ತುಮಕೂರು ಜಿಲ್ಲಾ ಪಂಚಾಯಿತಿ ನೇಮಕಾತಿ: ಹೊರಗುತ್ತಿಗೆ ಆಧಾರದಲ್ಲಿ 25 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ತುಮಕೂರು ಜಿಲ್ಲಾ ಪಂಚಾಯಿತಿಯ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಮತ್ತು (NRETP) ಯೋಜನೆ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹೊರಗುತ್ತಿದೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೆ. ವಿಸ್ಡಂ ಸೆಕ್ಯುರಟಿ ಸರ್ವಿಸ್, ಬೆಂಗಳೂರು ಇವರಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು, ಒಟ್ಟು 25 ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 2 ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ಹುದ್ದೆಗಳು, ಸಂಬಳ, ವಿದ್ಯಾರ್ಹತೆ ವಿವರ:
1) ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ (DPM): 1 ಹುದ್ದೆ, ಮಾಸಿಕ ಸಂಬಳ - 36,000 ರೂಪಾಯಿ, ಕನಿಷ್ಠ 5 ವರ್ಷ ಅನುಭವ, ಯಾವುದೇ ಸ್ನಾತಕೋತ್ತರ ಪದವಿ ಪಡೆದವರು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ವಯೋಮಿತಿ ಗರಿಷ್ಠ 45 ವರ್ಷಗಳಾಗಿದೆ.
2) ಕಚೇರಿ ಸಹಾಯಕ: 1 ಹುದ್ದೆ, ಮಾಸಿಕ ಸಂಬಳ - 20,000, ಮೂರು ವರ್ಷ ಅನುಭವ, ಗರಿಷ್ಠ 45 ವರ್ಷ, ಯಾವುದೇ ಪದವಿ ಮುಗಿಸಿರಬೇಕು. ಅನುಭವ ಕನಿಷ್ಠ 3 ವರ್ಷ, ವಯೋಮಿತಿ ಗರಿಷ್ಠ 45 ವರ್ಷ.
3) ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ (TPM): 2 ಹುದ್ದೆಗಳು (ತಿಪಟೂರು, ಚಿಕ್ಕನಾಯಕನಹಳ್ಳಿ), ಮಾಸಿಕ ಸಂಬಳ - 28,000, ಯಾವುದೇ ಸ್ನಾತಕೋತ್ತರ ಪದವಿ, ಕನಿಷ್ಠ 5 ವರ್ಷ ಅನುಭವ, ವಯೋಮಿತಿ ಗರಿಷ್ಠ 45 ವರ್ಷ.
4) ಕ್ಲಸ್ಟರ್ ಸೂಪರ್ ವೈಸರ್ : 1 ಹುದ್ದೆ (ತಿಪಟೂರು), ಮಾಸಿಕ ಸಂಬಳ - 18,000, ಮೂರು ವರ್ಷ ಅನುಭವ, ಗರಿಷ್ಠ 45 ವರ್ಷ, ಯಾವುದೇ ಪದವಿ ಮುಗಿಸಿರಬೇಕು. ಅನುಭವ ಕನಿಷ್ಠ 3 ವರ್ಷ, ವಯೋಮಿತಿ ಗರಿಷ್ಠ 45 ವರ್ಷ.
5) ಕ್ಲಸ್ಟರ್ ಸೂಪರ್ ವೈಸರ್ : 4 ಹುದ್ದೆಗಳು (ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತುಮಕೂರು), ಮಾಸಿಕ ಸಂಬಳ - 18,000, ಮೂರು ವರ್ಷ ಅನುಭವ, ಗರಿಷ್ಠ 45 ವರ್ಷ, ಯಾವುದೇ ಪದವಿ ಮುಗಿಸಿರಬೇಕು. ವಯೋಮಿತಿ ಗರಿಷ್ಠ 45 ವರ್ಷ.
