ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ ಬ್ಯಾಂಕಿನಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ

By Mahesh
|
Google Oneindia Kannada News

ಬೆಂಗಳೂರು, ಸೆ. 07: ವಿಜಯ ಬ್ಯಾಂಕಿನಲ್ಲಿ 36 ಪ್ರೊಬೆಷನರಿ ಮ್ಯಾನೇಜರ್ (ಸೆಕ್ಯುರಿಟಿ ಹಾಗೂ ರಾಜ್ ಭಾಷಾ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಂಎಂಜಿ ಸ್ಕೇಲ್ II ಹುದ್ದೆಗಳನ್ನು ವಿಶೇಷ ಕೆಟಗರಿ ಅಡಿಯಲ್ಲಿ ಆರ್ಜಿ ಕರೆಯಲಾಗಿದೆ. ಸೆ. 02ರಂದು ಅರ್ಜಿ ಸ್ವೀಕರಿಸಲಾಗುತ್ತಿದ್ದು ಸೆ. 19ರ ತನಕ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ವಿವರ:
ಒಟ್ಟು ಹುದ್ದೆಗಳ ಸಂಖ್ಯೆ : 36
ಮ್ಯಾನೇಜರ್ ಸೆಕ್ಯುರಿಟಿ : 24 ಹುದ್ದೆಗಳು

* ಎಸ್ ಸಿ : 4
* ಎಸ್ ಟಿ : 2
* ಒಬಿಸಿ : 6
* ಯುಆರ್ :12

ಮ್ಯಾನೇಜರ್ ರಾಜ್ ಭಾಷಾ : 12 ಹುದ್ದೆಗಳು
* ಎಸ್ ಸಿ : 2
* ಎಸ್ ಟಿ : 1
* ಒಬಿಸಿ : 3
* ಯುಆರ್ : 6

ವಯೋಮಿತಿ : ಕನಿಷ್ಠ 20 ವರ್ಷ ಹಾಗೂ ಗರಿಷ್ಠ 45 ವರ್ಷ. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ ವಯೋಮಿತಿ ರಿಯಾಯಿತಿ ಇರುತ್ತದೆ.

ವಿದ್ಯಾರ್ಹತೆ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ, 2ನೇ ಹುದ್ದೆಗೆ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

Vijaya Bank

ಅರ್ಜಿ ಶುಲ್ಕ: ಅಭ್ಯರ್ಥಿಗಳು 300 ರು ಅರ್ಜಿ ಶುಲ್ಕ ಪಾವತಿಸಬೇಕು, ಜೊತೆಗೆ ಸಾಮಾನ್ಯ ವರ್ಗಕ್ಕೆ 50ರು ಪ್ರತಿಕ್ರಿಯೆ ವಿವರ ಅರ್ಜಿ ನೀಡಿದರೆ ಸಾಕು.

ಅರ್ಜಿ ಸಲ್ಲಿಸುವುದು ಹೇಗೆ?: ಆನ್ ಲೈನ್ ಮೂಲಕ ನಿಗದಿತ ಅರ್ಜಿ ಪಡೆದು ತುಂಬಿದ ಅರ್ಜಿಯನ್ನು Application for the post of PROB Manager-Security/ PROB Manager-Rajbhasha 2015-2016 in vijaya Bank ಎಂದು ಕವರ್ ಮೇಲೆ ಬರೆದು ಕೆಳಗಿನ ವಿಳಾಸಕ್ಕೆ ಕಳಿಸಿ

ವಿಜಯ ಬ್ಯಾಂಕ್
ಅಂಚೆ ಪೆಟ್ಟಿಗೆ ಸಂಖ್ಯೆ 5136
ಪ್ರಧಾನ ಅಂಚೆ ಕಚೇರಿ
ಬೆಂಗಳೂರು 560 001

ಸಾಮಾನ್ಯ ಅಂಚೆಯಲ್ಲಿ 24/09/2015ಯೊಳಗೆ ಕಳಿಸಬೇಕು, ಗ್ರಾಮೀಣ ಭಾಗದವರು 28/09/2015ರೊಳಗೆ ಕಳಿಸಬಹುದು.

ಆನ್ ಲೈನ್ ಅರ್ಜಿ ಸಲ್ಲಿಸಲು
* ವಿಜಯ್ ಬ್ಯಾಂಕ್ ವೆಬ್ ಸೈಟ್ ಗೆ ಭೇಟಿ ಕೊಡಿ
* careers ಕ್ಲಿಕ್ ಮಾಡಿ
* ನಿಯಮಾವಳಿಗಳನ್ನು ಓದಿಕೊಂಡು Click Here to Apply Online ಕ್ಲಿಕ್ ಮಾಡಿ
* ಅರ್ಜಿ ಸಲ್ಲಿಸಿದ ಮೇಲೆ ಆನ್ ಲೈನ್ ಅರ್ಜಿಯ ನಮೂನೆಯನ್ನು ಮುದ್ರಿಸಿ ಇಟ್ಟುಕೊಳ್ಳಿ
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ 24/09/2015.
ಈ ಸುದ್ದಿಯ ವಿವರಗಳನ್ನು ಇಂಗ್ಲೀಷ್ ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

(ಒನ್ ಇಂಡಿಯಾ ಸುದ್ದಿ)

English summary
Vijaya Bank has issued notification for the recruitment of 36 Probationary Manager (Security & Rajbhasha) in MMG Scale II vacancies in specialist category . Eligible candidates can apply online from 02-09-2015 to 19-09-2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X