ಇಪಿಎಫ್‌ಓ ನೇಮಕಾತಿ ವಿವರ, 257 ಹುದ್ದೆ

Posted By:
Subscribe to Oneindia Kannada

ಮಡಿಕೇರಿ, ಜೂನ್ 17 : ಕೇಂದ್ರ ಲೋಕಸೇವಾ ಆಯೋಗ ಎಂಪ್ಲೋಯಿಮೆಂಟ್ ಪ್ರೋವಿಡೆಂಟ್ ಫಂಡ್ ಆರ್ಗನೈಸೇಷನ್‌ನಲ್ಲಿ 257 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜೂನ್ 23, 2016 ಕೊನೆ ದಿನ.

ಎನ್ಫೋರ್ಸ್‌ಮೆಂಟ್ ಆಫೀಸರ್ಸ್ / ಅಕೌಂಟ್ಸ್ ಆಫೀಸರ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವೇತನ ಶ್ರೇಣಿ 9,300 ರಿಂದ 34,800. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಕರೆಯಲಾಗುತ್ತದೆ. [BMRCL ನೇಮಕಾತಿ]

upsc

ಒಟ್ಟು ಹುದ್ದೆಗಳು 257 ಹುದ್ದೆಗಳ ಪೈಕಿ ಎಸ್ಸಿ 30, ಎಸ್ಟಿ 6, ಒಬಿಸಿ 84 ಮತ್ತು 21 ಹುದ್ದೆಗಳು ವಿಕಲ ಚೇತನರಿಗೆ ಮೀಸಲು. ಅರ್ಜಿ ಸಲ್ಲಿಸಲು ವಯೋಮಿತಿ 30 ವರ್ಷಗಳು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 23 ಕೊನೆಯ ದಿನ. ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಲು ಜೂನ್, 24 ಕೊನೆ ದಿನ. [ಕೆಪಿಎಸ್ ಸಿ ನೇಮಕಾತಿ ವಿವರಗಳು]

ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಕಾಲ ತರಬೇತಿ ಅವಧಿಯಾಗಿರುತ್ತದೆ. ಅಭ್ಯರ್ಥಿಗಳನ್ನು ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳಿಗೆ ನೇಮಕ ಮಾಡಲು ಅವಕಾಶವಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿಯನ್ನು ಸಂಪರ್ಕಿಸಬಹುದು ಎಂದು ಎಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ವಿಳಾಸ

ಇಂಗ್ಲಿಶ್ ನಲ್ಲಿ ಓದಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Union Public Service Commission (UPSC) invited applications for Enforcement Officers/Accounts Officers in Employees Provident Fund Organisation. June 23, 2016 last date to submit application.
Please Wait while comments are loading...