6) ಬ್ಲಾಕ್ ಟೆಕ್ನಿಕಲ್ ಕೋ-ಆರ್ಡಿನೇಟರ್ (ಪ್ರಮೋಷನ್): 1 ಹುದ್ದೆ (ಮಧುಗಿರಿ), ಮಾಸಿಕ ಸಂಬಳ - 35,000, ಯಾವುದೇ ಸ್ನಾತಕೋತ್ತರ ಪದವಿ, ಅನುಭವ ಕನಿಷ್ಠ 3 ವರ್ಷ, ವಯೋಮಿತಿ ಗರಿಷ್ಠ 45 ವರ್ಷ.
7) ಬ್ಲಾಕ್ ಟೆಕ್ನಿಕಲ್ ಕೋ-ಆರ್ಡಿನೇಟರ್ (ವ್ಯವಹಾರ): 1 ಹುದ್ದೆ (ಶಿರಾ), ಮಾಸಿಕ ಸಂಬಳ - 35,000, ಯಾವುದೇ ಸ್ನಾತಕೋತ್ತರ ಪದವಿ, ಅನುಭವ ಕನಿಷ್ಠ 3 ವರ್ಷ, ವಯೋಮಿತಿ ಗರಿಷ್ಠ 45 ವರ್ಷ.
8) ಸಾವಯವ ವ್ಯವಸಾಯ ಬ್ಲಾಕ್ ಕೋ-ಆರ್ಡಿನೇಟರ್: 1 ಹುದ್ದೆ (ಶಿರಾ), ಮಾಸಿಕ ಸಂಬಳ - 35,000, ಕೃಷಿ/ತೋಟಗಾರಿಕೆ/ ರೇಷ್ಮೆ ವಿಷಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ, ಅನುಭವ ಕನಿಷ್ಠ 3 ವರ್ಷ, ವಯೋಮಿತಿ ಗರಿಷ್ಠ 45 ವರ್ಷ.
9) ಸಾವಯವ ವ್ಯವಸಾಯ ಕ್ಲಸ್ಟರ್ ಕೋ-ಆರ್ಡಿನೇಟರ್: 1 ಹುದ್ದೆ (ಚಿಕ್ಕನಾಯನಕಹಳ್ಳಿ), ಮಾಸಿಕ ಸಂಬಳ - 35,000, ಕೃಷಿ/ತೋಟಗಾರಿಕೆ/ ರೇಷ್ಮೆ ವಿಷಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ, ಅನುಭವ ಕನಿಷ್ಠ 3 ವರ್ಷ, ವಯೋಮಿತಿ ಗರಿಷ್ಠ 45 ವರ್ಷ.
10) ಬ್ಲಾಕ್ ಮ್ಯಾನೇಜರ್ (ಕೃಷಿ ಜೀವನೋಪಾಯಗಳು) : 7 ಹುದ್ದೆಗಳು (ಚಿಕ್ಕನಾಯನಕಹಳ್ಳಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುರುವೇಕೆರೆ, ತಿಪಟೂರು), ಮಾಸಿಕ ಸಂಬಳ - 25,000, ಕೃಷಿ/ತೋಟಗಾರಿಕೆ/ ರೇಷ್ಮೆ ವಿಷಯಕ್ಕೆ ಸಂಬಂಧಿಸಿದಂತೆ ಪದವಿ/ಸ್ನಾತಕೋತ್ತರ ಪದವಿ, ವಯೋಮಿತಿ ಗರಿಷ್ಠ 45 ವರ್ಷ. ಅನುಭವ ಕನಿಷ್ಠ 3-5 ವರ್ಷ
11) ಬ್ಲಾಕ್ ಮ್ಯಾನೇಜರ್ (ಕೃಷಿಯೇತರ ಜೀವನೋಪಾಯಗಳು) : 2 ಹುದ್ದೆಗಳು (ಗುಬ್ಬಿ, ತಿಪಟೂರು), ಮಾಸಿಕ ಸಂಬಳ - 25,000, ಯಾವುದೇ ಸ್ನಾತಕೋತ್ತರ ಪದವಿ, ಅನುಭವ ಕನಿಷ್ಠ 3 ವರ್ಷ, ವಯೋಮಿತಿ ಗರಿಷ್ಠ 45 ವರ್ಷ.
https://jobsksrlps.karnataka.gov.in/ ಈ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.












Click it and Unblock the Notifications