇತ್ತೀಚಿನ 2 ಭಾವಚಿತ್ರ, ವಿದ್ಯಾಭ್ಯಾಸದ ಅಂಕಪಟ್ಟಿ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9108972833ಗೆ ಸಂಪರ್ಕಿಸಬಹುದು.

ಉಚಿತ ಜೆಸಿಬಿ ಚಾಲನಾ ತರಬೇತಿ; ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ಹಾಗೂ ಜೆಸಿಬಿ ಸಹಯೋಗದಲ್ಲಿ ಗ್ರಾಮಿಣ ಭಾಗದ ನಿರುದ್ಯೊಗಿ ಯುವಕರಿಗೆ 30 ದಿನಗಳ ಜೆಸಿಬಿ ಆಪರೇಟರ್ (ಚಾಲನಾ) ತರಬೇತಿಯನ್ನು ನೀಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವವರಿಗೆ 18 ರಿಂದ 45 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ರಾಜ್ಯದ ಗ್ರಾಮೀಣ ಬಡ ಯುವಕರಾಗಿರಬೇಕು. ಯುವಕರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ, ಇತ್ಯಾದಿ ವಿವರಗಳನ್ನು ಒಳಗೊಂಡ ಅರ್ಜಿಯನ್ನು ನವೆಂಬರ್ 25 ರೊಳಗೆ ಸಲ್ಲಿಸಬೇಕು.

ಅರ್ಜಿಗಳನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ವಿಸ್ತರಣಾ ಕೇಂದ್ರ ಹಸನಮಾಳ, ದಾಂಡೇಲಿ-581325 ವಿಳಾಸಕ್ಕೆ ಅಥವಾ 08284-298547, 8050741744, 9632143217, 9449782425 ವಾಟ್ಸಪ್ ಸಂಖ್ಯೆಗೂ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುತ್ತದೆ.

English summary
Kalaburagi district employment exchange office organized interview for job tanning. Candidates can attend interview on November 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X