ಕಲಬುರಗಿ; ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಬೆಂಗಳೂರು, ಜುಲೈ 17 : ಕಲಬುರಗಿ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ನಡೆಯಲಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆ ಹಾಗೂ ಸಮರ್ಪಕ ವೈದ್ಯಕೀಯ ಸೇವೆಯನ್ನು ಒದಗಿಸಲು ಅನುಕೂಲವಾಗುವಂತೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಶುಶ್ರೂಷಕರು 53, ಫಾರ್ಮಾಸಿಸ್ಟ್ 50, ಲ್ಯಾಬ್ ಟೆಕ್ನಿಷಿಯನ್ 8 ಹುದ್ದೆಗಳನ್ನು ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶುಶ್ರೂಷಕರ ಹುದ್ದೆಗೆ 25,000 ರೂ., ಫಾರ್ಮಾಸಿಸ್ಟ್ ಮತ್ತು ಲ್ಯಾಬ್ ಟೆಕ್ನಿಶಿಯನ್ ಹುದ್ದೆಗಳಿಗೆ ತಲಾ 20,000 ರೂ.ಗಳ ಮಾಸಿಕ ವೇತನ ನಿಗದಿ ಮಾಡಲಾಗಿದೆ. 6 ತಿಂಗಳ ಅವಧಿಗೂ ಮೊದಲೇ ಹುದ್ದೆಗಳು ಭರ್ತಿಯಾದರೆ ತಾತ್ಕಾಲಿಕ ನೇಮಕಾತಿ ರದ್ದುಗೊಳ್ಳಲಿದೆ.

Walk In Interview In Kalaburagi On July 23 And 24

2020ರ ಜುಲೈ 23ರಂದು ಶುಶ್ರೂಷಕರ ಹುದ್ದೆಗೆ ಹಾಗೂ ಜುಲೈ 24 ರಂದು ಫಾರ್ಮಾಸಿಸ್ಟ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಸಂದರ್ಶನ ನಡೆಯುವ ಸಮಯ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆ.

ವಿಳಾಸ : ನೇರ ಸಂದರ್ಶನ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಹಿಂಭಾಗದ ಹೆಚ್. ಐ. ಟಿ ಹಾಲ್‍ನಲ್ಲಿನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 08472-278618 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಮೂಲ, ಜಿರಾಕ್ಸ್ ಶೈಕ್ಷಣಿಕ ದಾಖಲಾತಿ, ಬಯೋಡಾಟಾ ಹಾಗೂ ಪಾಸ್‍ಪೋರ್ಟ ಸೈಜಿನ ಭಾವಚಿತ್ರ ತರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+