ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ ಮೃಗಾಲಯದಲ್ಲಿ ಕೆಲಸ ಖಾಲಿ ಇದೆ, ನ.29ಕ್ಕೆ ನೇರ ಸಂದರ್ಶನ

|
Google Oneindia Kannada News

ಗದಗ, ನವೆಂಬರ್ 24; ಕಾರ್ಯನಿರ್ವಾಹಕ ನಿರ್ದೇಶಕರು ಗದಗ ಮೃಗಾಲಯ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಗದಗ ವಿಭಾಗ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದಾರೆ. ಆಸಕ್ತರು ನವೆಂಬರ್ 29ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಗದಗ ಮೃಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಜೀವಶಾಸ್ತ್ರಜ್ಞ, ಶಿಕ್ಷಣಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಂದು ಜೀವಶಾಸ್ತ್ರಜ್ಞ ಮತ್ತು ಒಂದು ಶಿಕ್ಷಣಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

NTPC ನೇಮಕಾತಿ 2022: 26 ಹುದ್ದೆಗಳಿಗೆ ಅರ್ಜಿ ಆಹ್ವಾನ NTPC ನೇಮಕಾತಿ 2022: 26 ಹುದ್ದೆಗಳಿಗೆ ಅರ್ಜಿ ಆಹ್ವಾನ

Walk In Interview At Gadag Zoo On November 29

ಆಸಕ್ತ ಮತ್ತು ಅರ್ಹರು ನವೆಂಬರ್ 29ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೆಎಸ್‌ಆರ್‌ಟಿಸಿಯ ಈ ನೇಮಕಾತಿ ಆದೇಶ ನಕಲಿ, ಎಚ್ಚರ ಕೆಎಸ್‌ಆರ್‌ಟಿಸಿಯ ಈ ನೇಮಕಾತಿ ಆದೇಶ ನಕಲಿ, ಎಚ್ಚರ

ಸಂದರ್ಶನ ನಡೆಯುವ ವಿಳಾಸ; ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ ವಿಭಾಗ ಕಚೇರಿ.

ಆಯಾ ಹುದ್ದೆಗೆ ಅರ್ಜಿ ಹಾಕಿ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ 0-6 ವರ್ಷದ ಒಳಗಿನ ಮಕ್ಕಳು ಪೋಷಣೆ ಮತ್ತು ರಕ್ಷಣೆಯನ್ನು ಪಡೆಯುತ್ತಿದ್ದಾರೆ.

ಟೀಚರ್ಸ್‌ ಕೋ-ಆಪರೇಟಿವ್ ಬ್ಯಾಂಕ್‌ ನೇಮಕಾತಿ, ಅರ್ಜಿ ಹಾಕಿ ಟೀಚರ್ಸ್‌ ಕೋ-ಆಪರೇಟಿವ್ ಬ್ಯಾಂಕ್‌ ನೇಮಕಾತಿ, ಅರ್ಜಿ ಹಾಕಿ

ಈ ಸಂಸ್ಥೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಯಾ ಹುದ್ದೆ ಖಾಲಿ ಇದ್ದು, ಪ್ರಸ್ತುತ 3 ಜನ ಆಯಾಗಳ ಅವಶ್ಯಕತೆ ಇರುತ್ತದೆ. ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಮಡಿಕೇರಿಯ ಮಡಿಲು ಸರ್ಕಾರಿ ದತ್ತು ಸಂಸ್ಥೆಯ ಅಧೀಕ್ಷಕರಾದ ಪಿ. ಎಸ್. ನಾಗರತ್ನ ಅವರು ತಿಳಿಸಿದ್ದಾರೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಧಾರವಾಡದಲ್ಲಿ ಕೆಲಸ ಖಾಲಿ ಇದೆ; ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆ ಪ್ರಾಯೋಜಿತ ರಿವಾರ್ಡ್ ಯೋಜನೆಯಡಿ ತಾತ್ಕಾಲಿಕವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕನ್ಸಲ್ಟೆಂಟ್- ಜಿ.ಐ.ಎಸ್.; ಎಸ್.ಆರ್.ಎಫ್- ಮಣ್ಣು ವಿಶ್ಲೇಷಣೆ ಹಾಗೂ ಜಿ.ಐ.ಎಸ್., ಯೋಜನಾ ಸಹಾಯಕರು-ಮಣ್ಣು ವಿಶ್ಲೇಷಣೆ, ಜಿ.ಐ.ಎಸ್. ಹಾಗೂ ಪಿ.ಎಂ.ಸಿ.; ಸಹಾಯಕರು- ಮಣ್ಣು ವಿಶ್ಲೇಷಣೆ, ಪಿ.ಎಂ.ಸಿ. ಹಾಗೂ ಹೈಡ್ರಾಲಜಿ ಹುದ್ದೆಗಳನ್ನು ಲಿಖಿತ ಪರೀಕ್ಷೆ, ನೇರ ಸಂದರ್ಶನದ ಮೂಲಕ ತುಂಬಲಾಗುತ್ತದೆ.

ಡಿಸೆಂಬರ್ 1, 2, 3ರಂದು ಲಿಖಿತ ಪರೀಕ್ಷೆ, ಸಂದರ್ಶನ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ ಧಾರವಾಡದ ಕೃಷಿ ವಿವಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

English summary
Gadag zoo organized walk in interview for the biologist and education officer post. Candidates can attend interview on November 29th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X