ಮೂರು ವರ್ಷದಲ್ಲಿ 11,000 ಉದ್ಯೋಗಿಗಳನ್ನು ವಜಾಗೊಳಿಸಲಿರುವ ವೊಡಾಫೋನ್
ನವದೆಹಲಿ, ಮೇ. 16: ಬ್ರಿಟನ್‌ನ ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿ ವೊಡಾಫೋನ್ 11,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ. ಕಂಪನಿಯ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರು ಹೊಸ ಹಣಕಾಸು ವರ್ಷದ ಗಳಿಕೆಯಲ್ಲಿ ಯಾವುದೇ ಬೆಳವಣಿಗೆ ಕಾಣಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಮುಂದಿನ ಮೂರು ವರ್ಷಗಳಲ್ಲಿ 11,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಕಂಪನಿ ಮಂಗಳವಾರ ಮಾಹಿತಿ ನೀಡಿದೆ. ಈ ವಜಾಗೊಳಿಸುವಿಕೆಯು ಕಂಪನಿಯ ಕಾರ್ಯತಂತ್ರದ ಯೋಜನೆಯ ಭಾಗವಾಗಿದೆ. ಇದನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಕಾರ್ಯಗತಗೊಳಿಸಲಾಗುವುದು. ವೊಡಾಫೋನ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಮಾರ್ಗರಿಟಾ ಡೆಲ್ಲಾ ವ್ಯಾಲೆ ಅವರು ಆರ್ಥಿಕ ವರ್ಷದಲ್ಲಿ ಕಂಪನಿ ಕಾರ್ಯಕ್ಷಮತೆಯು ಉತ್ತಮವಾಗಿಲ್ಲದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ಹಣಕಾಸು ವರದಿಯಲ್ಲಿ ಮಾರ್ಗರಿಟಾ ಡೆಲ್ಲಾ ವ್ಯಾಲೆ, "ನಾನು ವೊಡಾಫೋನ್‌ಗಾಗಿ ನನ್ನ ಯೋಜನೆಗಳನ್ನು ಪ್ರಕಟಿಸುತ್ತಿದ್ದೇನೆ. ನಮ್ಮ ಕಾರ್ಯಕ್ಷಮತೆ ಸಾಕಷ್ಟು ಉತ್ತಮವಾಗಿಲ್ಲ. ವೊಡಾಫೋನ್ ಬದಲಾಗಬೇಕು" ಎಂದು ಹೇಳಿದ್ದಾರೆ.
ನಾಲ್ಕು ವರ್ಷಗಳಲ್ಲಿ ಕಂಪನಿಯಲ್ಲಿ ಬದಲಾವಣೆಯನ್ನು ಕಾರ್ಯಗತಗೊಳಿಸಲು, ವೋಡಾಪೋನ್ ಈಗಾಗಲೇ ಕ್ರಿಯಾ ಯೋಜನೆಯನ್ನು ಹೊಂದಿದೆ. ಗ್ರಾಹಕರು, ಸರಳತೆ ಮತ್ತು ಬೆಳವಣಿಗೆ ಈ ಮೂರು ಆದ್ಯತೆಗಳ ಮೇಲೆ ಕಂಪನಿಯ ಕಾರ್ಯತಂತ್ರ ಕೇಂದ್ರೀಕರಿಸಿದೆ.

"ನಾವು ನಮ್ಮ ಸಂಸ್ಥೆಯನ್ನು ಸರಳಗೊಳಿಸುತ್ತೇವೆ. ನಮ್ಮ ಗ್ರಾಹಕರು ನಿರೀಕ್ಷಿಸುವ ಗುಣಮಟ್ಟದ ಸೇವೆಯನ್ನು ನೀಡಲು ಮತ್ತು ವೋಡಾಫೋನ್ ವ್ಯಾಪಾರದ ಕಾರಣದಿಂದ ಮತ್ತಷ್ಟು ಬೆಳವಣಿಗೆಯನ್ನು ಹೆಚ್ಚಿಸಲು ನಾವು ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡುತ್ತೇವೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಗಳ ಸರಳೀಕರಣದೊಂದಿಗೆ ಮೂರು ವರ್ಷಗಳಲ್ಲಿ 11,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಲಾಗಿದೆ" ಎಂದಿದ್ದಾರೆ.
ಗ್ರಾಹಕರ ವಿಷಯದಲ್ಲಿ, ವೊಡಾಫೋನ್ ಮುಂದಿನ ಆರ್ಥಿಕ ವರ್ಷದಲ್ಲಿ ಗ್ರಾಹಕರ ಅನುಭವ ಮತ್ತು ಬ್ರ್ಯಾಂಡ್‌ಗೆ ಗಮನಾರ್ಹ ಹೂಡಿಕೆಗಳನ್ನು ಮರುಹಂಚಿಕೆ ಮಾಡಿದೆ. ಗ್ರಾಹಕ ಮಾರುಕಟ್ಟೆಗಳಲ್ಲಿ ಗೆಲ್ಲಲು, ವೋಡಾಪೋನ್ ಮೂಲಭೂತ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ. ಗ್ರಾಹಕರು ನಿರೀಕ್ಷಿಸುವ ಸರಳ ಮತ್ತು ಉತ್ತಮ ಅನುಭವವನ್ನು ನೀಡಲು ಕಂಪನಿ ಕೆಲಸ ಮಾಡಲಿದೆ.












Click it and Unblock the Notifications